Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೈಶುಗರ್ ಭ್ರಷ್ಟಾಚಾರ ಪ್ರಕರಣ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ : ಶಾಸಕ ಗಣಿಗ ರವಿಕುಮಾರ್ ಹೇಳಿಕೆ

15/03/2026 11:41 AM

ಚಾಟ್‌ಜಿಪಿಟಿ ಹಿಂದಿಕ್ಕಿದ ಸಿಲಿಂಡರ್ ಬುಕ್ಕಿಂಗ್ ಆಪ್‌! ಭಾರತದ ಪ್ಲೇ ಸ್ಟೋರ್‌ನಲ್ಲಿ ‘ಇಂಡಿಯನ್ ಆಯಿಲ್ ಒನ್’ ಅಬ್ಬರ

15/03/2026 11:38 AM

BREAKING : ಕರೂರು ಕಾಲ್ತುಳಿತ ಕೇಸ್ : 3ನೇ ಬಾರಿ ‘CBI’ ವಿಚಾರಣೆಗೆ ಹಾಜರಾದ ‘TVK’ ಪಕ್ಷದ ನಾಯಕ ವಿಜಯ್!

15/03/2026 11:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಸಾಗರದ ‘ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಚುನಾವಣೆಗೆ ನೀಡಿದ್ದ ತಡೆಯಾಜ್ಞೆ ಹೈಕೋರ್ಟ್ ತೆರವು
KARNATAKA

BREAKING: ಸಾಗರದ ‘ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಚುನಾವಣೆಗೆ ನೀಡಿದ್ದ ತಡೆಯಾಜ್ಞೆ ಹೈಕೋರ್ಟ್ ತೆರವು

By kannadanewsnow0910/12/2025 6:12 PM

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾದನದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆ ತೆರವುಕೋರಿ ಮಾರಿಕಾಂಬ ಹಿತರಕ್ಷಣಾ ಸಮಿತಿಯಿಂದ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್, ತಡೆಯಾಜ್ಞೆ ತೆರವುಗೊಳಿಸಿದ್ದು, ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೂಡ ಆರಂಭಗೊಂಡಿತ್ತು. ಆ ಸಂದರ್ಭದಲ್ಲೇ ಹೈಕೋರ್ಟ್ ಗೆ ಕೊರಚ-ಕೊರಮ ಸಮುದಾಯಕ್ಕೆ ದೇವಸ್ಥಾನದ ಬೈಲಾದಲ್ಲಿ ಪ್ರಾತಿನಿಧ್ಯ ನೀಡಿಲ್ಲ. ಹೀಗಾಗಿ ಚುನಾವಣೆಗೆ ತಡೆ ನೀಡುವಂತೆ ಕೋರಲಾಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ತಡೆಯಾಜ್ಞೆ ನೀಡಲಾಗಿತ್ತು.

ಈ ಬಳಿಕ ಚುನಾವಣಾಧಿಕಾರಿ ಹೈಕೋರ್ಟ್ ಆದೇಶದಂತೆ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದರು. ಆದರೇ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಾರಿಕಾಂಬ ಹಿತರಕ್ಷಣಾ ಸಮಿತಿಯಿಂದ ತಡೆಯಾಜ್ಞೆ ತೆರವುಗೊಳಿಸುವಂತೆ ಅರ್ಜಿಯನ್ನು ಸಲ್ಲಿಸಲಾಗಿತ್ತು.

ಹೈಕೋರ್ಟ್ ನಲ್ಲಿ ಚುನಾವಣೆಗೆ ನೀಡಿದ್ದ ತಡೆಯಾಜ್ಞೆ ತೆರವಿಗೆ ವಾದಿಸಿದ್ದೇನು?

