ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೆಕೆಆರ್ ತಂಡದ ಮಾಜಿ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ 7 ಕೋಟಿ ಮೌಲ್ಯಕ್ಕೆ ಆರ್‍ಸಿಬಿ ತಂಡದ ಪಾಲಾಗಿದ್ದಾರೆ. ಈ ಆಟಗಾರ 2 ಕೋಟಿ ರೂ. ಮೀಸಲು ಬೆಲೆಗೆ ಹರಾಜಿಗೆ ಬಂದಿದ್ದು, ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತೊಮ್ಮೆ ಮೊದಲು ಬಿಡ್ ಮಾಡಿತು. ಗುಜರಾತ್ ಟೈಟಾನ್ಸ್ (GT) ಕೂಡ ಈಗ 2.20 ಕೋಟಿ ರೂ.ಗೆ ಬಿಡ್ ಮಾಡಿತು. ಆದ್ರೆ, ಜಿಟಿ 2.80 ಕೋಟಿ ರೂ.ಗೆ ಸ್ಪರ್ಧೆಯಿಂದ ಹಿಂದೆ ಸರಿದರು. ಆರ್‌ಸಿಬಿ ತಕ್ಷಣ 3 ಕೋಟಿ ರೂ.ಗೆ ಸ್ಪರ್ಧೆಗೆ ಪ್ರವೇಶಿಸಿತು. ಆದರೆ ಎಲ್‌ಎಸ್‌ಜಿ ಬೆಲೆಯನ್ನು ಹೆಚ್ಚಿಸುತ್ತಲೇ ಇತ್ತು. ನಂತರ ಕೆಕೆಆರ್ 3.60 ಕೋಟಿ ರೂ.ಗೆ ಬಿಡ್ ಮಾಡಿತು. ಆದರೆ ಆರ್‌ಸಿಬಿ ಮತ್ತೆ ಬಿಡ್ ಮಾಡಿತು.
ಈಗ 7 ಕೋಟಿ ಮೊತ್ತಕ್ಕೆ ಆರ್ಸಿಬಿ ತನ್ನ ತಂಡ ಸೇರಿಸಿಕೊಂಡಿದೆ. ಕುತೂಹಲಕಾರಿಯಾಗಿ, ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಅವರಿಗಾಗಿ ತೀವ್ರ ಪೈಪೋಟಿ ನಡೆಸಿದ ಎರಡು ತಂಡಗಳು ಆರ್‌ಸಿಬಿ ಮತ್ತು ಕೆಕೆಆರ್.
ಮನೆಯಲ್ಲಿ ಹಣ ಇಟ್ಟುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್, ಭಾರಿ ದಂಡ! ಐಟಿ ಇಲಾಖೆಯಿಂದ ಹೊಸ ನಿಯಮ ಜಾರಿ!








