ಶಿವಮೊಗ್ಗ : ರಾಜ್ಯದಲ್ಲಿ ಮತ್ತೊಂದು ಡಬಲ್ ಮರ್ಡರ್ ನಡೆದಿದ್ದು, ಪ್ರೀತಿ ನಿರಾಕರಿಸಿದ್ದಕ್ಕೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೈ ಭೀಮ್ ಬಡಾವಣೆಯಲ್ಲಿ ಪ್ರೇಮಿಗಳಿಗೆ ಸಹಕರಿಸಿದ ಇಬ್ಬರನ್ನ ಯುವತಿಯ ಸಹೋದರ ಹಾಗೂ ಹಾಗೂ ಆತನ ಸ್ನೇಹಿತರು ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಯುವಕರನ್ನ ಕಿರಣ್ (25) ಮಂಜುನಾಥ್ (45) ಎಂದು ಗುರುತಿಸಲಾಗಿದೆ.
ಮನೆ ಬಿಟ್ಟು ಬಂದ ಪ್ರೇಮಿಗಳು ಶುಕ್ರವಾರ ಸಂಜೆ ಹಳೆ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಹುಡುಗನ ಸ್ನೇಹಿತರ ಮೇಲೆ ಯುವತಿಯ ಸಹೋದರ ಹಾಗೂ ಆತನ ಸ್ನೇಹಿತರು ದಾಳಿ ಮಾಡಿದ್ದಾರೆ. ಚಾಕುವಿನಿಂದ ಇರಿದು ಇಬ್ಬರನ್ನ ಹತ್ಯೆ ಮಾಡಿದ್ದಾರೆ. ಭದ್ರಾವತಿ ಹಳೆನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್, ವೆಂಕಟೇಶ್, ಸುರೇಶ್, ಮಂಜುನಾಥ್, ಭರತ್ ಸೇರಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.








