ಬೆಳಗಾವಿ ಸುವರ್ಣಸೌಧ: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಸುವರ್ಣ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂದೆ “ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ” ಗಳ ಲೋಕಾರ್ಪಣೆ ನೆರವೇರಿಸಿದರು.
“ದೂರದ ಹಳ್ಳಿಗೂ ಹತ್ತಿರದ ಆರೈಕೆ”
- ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ರವರಿಂದ ದಿನಾಂಕ: 19-12-2025 ರಂದು 10:00 ಗಂಟೆಗೆ, ಸುವರ್ಣ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂದೆ “ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ” ಗಳ ಲೋಕಾರ್ಪಣೆ ಮಾಡಲಿದ್ದಾರೆ.
- ನಿಮ್ಮ ಆರೋಗ್ಯ ನಮ್ಮ ಆದ್ಯತೆ” ಆಶಯದೊಂದಿಗೆ ಸಮಾಜದ ಪ್ರತಿಯೊಬ್ಬ ನಾಗರೀಕರಿಗೂ ಗುಣಮಟ್ಟ ಆರೋಗ್ಯ ಸೇವೆಗಳನ್ನು ನೀಡುವ ಹಲವು ಉಪಕ್ರಮಗಳನ್ನು ಕಾಲಕಾಲಕ್ಕೆ ಸರ್ಕಾರವು ರೂಪಿಸಿದೆ.
- ಸಂಪರ್ಕರಹಿತ ಪ್ರದೇಶಗಳು, ದುರ್ಗಮ ಪ್ರದೇಶಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಮನೆಯ ಬಾಗಿಲಲ್ಲೇ ಆರೋಗ್ಯ ಸೇವೆಗಳನ್ನು ನೀಡುವ ಉದ್ದೇಶದಿಂದ 81 “ಸಂಚಾರಿ ಆರೋಗ್ಯ ಘಟಕ” ಗಳನ್ನು ಪ್ರಾರಂಭಿಸಲಾಗುವುದು.
- ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 49 ಸಂಚಾರಿ ಆರೋಗ್ಯ ಘಟಕಗಳನ್ನು ಮತ್ತು ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅನುದಾನದಡಿಯಲ್ಲಿ 32 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಲ್ಲಿ ಅನುಷ್ಟಾನಗೊಳಿಸಲಾಗುವುದು.
- ಸಂಚಾರಿ ಆರೋಗ್ಯ ಘಟಕಗಳ ಮೂಲಕ ಪ್ರಾಥಮಿಕ ಆರೋಗ್ಯ ಸೇವೆಗಳು, ಸಮುದಾಯ ಆರೈಕೆ ಸೇವೆಗಳು, ರೆಫರಲ್ ಸೇವೆಗಳು, ರಾಷ್ಟ್ರೀಯ ಹಾಗೂ ರಾಜ್ಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಟಾನ ಹಾಗೂ ಇತರೆ ಸೇವೆಗಳನ್ನು ಒದಗಿಸಲಾಗುವುದು.
- ಜಿಲ್ಲೆಯ ಭೌಗೋಳಿಕ ಪರಿಸ್ಥಿತಿ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲೆಯ ಅಗತ್ಯತೆಗೆ ಅನುಗುಣವಾಗಿ ವಿಕೇಂದಿಕೃತ ವ್ಯವಸ್ಥೆಯಲ್ಲಿ ಕ್ರಿಯಾಯೋಜನೆಯನ್ನು ರೂಪಿಸಿ ಸಂಚಾರಿ ಆರೋಗ್ಯ ಘಟಕಗಳನ್ನು ಕಾರ್ಯಾಚರಣೆ ಮಾಡಲಾಗುವುದು.
- ತುರ್ತು ಆರೋಗ್ಯ ಪರಿಸ್ಥಿತಿಯ ಪರಿಣಾಮಕಾರಿ ನಿರ್ವಹಣೆಗೆ ಸದರಿ ಸಂಚಾರಿ ಆರೋಗ್ಯ ಘಟಕಗಳನ್ನು ಬಳಸಿಕೊಳ್ಳಲಾಗುವುದು.
- ಸಂಚಾರಿ ಆರೋಗ್ಯ ಘಟಕಗಳನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಟಾನಗೊಳಿಸಲಾಗುತ್ತಿದ್ದು, ವಾಹನವನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲಾಗುವುದು, ಮಾನವ ಸಂಪನ್ಮೂಲಗಳಾದ ಎಂ.ಬಿ.ಬಿ.ಎಸ್ ವೈದ್ಯರುಗಳು, ಶುಶ್ರೂಷಕ / ಕಿ ಯರು, ಪ್ರಯೋಗ ಶಾಲಾ ತಂತ್ರಜ್ಞರುಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗಿದ್ದು ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಅವಶ್ಯಕ ಮೂಲಭೂತ ಆರೋಗ್ಯ ಸಲಕರಣೆಗಳು ಮತ್ತು ಉಪಭೋಗ್ಯ ವಸ್ತುಗಳು ಹಾಗೂ ತುರ್ತು ಪರಿಸ್ಥಿತಿಯ ನಿರ್ವಹಣೆಗೆ ಅಗತ್ಯವಿರುವ ಜೀವನಾವಶ್ಯಕ ಔಷಧಿಗಳೊಂದಿಗೆ ಸಜ್ಜುಗೊಳಿಸಲಾಗಿದೆ.
