ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಕೊಡಕಣಿ ಬಳಿಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ. ಒಂಟಿ ಸಲಗ ಸಾಗಿದಂತ ಮಾರ್ಗದಲ್ಲಿ ಅಲ್ಲಲ್ಲಿ ರೈತರ ಬೆಳೆಯನ್ನು ನಾಶ ಪಡಿಸಿರೋದಾಗಿ ಹೇಳಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದೆ. ಕೆಲ ದಿನಗಳ ಹಿಂದೆ ಉಳವಿ ಹೋಬಳಿಯಲ್ಲಿ ಕಾಣಿಸಿಕೊಂಡಿದ್ದಂತ ಕಾಡಾನೆಗಳು, ಮರಳಿ ಬಂದ ದಾರಿಯಲ್ಲೇ ಸಾಗುತ್ತಿದ್ದರೇ, ಅತ್ತಿಂದಲೇ ಒಂಟಿ ಸಲಗವೊಂದು ಸೊರಬ ತಾಲ್ಲೂಕಿಗೆ ಎಂಟ್ರಿಯಾಗಿದೆ.
ಕಳೆದ ರಾತ್ರಿ 2.30ಯಿಂದ 3 ಗಂಟೆಯ ಸುಮಾರಿಗೆ ತೋಗರ್ಸಿ ಬಳಿಯ ಹರಿಗೆ, ಕೋಡಿಹಳ್ಳಿ ಎನ್ನುವಂತ ಊರುಗಳಲ್ಲಿ ಕಾಣಿಸಿಕೊಂಡು, ಬಳಿಕ ಸೊರಬದ ಕೊಡಕಣಿಗೆ ಮರಳಿದೆ. ಬೆಳಗಿನ ಜಾವ 6 ಗಂಟೆಯ ಹಾಗೆ ಕೊಡಕಣಿಯ ರೈತರು ನೋಡಿದ್ದಾರೆ ಎಂಬುದಾಗಿ ಅರಣ್ಯ ಇಲಾಖೆಯಿಂದ ಮಾಹಿತಿ ತಿಳಿದು ಬಂದಿದೆ.
ರೈತರ ಮಾಹಿತಿ ಆಧರಿಸಿ ಸೊರಬದ ಅರಣ್ಯ ಇಲಾಖೆಯಿಂದ ಕೊಡಕಣಿ ಬಳಿಯಲ್ಲಿ ಥರ್ಮಲ್ ಡ್ರೋನ್ ಮೂಲಕ ಒಂಟಿ ಸಲಗ ಪತ್ತೆ ಹಚ್ಚೋದಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೇ ಅದು ಸಾಧ್ಯವಾಗಿಲ್ಲ. ಸದ್ಯ ಕೊಡಕಣಿ, ಪುರ ಭಾಗದಲ್ಲಿ ಒಂಟಿ ಸಲಗ ಇರುವುದಾಗಿ ಹೇಳಲಾಗುತ್ತಿದೆ. ಹೀಗಾಗಿ ಆ ಭಾಗದ ರೈತರು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಮತ್ತೊಂದೆಡೆ ಉಳವಿ ಹೋಬಳಿಯ ದೂಗೂರು, ಕಾನಹಳ್ಳಿ, ಕೈಸೋಡಿ, ಬರಗಿಗೆ ಬಂದಿದ್ದಂತ ಜೋಡಿ ಕಾಡಾನೆಗಳು ಸದ್ಯ ಗುತ್ತನಹಳ್ಳಿ, ಕುಂದೂರು ಕಡೆಯಲ್ಲಿ ಇರುವುದಾಗಿ ಹೇಳಲಾಗುತ್ತಿದೆ. ಅವುಗಳನ್ನು ಪತ್ತೆ ಹಚ್ಚಿ ಬಂದ ಕಡೆಗೆ ಓಡಿಸೋ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯಿಂದ ಮುಂದುವರೆಸಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…
ರಾಜ್ಯದಲ್ಲಿ BPL ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ: ಸಚಿವ ಕೆ.ಹೆಚ್ ಮುನಿಯಪ್ಪ








