ಶಿವಮೊಗ್ಗ: ಇಂದು ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಗರದ ಶಿವಮೊಗ್ಗ ರಸ್ತೆಯ ತ್ಯಾಗರ್ತಿ ಕ್ರಾಸ್ ಬಳಿಯಿರುವ ಮರ್ಕಜ್ ಶಾಲೆಯ ಮಕ್ಕಳು ಕವ್ವಾಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವುದರ ಜೊತೆಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕವ್ವಾಲಿ ಸ್ಪರ್ಧೆಯಲ್ಲಿ ಮರ್ಕಜ್ ಶಾಲೆಯ ತಂಡದಲ್ಲಿ ಮಹಮ್ಮದ್ ಜಿಯಾನ್, ಮುಹಮ್ಮದ್ ಆಬಿದೀನ್, ಆಫೀಯಾ ಶಫೀನಾ, ಸನಾ ಬೇಗ್, ಉಮ್ಮೆ ಅಮ್ಮರಾ, ಹಾಗೂ ಆಶ್ಮಿಯಾ ಸಯೀದಾ ಭಾಗವಹಿಸಿದ್ದರು.

ಇದೇ ವಿದ್ಯಾರ್ಥಿಗಳು ಸಾಗರದಲ್ಲಿ ನಡೆದ ತಾಲ್ಲೂಕು ಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಈಗ ಜಿಲ್ಲಾಮಟ್ಟದಲ್ಲೂ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಮರ್ಕಜ್ ಶಾಲೆಗೆ ಸಾಗರ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಮತ್ತು ಈ ಯಶಸ್ಸಿಗೆ ಸಹಕರಿಸಿದ ಶಿಕ್ಷಕರಿಗೂ, ಪ್ರೋತ್ಸಾಹಿಸಿದ ಪೋಷಕರಿಗೂ, ಶಾಲಾ ಮುಖ್ಯ ಉಪಾಧ್ಯಾಯರು ಮತ್ತು ಆಡಳಿತ ಮಂಡಳಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ; ರಫೀಕ್ ಬ್ಯಾರಿ, ಸಾಗರ