ಆನಂದ್.ಎಂಡಿ, ಡಿಶ್ ಗುರು, ಪವಿತ್ರಾ ನಾಗರಾಜ್ ಸೇರಿದಂತೆ 72 ಮಂದಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಲ್ಲಿ ನಡೆಸಲಾಯಿತು. ಹಿರಿಯ ವಕೀಲ ದಿವಾಕರ್ ಅವರು  ಈಗಾಗಲೇ ಶಿವಮೊಗ್ಗ ಜಿಲ್ಲಾ ನ್ಯಾಯಾಲಯವು ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆ ನಡೆಸಿ ಹೊಸ ಕಮಿಟಿಗೆ ಅಧಿಕಾರ ಹಸ್ತಾಂತರಿಸುವಂತ ಸೂಚಿಸಲಾಗಿದೆ. ಅದರಂತೆ ಚುನಾವಣೆ ಪ್ರಕ್ರಿಯೆ ಕೂಡ ಆರಂಭಗೊಂಡಿದೆ. ನಾಮಪತ್ರ ಸಲ್ಲಿಕೆ ಕೂಡ ನಡೆದಿತ್ತು. ಈ ವೇಳೆಯಲ್ಲೇ ಚುನಾವಣೆಗೆ ತಡೆಯಾಜ್ಞೆ ನೀಡಿರುವುದು ಸರಿಯಲ್ಲ ಎಂಬುದಾಗಿ ವಾದಿಸಿದರು.

ಇನ್ನೂ ಮಾರಿಕಾಂಬ ದೇವಿ ಜಾತ್ರೆಯಲ್ಲಿ ಕೊರಚ-ಕೊರಮ ಸಮುದಾಯಕ್ಕೆ ವಾದ್ಯದ ಸೇವೆಯನ್ನು ಸಂಪೂರ್ಣವಾಗಿ ನೀಡಲಾಗಿದೆ. ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವಂತ ಪ್ರಕ್ರಿಯೆ ಕೂಡ ಆಗಿದೆ. ಹೀಗಿದ್ದರೂ ಬೈಲಾದಲ್ಲಿ ಕೊರಚ-ಕೊರಮ ಸಮುದಾಯಕ್ಕೆ ಸ್ಥಾನ ಮಾನ ನೀಡಿಲ್ಲ ಎಂಬುದು ಸರಿಯಲ್ಲ. ದೇವಸ್ಥಾನ ಸಮಿತಿಯಲ್ಲಿ ಪ್ರಾತಿನಿಧ್ಯವನ್ನು ವಿರೂಪಾಕ್ಷಪ್ಪ ಎನ್ನುವವರು ಕೋರಿದ್ದು ಸರಿಯಲ್ಲ. ಒಂದು ವೇಳೆ ಪ್ರಶ್ನಿಸುವುದಿದ್ದರೇ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲೇ ಪ್ರಶ್ನಿಸಬೇಕಿತ್ತು. ಏಕಾಏಕಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಚುನಾವಣೆಗೆ ತಡೆಯಾಜ್ಞೆ ತಂದಿದ್ದು ದುರುದ್ದೇಶ ಪೂರಿತವಾದದ್ದು ಎಂಬುದಾಗಿ ನ್ಯಾಯಾಲಯದ ಗಮನಕ್ಕೆ ತಂದರು.

ಚುನಾವಣೆ ಘೋಷಣೆಯಾಗಿ, ಚುನಾವಣಾ ಪ್ರಕ್ರಿಯೆ ಆರಂಭಗೊಂಡ ವೇಳೆಯಲ್ಲೇ ಚುನಾವಣೆಗೆ ತಡೆಯಾಜ್ಞೆ ನೀಡಿದ್ದು ಸರಿಯಲ್ಲ. ಹಲವು ವರ್ಷಗಳಿಂದ ಹಳೆಯ ಕಮಿಟಿಯವರೇ ಮಾರಿಕಾಂಬ ದೇವಿ ಜಾತ್ರೆಯನ್ನು ನಡೆಸಿಕೊಂಡು ಬಂದಿದ್ದಾರೆ. ಅವ್ಯವಹಾರದಂತ ಆರೋಪಗಳು ಕೇಳಿ ಬಂದಿವೆ. ಈ ಎಲ್ಲದರ ಹಿನ್ನಲೆಯಲ್ಲಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ನೀಡಿರುವಂತ ತಡೆಯಾಜ್ಞೆ ತೆರವುಗೊಳಿಸುವಂತೆ ಮನವಿ ಮಾಡಿದರು.

ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್, ಚುನಾವಣೆಗೆ ಗ್ರೀನ್ ಸಿಗ್ನಲ್

ಈ ವಾದ ಆಲಿಸಿದಂತ ಹೈಕೋರ್ಟ್ ನ್ಯಾಯಪೀಠವು ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ನೀಡಿದ್ದಂತ ತಡೆಯಾಜ್ಞೆಯನ್ನು ತೆರವುಗೊಳಿಸಿ, ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಚುನಾವಣೆ ಪ್ರಕ್ರಿಯೆ ನಡೆಸಿ, ಹೊಸ ಸಮಿತಿಗೆ ಫೆಬ್ರವರಿಯಲ್ಲಿ ನಿಗದಿ ಯಾಗಿರುವಂತ ಜಾತ್ರೆಯನ್ನು ನಡೆಸೋದಕ್ಕೆ ಅಧಿಕಾರ ನೀಡುವಂತೆ ಆದೇಶಿಸಿದೆ. ಅಲ್ಲದೇ ಚುನಾವಣೆ ಬಳಿಕ ಕೋರ್ಟ್ ಗೆ ಮಾಹಿತಿ ನೀಡಲು ಸೂಚಿಸಿದೆ. ಹೀಗಾಗಿ ಮಾರಿಕಾಂಬ ಹಿತರಕ್ಷಣಾ ಸಮಿತಿಯ ಹೋರಾಟಕ್ಕೆ ಭರ್ಜರಿ ಗೆಲುವು ಸಿಕ್ಕಂತೆ ಆಗಿದೆ. ಅಲ್ಲದೇ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಮತ್ತೆ ಚುನಾವಣಾ ಪ್ರಕ್ರಿಯೆ ಗರಿಗೆದರಲಿದೆ.

ಅಂದಹಾಗೇ ಕೊರಚ-ಕೊರಮ ಸಮುದಾಯದ ಪರವಾಗಿ ಹಿರಿಯ ವಕೀಲ ಎಸ್.ವಿ ಪ್ರಕಾಶ್ ವಾದಿಸಿದರೇ, ಮಾರಿಕಾಂಬ ಹಿತರಕ್ಷಣಾ ಸಮಿತಿಯ ಪರವಾಗಿ ಹಿರಿಯ ವಕೀಲ ಸಮಿತ್ ಶಿವಾನಂದ್, ಅಭಿಷೇಕ್ ಅಚ್ಚಯ್ಯ ಮತ್ತು ರವಿಕುಮಾರ್ ವಾದಿಸಿದರು.

ಡಿಶ್ ಗುರು, ಮಂಜುನಾಥ ಎಲ್.ಎಂ ಕುರಿ ಪರವಾಗಿ ಹಿರಿಯ ವಕೀಲ ದಿವಾಕರ್, ಮಾರಿಕಾಂಬ ನ್ಯಾಸ ಪ್ರತಿಷ್ಠಾನದ ಪರವಾಗಿ ಪೃಥ್ವಿ ಹೊಡೆಯರ್ ವಾದಿಸಿದರು. ಆದರೇ ದೇವಸ್ಥಾನದ ಹಾಲಿ ಸಮಿತಿಯ ಯಾರೊಬ್ಬರು ಇಂದಿನ ಹೈಕೋರ್ಟ್ ಕಲಾಪಕ್ಕೆ ಹಾಜರಾಗಿರಲಿಲ್ಲ.

ಈ ವೇಳೆ ಮಾರಿಕಾಂಬ ಹಿತರಕ್ಷಣಾ ಸಮಿತಿಯ ಎಂ.ಡಿ ಆನಂದ್, ವಕೀಲರಾದಂತ ವಿ.ಶಂಕರ್, ಪ್ರೇಮ್ ಸಿಂಗ್, ಬಸವರಾಜ್, ಜಿ.ರವಿಕುಮಾರ್ ಹಾಜರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ಹೀಗಿದೆ ಇಂದು ಬೆಳಗಾವಿಯ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕರಿಸಿದ ವಿಧೇಯಕಗಳ ಪಟ್ಟಿ

Share. Facebook Twitter LinkedIn WhatsApp Email

Related Posts

ಮೈಶುಗರ್ ಭ್ರಷ್ಟಾಚಾರ ಪ್ರಕರಣ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ : ಶಾಸಕ ಗಣಿಗ ರವಿಕುಮಾರ್ ಹೇಳಿಕೆ

15/03/2026 11:41 AM1 Min Read

ALERT : ಹೋಟೆಲ್, ಟೀ ಅಂಗಡಿಯಲ್ಲಿ ‘ಮನೆ ಗ್ಯಾಸ್’ ಬಳಸುವವರೇ ಎಚ್ಚರ : ರಾಜ್ಯಾದ್ಯಂತ `ಅಗತ್ಯ ವಸ್ತುಗಳ ಕಾಯ್ದೆ ಅಡಿ’ 316 ಕೇಸ್ ದಾಖಲು !

