ಬೆಂಗಳೂರು: ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಹೊಸದಾಗಿ ಮುಖ; ಇಂಜಿನಿಯರ್ ಹಾಗೂ ಅಧೀಕ್ಷಕ ಇಂಜಿನಿಯರ್ ಕಛೇರಿಗಳನ್ನು ಸೃಜಿಸಿ ಸರ್ಕಾರ ಆದೇಶಿಸಿದೆ. ಈ ಮೂಲಕ ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಉಪ ಮಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಜರುಗಿದ ದಿನಾಂಕ: 18.11.2025 ರಂದು ಜರುಗಿದ ಸಭೆಯಲ್ಲಿ ನೀಡಿದ ನಿರ್ದೇಶನದಂತೆ ಮೇಕೆದಾಟು ಯೋಜನೆಯನ್ನು ಯಾವುದೇ ಅಡೆತಡೆ ಇಲ್ಲದೇ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರವನ್ನು ಕೇಂದ್ರಸ್ಥಾನವನ್ನಾಗಿಸಿ, ಅಲ್ಲಿ ಒಂದು ಪ್ರತ್ಯೇಕ ಮುಖ್ಯ ಇಂಜಿನಿಯರ್ ಹಾಗೂ ಸಿಬ್ಬಂದಿಗಳನ್ನು ಒಳಗೊಂಡಂತೆ ಹೊಸದಾಗಿ ಒಂದು ವಲಯ ಕಛೇರಿಯನ್ನು ಮತ್ತು ಅಧೀಕ್ಷಕ ಇಂಜಿನಿಯರ್ ಹಾಗೂ ಸಿಬ್ಬಂದಿಗಳನ್ನು ಒಳಗೊಂಡಂತೆ ಹೊಸದಾಗಿ ಒಂದು ವೃತ್ತ ಕಛೇರಿಯನ್ನು ಸೃಜಿಸಿ ಕಾರ್ಯನಿರ್ವಹಿಸಲು ಸೂಕ್ತ ಕ್ರಮವಹಿಸುವಂತೆ ನಿರ್ಣಯಿಸಲಾಗಿರುತ್ತದೆ.
ದಿನಾಂಕ: 10.12.2025 ರ ಪತ್ರದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಕಾವೇರಿ ನೀರಾವರಿ ನಿಗಮ ನಿಯಮಿತ ಇವರು ಸರ್ಕಾರಕ್ಕೆ ಪುಸ್ತಾವನೆ ಸಲ್ಲಿಸಿ, ಮಾನ್ಯ ಉಪ ಮಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಜರುಗಿದ ದಿನಾಂಕ: 18.11.2025ರ ಸಭೆಯ ನಿರ್ಣಯದಂತೆ ಮೇಕೆದಾಟು ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರವನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ಒಂದು ಮುಖ್ಯ ಇಂಜಿನಿಯರ್ ಕಛೇರಿ ಹಾಗೂ ಒಂದು ಅಧೀಕ್ಷಕ ಇಂಜಿನಿಯರ್ ಕಛೇರಿಯನ್ನು ಸೃಜಿಸುವಂತೆ ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಕೂಲಕಂಷವಾಗಿ ಪರಿಶೀಲಿಸಿ, ಹೊಸದಾಗಿ ಕಛೇರಿಯನ್ನು ಸ್ನಾಪನೆ ಮಾಡಲು ಹಾಗೂ ಹುದ್ದೆಗಳನ್ನು ಸೃಜನೆ ಮಾಡಲು ಆರ್ಥಿಕ ಇಲಾಖೆಯ ಸಹಮತಿ ಪಡೆಯುವುದು ಅಗತ್ಯವಾಗಿರುತ್ತದೆ. ಈ ಎಲ್ಲಾ ಪಕ್ರಿಯೆಗೆ ಬಹಳಷ್ಟು ಸಮಯಾವಕಾಶ ಬೇಕಾಗಿರುತ್ತದೆ. ಪುಸ್ತುತ ಮೇಕೆದಾಟು ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದು ಅತ್ಯವಶ್ಯಕವಾಗಿರುವುದರಿಂದ, ಸದರಿ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಹೊಸದಾಗಿ ಕಛೇರಿಯನ್ನು ಸ್ಥಾಪಿಸಿ ಹುದ್ದೆಗಳನ್ನು ಸೃಜಿಸುವವರೆಗೆ, ತಾತ್ಕಾಲಿಕವಾಗಿ ಮೊದಲ ಹಂತದಲ್ಲಿ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಸದರಿ ಯೋಜನೆ ಕಾರ್ಯಭಾರವನ್ನು ಹೆಚ್ಚುವರಿಯಾಗಿ ನಿರ್ದೇಶಕರು ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ಇವರಿಗೆ ವಹಿಸಿ ಅಗತ್ಯ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ನಿರ್ವಹಣೆ ಮಾಡುವ ಸಂಬಂಧ ಈ ಕೆಳಕಂಡಂತೆ ಆದೇಶಿಸಿದೆ.
ಪುಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ / ನೌಕರರುಗಳ ಪೈಕಿ ಕೆಳಕಂಡಂತೆ ಅಧಿಕಾರಿ / ನೌಕರರುಗಳನ್ನು ಒಳಗೊಂಡ ಒಂದು ತಂಡವನ್ನು ರಚಿಸಿಕೊಂಡು, ಸದರಿ ತಂಡಕ್ಕೆ ಹೆಚ್ಚುವರಿಯಾಗಿ ಮೇಕೆದಾಟು ಯೋಜನೆಯ ಕೆಲಸ ಕಾರ್ಯಗಳನ್ನು ಹಂಚಿಕೆ ಮಾಡಿ ನಿರ್ವಹಣೆ ಮಾಡುವ ಅಧಿಕಾರವನ್ನು ನಿರ್ದೇಶಕರು, ಕೆ.ಇ.ಆ.ಎಸ್. ಇವರಿಗೆ ವಹಿಸಿದೆ.
ಹುದ್ದೆಗಳ ವಿವರ
- ಉಪ ಮುಖ್ಯ ಇಂಜಿನಿಯರ್ -01
(ಕಾರ್ಯಪಾಲಕ ಇಂಜಿನಿಯರ್) - ತಾಂತ್ರಿಕ ಸಹಾಯಕರು -03
(ಸಹಾಯಕ ಕಾರ್ಯಪಾಲಕ ಇಂಜಿನಿಯರ್) - ಸಹಾಯಕ ಇಂಜಿನಿಯರ್ – 06
- ಸಹಾಯಕ ಆಡಳಿತಾಧಿಕಾರಿ- 01
- ಲೆಕ್ಕಾಧೀಕ್ಷಕರು -01
- ಅಧೀಕ್ಷಕರು -01
- ಪ್ರ.ದ. ಲೆಕ್ಕ ಸಹಾಯಕರು -01
- ಪ್ರಥಮ ದರ್ಜೆ ಸಹಾಯಕರು- 02
- ದ್ವಿ.ದ. ಲೆಕ್ಕ ಸಹಾಯಕರು- 01
- ದ್ವಿತೀಯ ದರ್ಜೆ ಸಹಾಯಕರು- 04
- ಶೀಘ್ರಲಿಪಿಗಾರರು- 01
- ಬೆರಳಚ್ಚುಗಾರರು- 04
- ವಾಹನ ಚಾಲಕ- 01
- ಗ್ರೂಪ್ – ಡಿ – 02
- ಕಾವಲುಗಾರರು -01
(ii) ಮೇಲ್ಕಂಡ ತಂಡವು ಮೇಕೆದಾಟು ಯೋಜನೆಯ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಮನಗರದಲ್ಲಿ ಕಾರ್ಯನಿರ್ವಹಿಸಲು ಅನುವಾಗುವಂತೆ ಅವಶ್ಯ ಕಟ್ಟಡದ ವ್ಯವಸ್ಥೆ ಮಾಡಲು ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ ನಿಯಮಿತ ಇವರು ಅಗತ್ಯ ಕ್ರಮವಹಿಸುವುದು.
(i) ನಿರ್ದೇಶಕರು, ಕೆ.ಇ.ಆರ್.ಎಸ್. ಮತ್ತು ಮೇಲ್ಕಂಡ ತಂಡವು, ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ ನಿಯಮಿತ ಇವರ ಅಧೀನದಲ್ಲಿ ಕಾರ್ಯನಿರ್ವಹಿಸುವುದು ಹಾಗೂ ಕಛೇರಿ ನಿರ್ವಹಣೆಯ ಮತ್ತು ಮೂಲಭೂತ ಸೌಕರ್ಯಗಳ ಹಾಗೂ ಇತರ ನೀರಾವರಿ ನಿಗಮಕ್ಕೆ ಹಂಚಿಕೆ ಮಾಡಲಾಗಿರುವ ವೆಚ್ಚಗಳನ್ನು ಪ್ರಸ್ತುತ ಕಾವೇರಿ ಅನುದಾನದಿಂದ ಭರಿಸುವುದು.
(iv) ವಸ್ತುತ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಸಂಬಂಧಪಟ್ಟ ಎಲ್ಲಾ ಕಡತಗಳು, ಪತ್ರ ವ್ಯವಹಾರಗಳು ಹಾಗೂ ಇನ್ನಿತರೆ ದಾಖಲೆಗಳನ್ನು ನಿರ್ದೇಶಕರು, ಕೆ.ಇ.ಆರ್.ಎಸ್. ಇವರಿಗೆ ಹಸ್ತಾಂತರಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ ನಿಯಮಿತ ಇವರಿಗೆ ಸೂಚಿಸಿದ್ದಾರೆ.
ಇಂದು ಶಿಗ್ಗಾಂವಿ ಕ್ಷೇತ್ರದ ಜನತೆಯ ಬಹುದಿನದ ಕನಸು ನನಸು: ಸಂಸದ ಬಸವರಾಜ ಬೊಮ್ಮಾಯಿ
BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘ಆರೋಗ್ಯ ಸಂಜೀವಿನಿ ಯೋಜನೆ’ಗೆ ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ.!








