ಬೆಂಗಳೂರು : ರಾಜ್ಯದ ರೈತರಿಗೆ ಸಿಹಿಸುದ್ದಿ, ಪಶುಪಾಲನಾ ಇಲಾಖೆಯಲ್ಲಿ ಈ ಕೆಳಕಂಡ ಯೋಜನೆಗಳಡಿ ರೈತರ ವಂತಿಕೆ ಮತ್ತು ಸರ್ಕಾರದ ಸಹಾಯಧನವನ್ನು ಪಡೆಯಬಹುದು.
ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಸರಬರಾಜು ಮಾಡುವ ಸದಸ್ಯರಿಗೆ ಪ್ರತಿ ಲೀಟರ್ ಗುಣಾತ್ಮಕ ಹಾಲಿಗೆ ಗೆ ರೂ.5/-ಪ್ರೋತ್ಸಾಹಧನ ನೀಡಲಾಗುತ್ತಿದೆ.
ರಾಸುಗಳು ಆಕಸ್ಮಿಕ ಮರಣ ಹೊಂದಿದಾಗ ರೈತರಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ಭರಿಸಲು ಮರಣ ಹೊಂದಿದ ಧನ, ಎಮ್ಮೆ. ಹೋರಿ ಮತ್ತು ಕಡಸುಗಳಿಗೆ ರೂ 15,000/- ಪರಿಹಾರ ಧನವನ್ನು ರಾಸುಗಳ ಮಾಲೀಕರಿಗೆ ವಿತರಿಸಲಾಗುವುದು.
ಆಕಸ್ಮಿಕ ಮರಣ ಹೊಂದಿದ 3-6 ತಿಂಗಳ ವಯಸ್ಸಿನ ಕುರಿ/ ಮೇಕೆಗಳಿಗೆ ರೂ. 3,500 ಹಾಗೂ 6 ತಿಂಗಳ ಮೇಲ್ಪಟ್ಟ ಕುರಿ/ಮೇಕೆಗಳಿಗೆ ಅವುಗಳ ಮಾಲೀಕರಿಗೆ ರೂ. 5000/-ಪರಿಹಾರ ವಿತರಣೆ ಮಾಡಲಾಗುವುದು.









