ಬೆಂಗಳೂರು : ಬಡತನ ರೇಖೆಗಿಂತ ಕೆಳಗಿರುವ ಅವಿವಾಹಿತ ಹಾಗೂ ವಿಚ್ಚೇದಿತ ಮಹಿಳೆಯರಿಗೆ ಮಾಸಾಶನ ನೀಡುವ “ಮನಸ್ವಿನಿ” ಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅವಿವಾಹಿತ ಹಾಗೂ ವಿಚ್ಚೇದಿತ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನೊದಗಿಸಿ, ಸಹಾಯ ನೀಡುವ ಉದ್ದೇಶದಿಂದ, ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64 ವರ್ಷದೊಳಗಿರುವ ಅವಿವಾಹಿತ ಹಾಗೂ ವಿಚ್ಚೇದಿತ ‘ಮಹಿಳೆಯರಿಗೆ ರೂ.500ಗಳ ಮಾಸಾಶನ… ನೀಡಲು “ಮನಸ್ವಿನಿ” ಯೋಜನೆಯನ್ನು ಸರ್ಕಾರ 2013-14 ನೇ ಸಾಲಿನ ಅಯವ್ಯಯದಲ್ಲಿ ಘೋಷಿಸಿದೆ. 65ಕ್ಕಿಂತ ಹೆಚ್ಚು ವಯಸ್ಸಾದ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರು ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆಯಡಿ ಪ್ರಯೋಜನ ಪಡೆಯಬಹುದಾಗಿರುತ್ತದೆ. ಈ ಹಿನ್ನಲೆಯಲ್ಲಿ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 94 ಡಿಎಸ್ಪಿ 2013, ಬೆಂಗಳೂರು. 2:01/08/2013.
ರಾಜ್ಯದಲ್ಲಿನ ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64. ವರ್ಷದೊಳಗಿರುವ ಅವಿವಾಹಿತ ಹಾಗೂ ವಿಚ್ಚೇದಿತ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ರೂ.500ಗಳ ಮಾಸಾಶನ ನೀಡಲು “ಮನಸ್ಸನಿ” ಯೋಜನೆಯನ್ನು ದಿನಾಂಕ:01-08-2013ರಿಂದ ಜಾರಿಗೆ ತಂದು ಆದೇಶಿಸಿದೆ.
1. ಉದ್ದೇಶಿತ ಫಲಾನುಭವಿಯ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ.12,000 ಗಳಿಗಿಂತ ಅಥವಾ ನಗರ ಪ್ರದೇಶಗಳಲ್ಲಿ ರೂ.17,000 ಗಳಿಗಿಂತ ಕಡಿಮೆ ಇರತಕ್ಕದ್ದು.
2. ಇತರೇ ಯವುದೇ ಸಾಮಾಜಿಕ ಭದ್ರತಾ ಯೋಜನೆಗಳಡಿ ಅಥವಾ ಯಾವುದೇ ತರಹದ ಪಿಂಚಣಿ ಇತ್ಯಾದಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಪಡೆಯುತ್ತಿರಬಾರದು. ಮೂಲಗಳಿಂದ
3. ಮಾಸಾಶನವನ್ನು ಅಯಾ ಹೋಬಳಿಯ ಉಪ ತಹಸೀಲ್ದಾರರು/ತಾಲ್ಲೂಕಿನ ತಹಸೀಲ್ದಾರರು ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡುವುದು.
4. ಈ ಮಾಸಾಶನವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಅಥವಾ ಅಂಚೆ ಕಚೇರಿಯ ಖಾತೆಗೆ ಖಜಾನೆಯಿಂದ ಪ್ರತಿ ತಿಂಗಳು ವರ್ಗಾಯಿಸಲಾಗುವುದು.
5. ಈ ಯೋಜನೆಗೆ ತಗಲುವ ವೆಚ್ಚವನ್ನು ಲೆಕ್ಕ ಶೀರ್ಷಿಕ”2235-60-102-1-01” ವಿಧವಾ ವೇತನದಡಿ ಒದಗಿಸಲಾದ ಅನುದಾನದಲ್ಲಿ ಭರಿಸತಕ್ಕದ್ದು.
6. ಫಲಾನುಭವಿಗಳು ವಿವಾಹವಾದಲ್ಲಿ/ಮರುವಿವಾಹವಾದಲ್ಲಿ, ಉದ್ಯೋಗ ಪಡೆದು ನಿಗದಿತ ಆದಾಯ ಮಿತಿಯನ್ನು ಮೀರಿದಲ್ಲಿ ಹಾಗೂ ಮರಣ ಹೊಂದಿದ ಪಕ್ಷದಲ್ಲಿ ವೇತನವನ್ನು ರದ್ದು ಮಾಡಲಾಗುವುದು.
7. ಈ ಯೋಜನೆಯ ಇತರೆ ಸಂಪೂರ್ಣ ರೂಪುರೇಶೆಗಳು ನಿಗದಿತ ಅಜಿ ನಮೂನೆ ಹಾಗೂ ಮಂಜೂರಾತಿ ನೀಡಲಾಗಿದೆ.









