ನವದೆಹಲಿ : ನಿರಂತರವಾಗಿ ಸುಳ್ಳುಗಳನ್ನ ಹರಡುತ್ತಿರುವ ಮತ್ತು ಅನಗತ್ಯ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಪಾಕಿಸ್ತಾನದಿಂದ ನಾವು ಇನ್ನೇನು ನಿರೀಕ್ಷಿಸಬಹುದು. ಇತ್ತೀಚೆಗೆ, ಪತ್ರಿಕಾಗೋಷ್ಠಿಯ ಸಮಯದಲ್ಲಿ ಪಾಕಿಸ್ತಾನಿ ಸೇನಾ ಪ್ರತಿನಿಧಿಯೊಬ್ಬರು ಮಹಿಳಾ ಪತ್ರಕರ್ತೆಯೊಬ್ಬರಿಗೆ “ಕಣ್ಣು ಮಿಟುಕಿಸುವ” ಘಟನೆ ವೈರಲ್ ಆಗಿದೆ.
ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಪತ್ರಿಕಾಗೋಷ್ಠಿಯ ಸಮಯದಲ್ಲಿ ಮಹಿಳಾ ಪತ್ರಕರ್ತೆಯೊಬ್ಬರಿಗೆ ಕಣ್ಣು ಹೊಡೆದಿದ್ದು, ಭಾರೀ ಟೀಕೆ ವ್ಯಕ್ತವಾಗ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಈ ವೀಡಿಯೊದಲ್ಲಿ, ಪತ್ರಕರ್ತೆ ಅಬ್ಸಾ ಕೋಮಲ್, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಆರೋಪಗಳ ಕುರಿತು ಅಹ್ಮದ್ ಷರೀಫ್ ಚೌಧರಿ ಅವರ ಮೇಲೆ ಒತ್ತಡ ಹೇರುತ್ತಿರುವುದು ಕಂಡುಬರುತ್ತದೆ. ಸೇನಾ ವಕ್ತಾರರು ಇಮ್ರಾನ್ ಖಾನ್ ರಾಷ್ಟ್ರೀಯ ಭದ್ರತೆಗೆ ಬೆದರಿಕೆ, ರಾಷ್ಟ್ರವಿರೋಧಿ ಮತ್ತು ದೆಹಲಿಗೆ ಅನುಗುಣವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಂತದಲ್ಲಿ, ಅವರು ಪತ್ರಕರ್ತೆಯನ್ನ ನೋಡಿ, ಮುಗುಳ್ನಕ್ಕು “ಕಣ್ಣು ಮಿಟುಕಿಸಿದರು”.
Believe me, he is a top rank army officer in uniform…. pic.twitter.com/GDjduiCY8m
— OsintTV 📺 (@OsintTV) December 9, 2025
ಈ ಘಟನೆ ವಿಡಿಯೋ ವೈರಲ್ ಆಗುತ್ತಿದ್ದು, ಅಹ್ಮದ್ ಷರೀಫ್ ಚೌಧರಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. “ಸಮವಸ್ತ್ರದಲ್ಲಿರುವ ವ್ಯಕ್ತಿ ಇಂತಹ ಕೆಲಸಗಳನ್ನ ಮಾಡಬಹುದೇ?” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಿಂದಲೂ ಚೌಧರಿ ಪಾಕಿಸ್ತಾನ ಸೇನೆಯನ್ನ ಆಗಾಗ್ಗೆ ಹೊಗಳುವುನ್ನ ಕಾಣಬಹುದು. ಇನ್ನು ಅವ್ರು ಒಸಾಮಾ ಬಿನ್ ಲಾಡೆನ್’ಗೆ ಸಹಾಯಕನಾಗಿದ್ದ ಸುಲ್ತಾನ್ ಬಹಿರುದ್ದೀನ್ ಮಹಮೂದ್’ನ ಮಗ ಅನ್ನೋದು ಗಮನಾರ್ಹ.
Good News ; ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ; ಹೊಸ ‘CGHS ನಿಯಮ’ ಬಿಡುಗಡೆ, ಪ್ರಯೋಜನಗಳು ತಿಳಿಯಿರಿ
ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಗೆ ಅಡ್ಡಿಯಲ್ಲ, ಜನರ ಬದುಕಿನ ಆಧಾರ: MLC ದಿನೇಶ್ ಗೂಳಿಗೌಡ
BREAKING : ಇಂಡಿಗೋ ಕಾರ್ಪೊರೇಟ್ ಕಚೇರಿಯಲ್ಲಿ ‘DGCA’ ಮೇಲ್ವಿಚಾರಣೆ, ಪರಿಶೀಲನೆಗಾಗಿ ತಂಡ ನಿಯೋಜಿನೆ








