ಬೆಂಗಳೂರು: ಇಂದು ಹಿರಿಯ ಪತ್ರಕರ್ತರ ದೊಡ್ಡಬೊಮ್ಮಯ್ಯ(63) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಸಂತಾಪ ಸೂಚಿಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಬೆಳಗಾವಿ ಅಧಿವೇಶನ ಮುಗಿಸಿ ಬೆಂಗಳೂರಿಗೆ ಇಂದು ಬೆಳಿಗ್ಗೆಯಷ್ಟೆ ಬಂದಿಳಿದಿದ್ದ ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ (63) ಹೃದಯಾಘಾತದಿಂದ ಮೃತಪಟ್ಟಿದ್ದು,ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಎಂದು ತಿಳಿಸಿದ್ದಾರೆ.
ಕೆಯುಡಬ್ಲ್ಯೂಜೆ ಸಂತಾಪ:
ಸಂಜೆವಾಣಿ, ಇಂದುಸಂಜೆ ಪತ್ರಿಕೆ ವರದಿಗಾರರಾಗಿದ್ದ, ಪ್ರೆಸ್ ಕ್ಲಬ್ ನಲ್ಲೂ ಹಲವಾರು ಬಾರಿ ಪದಾಧಿಕಾರಿಯಾಗಿ ಕ್ರೀಯಾಶೀಲ ಸಂಘಟಕರಾಗಿದ್ದ ದೊಡ್ಡಬೊಮ್ಮಯ್ಯ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(KUWJ)ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಂತಾಪ ವ್ಯಕ್ತಪಡಿಸಿದ್ದಾರೆ.








