Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮನೆಯ ಮೇಲಿನ ನೀರಿನ ಟ್ಯಾಂಕ್‌ ನಲ್ಲಿ 27 ಹಾವಿನ ಮರಿಗಳು ಪತ್ತೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

BIG NEWS : ‘ಕಾಕ್ರೋಚ್’ ಬೆನ್ನಲ್ಲೇ ‘ಇಷ್ಕ್ ಕರೋ ಪಾರ್ಟಿ’ ಸ್ಥಾಪಿಸಿದ ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ಮಾರ್ಕಂಡೇಯ ಕಾಟ್ಜು | Ishq Karo Party

Rah-Veer scheme : ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಬಂದರೆ ₹25,000 ಬಹುಮಾನ: ‘ರಹಾ-ವೀರ್’ ಯೋಜನೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೇವಾ ಮನೋಭಾವ ಇಲ್ಲದಿದ್ದವರು ವೈದ್ಯರಾಗಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
KARNATAKA

ಸೇವಾ ಮನೋಭಾವ ಇಲ್ಲದಿದ್ದವರು ವೈದ್ಯರಾಗಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

By ವಸಂತ ಬಿ ಈಶ್ವರಗೆರೆ

ಬೆಂಗಳೂರು : “ಮಾನವ ಧರ್ಮದ ಸೇವೆ ಮಾಡಬೇಕು ಎಂದವರು ಮಾತ್ರ ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸೇವಾ ಮನೋಭಾವ ಇಲ್ಲದಿದ್ದವರು ವೈದ್ಯರಾಗಲು ಸಾಧ್ಯವಿಲ್ಲ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ಜಯನಗರದ ಯುನೈಟೆಡ್ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ, ಆಸ್ಪತ್ರೆಯ ಕ್ರಾಂತಿಕಾರಿ ತುರ್ತು ಚಿಕಿತ್ಸಾ ಯೋಜನೆ ‘ME Care’ (ಮಿ ಕೇರ್) ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ವೈದ್ಯ ವೃತ್ತಿಯಲ್ಲಿ ನಿಸ್ವಾರ್ಥ ಮನೋಭಾವ ಇರಬೇಕು. ಈ ಕೆಲಸದಲ್ಲಿ ಸಾಕಷ್ಟು ಸವಾಲುಗಳು ಇರುತ್ತವೆ. ಇದನ್ನು ಮೀರಿ ನಡೆಯಬೇಕು. ಈಗ ತಂತ್ರಜ್ಞಾನವೂ ಮುಂದುವರೆದು ನಿಮ್ಮ ನೆರವಿಗಿದೆ. ಇದರಿಂದ ಸಾಕಷ್ಟು ಉಪಯೋಗವಾಗಿದೆ,” ಎಂದರು.

ಗ್ರಾಮೀಣ ಮತ್ತು ನಗರ ಭಾಗದ ವೈದ್ಯಕೀಯ ಸೇವೆಯ ಕುರಿತು ಮಾತನಾಡಿದ ಡಿಸಿಎಂ, “ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಣೆ ಮಾಡಿದ ವೈದ್ಯರಿಗೆ ನಗರ ಭಾಗದಲ್ಲಿ ಕೆಲಸ ಮಾಡುವುದು ಸಾಕಷ್ಟು ಸುಲಭ. ನಗರ ಭಾಗದಲ್ಲಿ ಹಿರಿಯ ವೈದ್ಯರ ಸಲಹೆ ಪಡೆದು ಕಿರಿಯ ವೈದ್ಯರು ಕೆಲಸ ಮಾಡಬೇಕಾಗುತ್ತದೆ. ನಾನು ಸ್ವಲ್ಪ ದಿನ ವೈದ್ಯಕೀಯ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ ಕಾರಣಕ್ಕೆ ಇದರ ಬಗ್ಗೆ ಅರಿವಿದೆ. ನನ್ನ ಮನೆಯಲ್ಲೇ ಅರ್ಧ ಡಜನ್ ವೈದ್ಯರಿದ್ದಾರೆ,” ಎಂದು ಸ್ಮರಿಸಿದರು.