15/03/2026 11:30 AM1 Min Read

(ಜೇಷ್ಠಾ ಲಕ್ಷ್ಮಿ) ದರಿದ್ರ ಲಕ್ಷ್ಮೀ ಹೋಗಿ ಸೌಭಾಗ್ಯ ಲಕ್ಷ್ಮಿ ಮನೆಯಲ್ಲಿ ನೆಲೆಸುವ ಸೂತ್ರ..!!

15/03/2026 11:29 AM5 Mins Read
Recent News

ಮೈಶುಗರ್ ಭ್ರಷ್ಟಾಚಾರ ಪ್ರಕರಣ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ : ಶಾಸಕ ಗಣಿಗ ರವಿಕುಮಾರ್ ಹೇಳಿಕೆ

15/03/2026 11:41 AM

ಚಾಟ್‌ಜಿಪಿಟಿ ಹಿಂದಿಕ್ಕಿದ ಸಿಲಿಂಡರ್ ಬುಕ್ಕಿಂಗ್ ಆಪ್‌! ಭಾರತದ ಪ್ಲೇ ಸ್ಟೋರ್‌ನಲ್ಲಿ ‘ಇಂಡಿಯನ್ ಆಯಿಲ್ ಒನ್’ ಅಬ್ಬರ

15/03/2026 11:38 AM

BREAKING : ಕರೂರು ಕಾಲ್ತುಳಿತ ಕೇಸ್ : 3ನೇ ಬಾರಿ ‘CBI’ ವಿಚಾರಣೆಗೆ ಹಾಜರಾದ ‘TVK’ ಪಕ್ಷದ ನಾಯಕ ವಿಜಯ್!

15/03/2026 11:36 AM

BREAKING : ಇರಾನ್ ಸರ್ವೋಚ್ಚ ನಾಯಕ `ಮೊಜ್ತಬಾ ಖಮೇನಿ’ ಸಾವು : ಡೊನಾಲ್ಡ್ ಟ್ರಂಪ್ ಸ್ಪೋಟಕ ಹೇಳಿಕೆ !

15/03/2026 11:35 AM
State News
KARNATAKA

ಮೈಶುಗರ್ ಭ್ರಷ್ಟಾಚಾರ ಪ್ರಕರಣ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ : ಶಾಸಕ ಗಣಿಗ ರವಿಕುಮಾರ್ ಹೇಳಿಕೆ

By kannadanewsnow0515/03/2026 11:41 AM KARNATAKA 1 Min Read

ಮಂಡ್ಯ : ವಿಶ್ವೇಶ್ವರಯ್ಯ ನಾಲಾ ಸೇರಿದಂತೆ ಎಲ್ಲಾ ಶಾಖಾ ನಾಲೆಗಳ ಅಭಿವೃದ್ಧಿಗೆ 100 ಕೋಟಿ ಅನುದಾನ ಸಿಕ್ಕಿದೆ. ಜಲಸಂಪನ್ಮೂಲ ಇಲಾಖೆಯಿಂದ…

ALERT : ಹೋಟೆಲ್, ಟೀ ಅಂಗಡಿಯಲ್ಲಿ ‘ಮನೆ ಗ್ಯಾಸ್’ ಬಳಸುವವರೇ ಎಚ್ಚರ : ರಾಜ್ಯಾದ್ಯಂತ `ಅಗತ್ಯ ವಸ್ತುಗಳ ಕಾಯ್ದೆ ಅಡಿ’ 316 ಕೇಸ್ ದಾಖಲು !

15/03/2026 11:30 AM

(ಜೇಷ್ಠಾ ಲಕ್ಷ್ಮಿ) ದರಿದ್ರ ಲಕ್ಷ್ಮೀ ಹೋಗಿ ಸೌಭಾಗ್ಯ ಲಕ್ಷ್ಮಿ ಮನೆಯಲ್ಲಿ ನೆಲೆಸುವ ಸೂತ್ರ..!!

15/03/2026 11:29 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಬಾಪೂಜಿ ಸೇವಾ ಕೇಂದ್ರಗಳಲ್ಲಿ ಇನ್ಮುಂದೆ `ಜಾತಿ ಮತ್ತು ಆದಾಯ ಪ್ರಮಾಣ ಪತ್ರ’ ಲಭ್ಯ !

15/03/2026 11:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.