ಬೆಂಗಳೂರು: ಇಂದಿನಿಂದ ರಾಜ್ಯಾಧ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯುತ್ತಿದೆ. ಪೋಷಕರು ತಮ್ಮ 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಪೊಲಿಯೋ ಹನಿ ಹಾಕಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು.
ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಜೊತೆ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತಾದ್ಯಂತ ಪೋಲಿಯೋ ಲಸಿಕೆ ಹಾಕುವುದು ಮತ್ತು ಅದರ ಕುರಿತು ಅಭಿಯಾನ ನಡೆಯುತ್ತಿದೆ. ಸತತ ಜಾಗೃತಿಯಿಂದಾಗಿ ಪೋಲಿಯೋ ರೋಗವನ್ನು ನಿಯಂತ್ರಿಸಲಾಗಿದೆ. 1978 ರಿಂದ ಈ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು ಕಳೆದ 14 ವರ್ಷಗಳಿಂದ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ಆದರೂ ಕೂಡ ಜಾಗೃತಿಯಿಂದ ಇರಬೇಕಾಗುತ್ತದೆ. ಯಾಕೆಂದರೆ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ಈಗಲೂ ಕೂಡ ಪೋಲಿಯೋ ಕಾಣಿಸಿಕೊಳ್ಳುತ್ತಿದೆ. ಈ ಎರಡು ಹನಿ ಬಹಳ ಮುಖ್ಯ. ತಪ್ಪದೇ ಎಲ್ಲ ಮಕ್ಕಳಿಗೂ ಹಾಕಿಸಬೇಕು ಎಂದರು.
ನಾಳೆಯಿಂದ 2-3 ದಿನ ಮನೆಮನೆಗೆ ತೆರಳಿ 0-5 ವರ್ಷದ ಮಕ್ಕಳಿಗೆ ಲಸಿಕೆ ಹಾಕಲಾಗುವುದು. 62,40,114 ಮಕ್ಕಳ ಗುರಿ ಇದೆ. %100 ಸಾಧನೆ ಮಾಡುತ್ತೇವೆ. 33258 ಭೂತ್ ಗಳು, 1030 ಸಂಚಾರಿ ತಂಡಗಳು, 1096 ಟ್ರಾನ್ಸಿಟ್ ತಂಡಗಳು, 113115 ಲಸಿಕಾ ಕಾರ್ಯಕರ್ತರು, 7322 ಮೇಲ್ವಿಚಾರಕರನ್ನು ರಾಜ್ಯಾದ್ಯಂತ ನೇಮಿಸಲಾಗಿದೆ ಎಂದರು.
Nearby Vaccination centre Karnataka ಆಪ್ ಮೂಲಕ ಹತ್ತಿರದ ಲಸಿಕಾ ಕೇಂದ್ರ ಸಂಪರ್ಕಿಸಬಹುದು. ಸಂಪೂರ್ಣ ಸುರಕ್ಷಿತವಾಗಿದ್ದು ವದಂತಿಗಳಿಗೆ ಕಿವಿಗೊಡದೆ ಮಕ್ಕಳಿಗೆ ಲಸಿಕೆ ಹಾಕಿಸಿ ಎಂದರು.
ಸೊರಬದ ಉಳವಿಯಲ್ಲಿ ನೂತನ KSRTC ಬಸ್ ನಿಲ್ದಾಣ, ಆಸ್ಪತ್ರೆ ಕ್ವಾಟ್ರಾಸ್ ನಿರ್ಮಾಣ: ಸಚಿವ ಮಧು ಬಂಗಾರಪ್ಪ
ಕೊಲ್ಲೂರು ದೇವಸ್ಥಾನ ಹೆಸರಲ್ಲಿ ನಕಲಿ ವೆಬ್ ಸೈಟ್ ತೆರೆದು ವಂಚಿಸಿದ ಆರೋಪಿ ಅರೆಸ್ಟ್








