ಬೆಳಗಾವಿ : ರಾಜ್ಯ ಸರ್ಕಾರವು ಕೇಬಲ್ ಆಪರೇಟರ್ ಗಳಿಗೆ ಸಿಹಿಸುದ್ದಿ ನೀಡಿದ್ದು, ಪ್ರತಿ ಕಂಬಕ್ಕೆ ವಿಧಿಸುವ ಶುಲ್ಕವನ್ನು 150 ರೂ.ನಿಂದ 75 ರೂ.ಗೆ ಇಳಿಸಲಾಗುವುದು ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸೋಮವಾರ ಸದನದಲ್ಲಿ ಕಾಂಗ್ರೆಸ್ ಸದಸ್ಯ ಬಸ್ ಬಾನು ಅವರ ಪ್ರಶ್ನೆಗೆ ಸಚಿವರು, ರಾಜ್ಯದ ಕೇಬಲ್ ಆಪರೇಟರ್ಗಳಿಗೆ ಪ್ರತಿ ಕಂಬಕ್ಕೆ ವಿಧಿಸುವ ಶುಲ್ಕವನ್ನು 150 ರೂ.ನಿಂದ 75 ರೂ.ಗೆ ಇಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ರಾಜ್ಯದಲ್ಲಿ ಕೇಬಲ್ ಆಪರೇಟರುಗಳು ತಮ್ಮ ಕೆಲಸಕ್ಕೆ ಪರವಾನಗಿ ಸೇರಿ ವಿವಿಧ ಶುಲ್ಕ ಪಾವತಿಸಬೇಕಿದೆ. ಇತ್ತೀಚೆಗೆ ಬ್ರಾಂಡ್ಬ್ಯಾಂಡ್ ಬಳಿಕ ಕೇಬಲ್ ಬಳಕೆ ಕಡಿಮೆಯಾಗಿದೆ. ಅಲ್ಲದೇ ಗ್ರಾಮೀಣ, ಮಲೆನಾಡು ಕಡೆ ಸಂಪರ್ಕ ನೀಡಲು ಹೆಚ್ಚಿನ ವಿದ್ಯುತ್ ಕಂಬ ಬಳಸಬೇಕಿದೆ. ಹೀಗಾ ಗಿ ಮೊದಲಿನಂತೆ ಆದಾಯ ಕೇಬಲ್ ಆಪರೇಟರುಗಳಿಗಿಲ್ಲ. ಪ್ರತಿ ಕಂಬಕ್ಕೆ ಹಾಲಿ ವಿಧಿಸುತ್ತಿರುವ 150 ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.








