ಬೆಂಗಳೂರು : ರಾಜ್ಯದ ಖಾಸಗಿ ಅನುದಾನಿತ ಕಾಲೇಜುಗಳ ಸಿಬ್ಬಂದಿಗಳಿಗೆ ರಜೆ (ವಿಶೇಷ ಸಾಂರ್ಭಿಕ ರಜೆ) ಸೌಲಭ್ಯಗಳನ್ನು ಮಂಜೂರು ಮಾಡುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಖಾಸಗಿ ಅನುದಾನಿತ ಕಾಲೇಜುಗಳ ಸಿಬ್ಬಂದಿಗಳಿಗೆ ರಜೆ (ಶಿಶು ಪಾಲನಾ ರಜೆ) ಸೌಲಭ್ಯಗಳನ್ನು ಮಂಜೂರು ಮಾಡುವ ಕುರಿತು ಸರ್ಕಾರವನ್ನು ಉಲ್ಲೇಖ(1)ರಲ್ಲಿ ಕೋರಲಾಗಿತ್ತು.
ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧನಾ ಸಿಬ್ಬಂದಿಗಳಿಗೆ ಶಿಶು ಪಾಲನಾ ರಜೆಯನ್ನು ನೀಡಬೇಕಾದರೆ ಸಂಬಂಧಿತ ಬೋಧಕರ ರಜೆ ಅವಧಿಯಲ್ಲಿ ಪರ್ಯಾಯ ಬೋಧಕ ವ್ಯವಸ್ಥೆಯನ್ನು ಮಾಡಿ ಅದಕ್ಕೆ ತಗಲುವ ವೆಚ್ಚವನ್ನು ತನ್ನ ಸ್ವಂತ ಸಂಪನ್ಮೂಲದಿಂದ ಭರಿಸಿದ್ದಲ್ಲಿ ಸದರಿ ಪ್ರಸ್ತಾವನೆಯನ್ನು ಒಪ್ಪಬಹುದಾಗಿದೆ ಎಂದು ನಿರ್ದೇಶಿಸಿದ್ದು, ಇದನ್ನು ತಮ್ಮ ಕಛೇರಿ ವ್ಯಾಪ್ತಿಯ ಖಾಸಗಿ ಅನುದಾನಿತ ಕಾಲೇಜುಗಳ ಗಮನಕ್ಕೆ ತರಲು ಈ ಮೂಲಕ ತಿಳಿಸಲಾಗಿದೆ.









