ನವದೆಹಲಿ : ಭಾರತದ ಅನುಭವಿ ಆಟಗಾರ ರೋಹಿತ್ ಶರ್ಮಾ ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 20000 ರನ್’ಗಳನ್ನು ಪೂರೈಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ತಮ್ಮ 27ನೇ ರನ್ ಗಳಿಸುವ ಮೂಲಕ ಈ ಮೈಲಿಗಲ್ಲು ಸಾಧಿಸಿದರು.
ಪಂದ್ಯಕ್ಕೆ ಕಾಲಿಟ್ಟ ರೋಹಿತ್ 19973 ರನ್ ಗಳಿಸಿದ್ದರು ಮತ್ತು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಭಾರತದ 271 ರನ್’ಗಳ ಗುರಿಯನ್ನ ಆತ್ಮವಿಶ್ವಾಸದಿಂದ ಆರಂಭಿಸಿದರು, ಕೆಲವು ಬೌಂಡರಿಗಳನ್ನ ಬಾರಿಸಿ 27ನೇ ರನ್ ಗಳಿಸಿದರು, ಇದು ಅವರಿಗೆ ದೊಡ್ಡ ದಾಖಲೆಯನ್ನ ತಂದುಕೊಟ್ಟಿತು ಮತ್ತು ಅವರನ್ನ ಆಟಗಾರರ ಗಣ್ಯರ ಪಟ್ಟಿಯಲ್ಲಿ ಸೇರಿಸಿತು.
ಈ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜರು ಕೂಡ ಇದ್ದಾರೆ.
ಅತಿ ನಿದ್ದೆಯೂ ಅಪಾಯಕಾರಿ ; ನಿಮ್ಮ ವಯಸ್ಸಿಗೆ ತಕ್ಕಂತೆ ಯಾರು ಎಷ್ಟು ಹೊತ್ತು ಮಲಗ್ಬೇಕು ಗೊತ್ತಾ.?
ಅತಿ ನಿದ್ದೆಯೂ ಅಪಾಯಕಾರಿ ; ನಿಮ್ಮ ವಯಸ್ಸಿಗೆ ತಕ್ಕಂತೆ ಯಾರು ಎಷ್ಟು ಹೊತ್ತು ಮಲಗ್ಬೇಕು ಗೊತ್ತಾ.?