- ಸಂಚಾರಿ ಆರೋಗ್ಯ ಘಟಕವು ಕನಿಷ್ಠ 2-3 ಆಯ್ದ ದುರ್ಗಮ ಹಾಗೂ ಸಂಪರ್ಕ ರಹಿತ ಹಳ್ಳಿಗಳಿಗೆ ಕ್ರಿಯಾ ಯೋಜನೆಯನ್ನು ರೂಪಿಸಿ ನಿರ್ಧಿಷ್ಟ ದಿನಾಂಕ ಮತ್ತು ಸಮಯದಂದು ಅಲ್ಲಿಯ ಸ್ಥಳೀಯರಿಗೆ ಮುಂಗಡವಾಗಿ ತಿಳಿಸಿ ತೆರಳಿ ಸೇವೆಯನ್ನು ಒದಗಿಸಲಾಗುವುದು.
- ಪ್ರತಿ ಸಂಚಾರಿ ಆರೋಗ್ಯ ಘಟಕಗಳನ್ನು ಮಾಸಿಕ ರೂ. 1.92 ಲಕ್ಷಗಳ ಅನುದಾನದಲ್ಲಿ ಅನುಷ್ಟಾನಗೊಳಿಸಲಾಗುವುದು. ಇದರಿಂದಾಗಿ ಒಟ್ಟಾರೆ ವಾರ್ಷಿಕ ಅಂದಾಜು ರೂ. 1686.24 ಲಕ್ಷಗಳ ಅನುದಾನವನ್ನು ಸರ್ಕಾರವು ವೆಚ್ಚ ಮಾಡಲಿದೆ.
- ಜಿಲ್ಲಾವಾರು ಹಂಚಿಕೆ ಮಾಡಲಾದ ಸಂಚಾರಿ ಘಟಕಗಳ ವಿವರ:
| ಕ್ರ.ಸಂ | ಜಿಲ್ಲೆಯ ಹೆಸರು | ಸಂಚಾರಿ ಆರೋಗ್ಯ ಘಟಕಗಳ ಸಂಖ್ಯೆ |
| 1. | ಬಾಗಲಕೋಟೆ | 2 |
| 2. | ಬಳ್ಳಾರಿ | 1 |
| 3. | ಬೀದರ್ | 1 |
| 4. | ಬೆಳಗಾವಿ | 4 |
| 5. | ಬೆಂಗಳೂರು ದಕ್ಷಿಣ | 1 |
| 6. | ಚಾಮರಾಜನಗರ | 4 |
| 7. | ಚಿತ್ರದುರ್ಗ | 3 |
| 8. | ಚಿಕ್ಕಬಳ್ಳಾಪುರ | 1 |
| 9. | ಚಿಕ್ಕಮಗಳೂರು | 3 |
| 10. | ದಕ್ಷಿಣ ಕನ್ನಡ | 5 |
| 11. | ಧಾರವಾಡ | 2 |
| 12. | ದಾವಣಗೆರೆ | 2 |
| 13. | ಗದಗ | 2 |
| 14. | ಹಾಸನ | 1 |
| 15. | ಹಾವೇರಿ | 2 |
| 16. | ಕಲಬುರಗಿ | 5 |
| 17. | ಕೊಡಗು | 4 |
| 18. | ಕೋಲಾರ | 1 |
| 19. | ಕೊಪ್ಪಳ | 1 |
| 20. | ಮಂಡ್ಯ | 2 |
| 21. | ಮೈಸೂರು | 4 |
| 22. | ರಾಯಚೂರು | 8 |
| 23. | ಶಿವಮೊಗ್ಗ | 2 |
| 24. | ತುಮಕೂರು | 3 |
| 25. | ಉಡುಪಿ | 4 |
| 26. | ಉತ್ತರ ಕನ್ನಡ | 6 |
| 27. | ವಿಜಯನಗರ | 4 |
| 28. | ವಿಜಯ ಪುರ | 2 |
| 29. | ಯಾದಗಿರಿ | 1 |
| ಒಟ್ಟು | 81 | |
ಸಚಿವ ಮಹದೇವಪ್ಪ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ: ಯಾಕೆ ಗೊತ್ತಾ?








