ಶಿವಮೊಗ್ಗ: ಸಾಗರ ಉಪ ವಿಭಾಗದ ಅರಣ್ಯ ಸಂಚಾರಿದಳದ ಪಿಎಸ್ಐ ವಿನಾಯಕ್ ಅಂಡ್ ಟೀಂ ಮಿಂಚಿನ ಕಾರ್ಯಾಚರಣೆ ನಡೆಸಿ ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದಂತ ಆರೋಪಿಯನ್ನು ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಧಾರವಾಡ ಜಿಲ್ಲೆಯ ನವಲಗುಂದದಿಂದ ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿನ ಯಡೆಹಳ್ಳಿ ವೃತ್ತಕ್ಕೆ ವ್ಯಕ್ತಿಯೊಬ್ಬ ಜಿಂಕೆ ಚರ್ಮವನ್ನು ಮಾರಾಟ ಮಾಡೋದಕ್ಕೆ ಆಗಮಿಸುತ್ತಿದ್ದನು. ಈ ಮಾಹಿತಿಯು ಸಾಗರ ಉಪ ವಿಭಾಗದ ಅರಣ್ಯ ಸಂಚಾರಿದಳದ ಪಿಎಸ್ಐ ವಿನಾಯಕ್ ಗೆ ಸಿಕ್ಕಿತ್ತು. ಕೂಡಲೇ ಅಲರ್ಟ್ ಆದಂತ ಅವರು, ತಮ್ಮ ಸಿಬ್ಬಂದಿಗಳೊಂದಿಗೆ ಮಫ್ತಿಯಲ್ಲಿ ಆನಂದಪುರದ ಯಡೆಹಳ್ಳಿ ವೃತ್ತಕ್ಕೆ ಹೋಗಿ ಕಾರ್ಯಾಚರಣೆಗೆ ಇಳಿದಿದ್ದರು.
ನವಲಗುಂದದಿಂದ ಆನಂದಪುರದ ಯಡೆಹಳ್ಳಿ ಸರ್ಕಲ್ ಗೆ ಬಸ್ಸಿನಲ್ಲಿ ಬಂದು ಇಳಿದು ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸಿದ್ದಾನೆ. ಆ ವೇಳೆ ಕೂಡಲೇ ವಶಕ್ಕೆ ಪಡೆದು, ಆತ ತಂದಿದ್ದಂತ ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ಚಿಂಕೆ ಚರ್ಮ ಪರ್ತೆಯಾಗಿದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಧಾರವಾಡದ ನವಲಗುಂದದ ಅರ್ಜುನ್ ಬಿನ್ ರಾಮಪ್ಪ ಎಂಬುದಾಗಿ ಗುರುತಿಸಲಾಗಿದೆ. ಜಿಂಕೆ ಚರ್ಮದ ಜೊತೆಗೆ ಸಿಕ್ಕಿಬಿದ್ದಂತ ಆರೋಪಿ ಅರ್ಜುನ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ, ಕೋರ್ಟ್ ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಈ ಕಾರ್ಯಾಚರಣೆಯ ವೇಳೆಯಲ್ಲಿ ಸಿಬ್ಬಂದಿಗಳಾದಂತ ಹಾಲೇಶ್, ಮಹೇಶ್, ಆಂಜನೇಯ ಪಾಟೀಲ್, ಚಂದ್ರಕಾಂತ್, ವಿಶ್ವನಾಥ್ ಹಾಗೂ ಪ್ರಮೋದ ಕುಮಾರಿ ಪಾಲ್ಗೊಂಡಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..








