ಬೆಂಗಳೂರು: 2025-26ನೇ ಸಾಲಿಗೆ ಶುಚಿ ಕಾರ್ಯಕ್ರಮದ ಅಡಿಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಗಳನ್ನು ಜಿಲ್ಲಾ ಹಂತದಲ್ಲಿಯೇ ಖರೀದಿಸಲು ಮತ್ತು ವಿತರಣೆ ಮಾಡಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 2025-26 ನೇ ಸಾಲಿನಲ್ಲಿ ಶುಚಿ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸರ್ಕಾರಿ, ಸರ್ಕಾರಿ ಅನುದಾನಿತ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಹಾಸ್ಟೆಲ್‌ಗಳಲ್ಲಿ ನೋಂದಾಯಿಸಲಾದ ಎಲ್ಲಾ ಹದಿಹರೆಯದ ಹೆಣ್ಣು ಮಕ್ಕಳಿಗೆ ವಿತರಿಸಲು 2,35,74,084 ಯೂನಿಟ್ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು (ಒಂದು ಯೂನಿಟ್ = 10 ಪ್ಯಾಡ್‌ಗಳು) ಪ್ರತಿ ಯುನಿಟ್‌ಗೆ ಅಂದಾಜು ರೂ.30.47/- ರಂತೆ ಒಟ್ಟು ರೂ.71.83 (ಎಪ್ಪತ್ತೊಂದು ಕೋಟಿ ಎಂಭತ್ತ ಮೂರು ಲಕ್ಷ ರೂಪಾಯಿಗಳು ಮಾತ್ರ) ಕೋಟಿ ಮೊತ್ತದಲ್ಲಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ (ಕೆಎಸ್‌ಎಂಎಸ್‌ಸಿಎಲ್) ಮೂಲಕ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮ ಹಾಗೂ ನಿಯಮಾವಳಿಗಳನ್ವಯ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ ಎಂದಿದ್ದಾರೆ.
ಶುಚಿ ಕಾರ್ಯಕ್ರಮಕ್ಕೆ 2025-26ನೇ ಸಾಲಿಗೆ ಲೆ.ಶೀ.2210-01- 200-0-11 ರಡಿ 1, 2 ಮತ್ತುನ 3ನೇ ತ್ರೈಮಾಸಿಕ ಕಂತಿನ ಅನುದಾನವಾಗಿ ಒಟ್ಟು ರೂ.15.00 ಕೋಟಿಗಳನ್ನು ಬಿಡುಗಡೆಗೊಳಿಸಲಾಗಿರುತ್ತದೆ. ಸರಕು ಹಾಗೂ ಸೇವೆಗಳ ಸಂಗ್ರಹಣೆಗೆ ರೂ.10.00 ಕೋಟಿಗಳ ವರೆಗೆ ಆರ್ಥಿಕ ಇಲಾಖೆಯ ಅನುಮೋದನೆ ಇದೆಯೆಂದು ಭಾವಿಸಿ ಆಡಳಿತಾತ್ಮಕ ಅನುಮೋದನೆಯನ್ನು (ಕೆ.ಟಿ.ಪಿ.ಪಿ. ನಿಯಮಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಹಾಗೂ ಆಯವ್ಯಯ ಲಭ್ಯತೆಗೊಳಪಟ್ಟು) ಇಲಾಖಾ ಕಾರ್ಯದರ್ಶಿಯವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಶಾಲಾ ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಗಳನ್ನು ವಿತರಿಸಲು ಆಗಸ್ಟ್ 2025 ರಿಂದ ದಾಸ್ತಾನು ಕೊರತೆ ಇರುವುದಾಗಿ ಹಾಗೂ KSMSCL ನಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಸರಬರಾಜು ಪ್ರಾರಂಭವಾಗುವವರವಿಗೂ ಮಧ್ಯಂತರ ಅವಧಿಗೆ 6 ರಿಂದ 10ನೇ ತರಗತಿ ಹಾಗೂ ಪದವಿಪೂರ್ವ ಹೆಣ್ಣು ಮಕ್ಕಳು ಒಟ್ಟು 19,64,507 ಹದಿಹರೆಯದ ಹೆಣ್ಣು ಮಕ್ಕಳಿಗೆ 3 ತಿಂಗಳ ಅವಧಿಗೆ ಸ್ಯಾನಿಟರಿ ನ್ಯಾಪ್ಲಿನ್ ಪ್ಯಾಡ್‌ಗಳನ್ನು ಅಂದಾಜು ಮೊತ್ತ ರೂ. 101147 ಲಕ್ಷಗಳಲ್ಲಿ ಕೆಳಕಂಡಂತೆ ಜಿಲ್ಲಾ ಹಂತದಲ್ಲಿ ಖರೀದಿಸಿ, ವಿತರಣೆ ಮಾಡಲು ಆಯುಕ್ತರು, ಆಕುಕ (ಸೇವೆಗಳು) ಇವರು ಕೋರಿರುತ್ತಾರೆ ಎಂದಿದ್ದಾರೆ.
ವಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2025-26 ನೇ ಸಾಲಿಗೆ ಶುಚಿ ಕಾರ್ಯಕ್ರಮದಡಿ 5 ರಿಂದ 10ನೇ ತರಗತಿ ಹಾಗೂ ಪದವಿಪೂರ್ವ ಹೆಣ್ಣು ಮಕ್ಕಳು ಒಟ್ಟು 19,64,507 ಹದಿಹರೆಯದ ಹೆಣ್ಣು ಮಕ್ಕಳಿಗೆ 3 ತಿಂಗಳ ಅವಧಿಗೆ ಅಗತ್ಯವಿರುವ ಸ್ಯಾನಿಟರಿ ಪ್ಯಾಡ್‌ಗಳನ್ನು ರೂ. 10.00 ಕೋಟಿಗಳಲ್ಲಿ ಆಯಾ ಜಿಲ್ಲೆಗಳ ಹಂತದಲ್ಲಿ ಸ್ಥಳೀಯ ಸಂಗ್ರಹಣೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮ ಹಾಗೂ ನಿಯಮಾವಳಿಗಳನ್ವಯ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಆಇ 3 ಟಿ.ಎಫ್.ಪಿ 2025, ದಿನಾಂಕ: 24.09.2025 ರಲ್ಲಿ ಇಲಾಖಾ ಕಾರ್ಯದರ್ಶಿಯವರಿಗೆ ನೀಡಲಾಗಿರುವ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಯನ್ವಯ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ: ಒಂದು ರೈಲು ಸಂಚಾರ ಸ್ಥಗಿತ