ಕೈಗೆಟುಕುವ ದರದಲ್ಲಿ ಚಿಕಿತ್ಸೆ: ಡಿಸಿಎಂ ಮೆಚ್ಚುಗೆ

“ಡಾ. ವಿಕ್ರಮ್ ಅವರು ದೂರದ ಗುಲ್ಬರ್ಗದಿಂದ ಬಂದು ಇಲ್ಲಿ ಸೇವೆ ಸಲ್ಲಿಸಿ ಜನಪರವಾಗಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ ಕೇವಲ 10 ರೂಪಾಯಿ ನೀಡಿದರೆ 1 ಕೋಟಿವರೆಗೆ ಆರೋಗ್ಯ ವಿಮೆ ನೀಡುವುದಾಗಿ ಹೇಳಿದ್ದಾರೆ. ಖಾಸಗಿ ವಲಯವು ಸರ್ಕಾರದೊಂದಿಗೆ ಕೈಜೋಡಿಸಿ ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವಂತಾಗಲಿ. ವಿಕ್ರಮ್ ಅವರ ತಂಡದ ಈ ಹೊಸ ಸಾಹಸಕ್ಕೆ ಶುಭವಾಗಲಿ,” ಎಂದು ಹಾರೈಸಿದರು.

“ಯುನೈಟೆಡ್ ಎಂದರೆ ಕನ್ನಡದಲ್ಲಿ ಒಗ್ಗಟ್ಟು. ಈ ಒಗ್ಗಟ್ಟು ಜನರ ಆರೋಗ್ಯ ರಕ್ಷಣೆ ಮಾಡಲಿ. ‘ಶುಭಂ ಕರೋತಿ ಕಲ್ಯಾಣಂ, ಆರೋಗ್ಯ ಧನಸಂಪದಂ…’ ಎಂಬ ಶ್ಲೋಕದ ಆಶಯದಂತೆ ನಿಮ್ಮೆಲ್ಲರಿಗೂ ಮಂಗಳವಾಗಲಿ,” ಎಂದು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಯುನೈಟೆಡ್ ಆಸ್ಪತ್ರೆಗಳ ಅಧ್ಯಕ್ಷರಾದ ಡಾ. ವಿಕ್ರಮ್ ಸಿದ್ದರೆಡ್ಡಿ, “ನಮ್ಮ ಆಹ್ವಾನವನ್ನು ಮನ್ನಿಸಿ ಆಗಮಿಸಿದ ಉಪಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಕೇವಲ 4 ವರ್ಷಗಳ ಅವಧಿಯಲ್ಲಿ ಯುನೈಟೆಡ್ ಆಸ್ಪತ್ರೆ ಜನರ ವಿಶ್ವಾಸಗಳಿಸಿದೆ. ‘ME Care’ ಯೋಜನೆಯು ಆವಿಷ್ಕಾರ, ಕೈಗೆಟುಕುವ ದರ ಮತ್ತು ಸಹಾನುಭೂತಿಯನ್ನು ಸಂಯೋಜಿಸುವ ನಮ್ಮ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ,” ಎಂದರು.

“ತುರ್ತು ಸಂದರ್ಭಗಳಲ್ಲಿ ಕುಟುಂಬಗಳ ಮೇಲಾಗುವ ಆರ್ಥಿಕ ಹೊರೆಯನ್ನು ಸಂಪೂರ್ಣವಾಗಿ ತಗ್ಗಿಸುವುದು ಮತ್ತು ಅತ್ಯುನ್ನತ ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಗುರಿ. ಬೆಂಗಳೂರು ಮತ್ತು ಕಲಬುರಗಿಯಲ್ಲಿ ಸಮುದಾಯದ ಅಗತ್ಯಗಳಿಗೆ ತಕ್ಕಂತೆ ಆರೋಗ್ಯ ಸೇವೆ ನೀಡುವಲ್ಲಿ ಯುನೈಟೆಡ್ ಆಸ್ಪತ್ರೆ ಸದಾ ಮುಂದಿರುತ್ತದೆ,” ಎಂದು ಅವರು ತಿಳಿಸಿದರು.

ಏನಿದು ‘ME Care’ ಯೋಜನೆ?

ಇದು ಒಂದು ವಿಶಿಷ್ಟ ತುರ್ತು ಆರೋಗ್ಯ ಯೋಜನೆಯಾಗಿದ್ದು, ದಿನಕ್ಕೆ ಕೇವಲ 10 ರೂ. (ವರ್ಷಕ್ಕೆ 3558 ರೂ.) ವೆಚ್ಚದಲ್ಲಿ 1 ಕೋಟಿ ರೂ.ವರೆಗಿನ ತುರ್ತು ವೈದ್ಯಕೀಯ ರಕ್ಷಣೆಯನ್ನು ನೀಡುತ್ತದೆ. ಇದು ಜಯನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಸಂಪೂರ್ಣ ನಗದು ರಹಿತ (Cashless) ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲದ ಪಾರದರ್ಶಕ ಯೋಜನೆಯಾಗಿದೆ.

ಕಾರ್ಯಕ್ರಮದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರು ಹಾಗೂ ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್, ಆಸ್ಪತ್ರೆಯ ಹಿರಿಯ ವೈದ್ಯರು, ಸಿಬ್ಬಂದಿ ವರ್ಗ ಹಾಗೂ ಗಣ್ಯರು ಉಪಸ್ಥಿತರಿದ್ದರು.

BREAKING: ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆಯಲ್ಲಿ ಕಳ್ಳತನ | WATCH VIDEO

ಪೋಷಕರೇ ಗಮನಿಸಿ : ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸುವುದು ಹೇಗೆ.? ಇಲ್ಲಿದೆ ಮಾಹಿತಿ

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ ಸಾರ್ವಜನಿಕರ ಸುರಕ್ಷತೆಗೆ ರೌಡಿಸಂಗೆ ಅಂಕುಶ : ಸರ್ಕಾರದಿಂದ ವಿಶೇಷ ರೌಡಿ ನಿಗ್ರಹ ಪಡೆ ರಚನೆ!

2 Mins Read

BREAKING : ಬೆಳಗಾವಿಯಲ್ಲಿ 1400 ಕೋಟಿ ರೂ.ವಂಚನೆ ಕೇಸ್ : ಸ್ಯಾಂಡಲ್ ವುಡ್ ನಟ, ನಟಿಯರಿಗೆ ‘CID’ ಶಾಕ್!

2 Mins Read

BREAKING : ಕೊಪ್ಪಳದಲ್ಲಿ ಹೀನ ಕೃತ್ಯ : ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು!

1 Min Read
Recent News

SHOCKING : ಮನೆಯ ಮೇಲಿನ ನೀರಿನ ಟ್ಯಾಂಕ್‌ ನಲ್ಲಿ 27 ಹಾವಿನ ಮರಿಗಳು ಪತ್ತೆ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

BIG NEWS : ‘ಕಾಕ್ರೋಚ್’ ಬೆನ್ನಲ್ಲೇ ‘ಇಷ್ಕ್ ಕರೋ ಪಾರ್ಟಿ’ ಸ್ಥಾಪಿಸಿದ ಸುಪ್ರೀಂಕೋರ್ಟ್ ನಿವೃತ್ತ ಜಡ್ಜ್ ಮಾರ್ಕಂಡೇಯ ಕಾಟ್ಜು | Ishq Karo Party

Rah-Veer scheme : ರಸ್ತೆ ಅಪಘಾತ ಸಂತ್ರಸ್ತರ ನೆರವಿಗೆ ಬಂದರೆ ₹25,000 ಬಹುಮಾನ: ‘ರಹಾ-ವೀರ್’ ಯೋಜನೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

BIG NEWS : ರಾಜ್ಯದಲ್ಲಿ ಸಾರ್ವಜನಿಕರ ಸುರಕ್ಷತೆಗೆ ರೌಡಿಸಂಗೆ ಅಂಕುಶ : ಸರ್ಕಾರದಿಂದ ವಿಶೇಷ ರೌಡಿ ನಿಗ್ರಹ ಪಡೆ ರಚನೆ!

State News
KARNATAKA

BIG NEWS : ರಾಜ್ಯದಲ್ಲಿ ಸಾರ್ವಜನಿಕರ ಸುರಕ್ಷತೆಗೆ ರೌಡಿಸಂಗೆ ಅಂಕುಶ : ಸರ್ಕಾರದಿಂದ ವಿಶೇಷ ರೌಡಿ ನಿಗ್ರಹ ಪಡೆ ರಚನೆ!

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರೌಡಿಸಂ ಹಾಗೂ ಸಮಾಜವಿರೋಧಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ಕರ್ನಾಟಕ ಪೊಲೀಸ್ ಇಲಾಖೆ ಅತ್ಯಂತ…

BREAKING : ಬೆಳಗಾವಿಯಲ್ಲಿ 1400 ಕೋಟಿ ರೂ.ವಂಚನೆ ಕೇಸ್ : ಸ್ಯಾಂಡಲ್ ವುಡ್ ನಟ, ನಟಿಯರಿಗೆ ‘CID’ ಶಾಕ್!

BREAKING : ಕೊಪ್ಪಳದಲ್ಲಿ ಹೀನ ಕೃತ್ಯ : ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು!

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ನೋಂದಣಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.