ಬೆಂಗಳೂರು: ಕೆಸೆಟ್ ಪರೀಕ್ಷೆ 2023, 2024, 2025ರಲ್ಲಿ ಪಾಸ್ ಆಗಿರುವಂತ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗುಡ್ ನ್ಯೂಸ್ ನೀಡಿದೆ. ಅದೇ ಒಂದು ಬಾರಿಗೆ ದಾಖಲಾತಿ ಪರಿಶೀಲನೆಗೆ ಅವಕಾಶ ನೀಡಿದ್ದು, ಸ್ಥಳದಲ್ಲೇ ಪ್ರಮಾಣ ಪತ್ರ ವಿತರಿಸೋದಕ್ಕೆ ನಿರ್ಧರಿಸಲಾಗಿದೆ.
ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದಂತ ಹೆಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದು, KSET: 2023, 2024 ಮತ್ತು 2025ರ ಕೆ-ಸೆಟ್ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅನೇಕರು ನಾನಾ ಕಾರಾಣಗಳಿಂದ ದಾಖಲೆ ಪರಿಶೀಲನೆಗೆ ಹಾಜರಾಗಿರುವುದಿಲ್ಲ. ಅಂತಹವರ ಅನುಕೂಲಕ್ಕೆ ಡಿ.10 ಮತ್ತು 11ರಂದು ದಾಖಲೆ ಪರಿಶೀಲನೆ ಮತ್ತು ಪ್ರಮಾಣ ಪತ್ರ ನೀಡುವ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದಿದ್ದಾರೆ.
ಡಿ.10, 11ರಂದು ಮೂಲ ದಾಖಲೆಗಳ ಸಮೇತ ಬಂದು ಪರಿಶೀಲನೆ ಮಾಡಿಸಿಕೊಳ್ಳಬೇಕು. ಎಲ್ಲವೂ ಸರಿ ಇದ್ದರೆ ಸ್ಥಳದಲ್ಲೇ ಪ್ರಮಾಣ ಪತ್ರ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ KEA ವೆಬ್ ಸೈಟ್ ನೋಡಿ ಎಂಬುದಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
#KSET: 2023, 2024 ಮತ್ತು 2025ರ ಕೆ-ಸೆಟ್ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅನೇಕರು ನಾನಾ ಕಾರಾಣಗಳಿಂದ ದಾಖಲೆ ಪರಿಶೀಲನೆಗೆ ಹಾಜರಾಗಿರುವುದಿಲ್ಲ. ಅಂತಹವರ ಅನುಕೂಲಕ್ಕೆ ಡಿ.10 ಮತ್ತು 11ರಂದು ದಾಖಲೆ ಪರಿಶೀಲನೆ ಮತ್ತು ಪ್ರಮಾಣ ಪತ್ರ ನೀಡುವ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಆ ಪ್ರಕಾರ ಮೂಲ ದಾಖಲೆಗಳ ಸಮೇತ ಬಂದು ಪರಿಶೀಲನೆ… pic.twitter.com/dj2fTOFfGG
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) December 6, 2025
ದಕ್ಷಿಣ ಆಫ್ರಿಕಾದಲ್ಲಿ ಭೀಕರ ಗುಂಡಿನ ದಾಳಿ: ಮೂವರು ಮಕ್ಕಳು ಸೇರಿದಂತೆ 11 ಮಂದಿ ಸಾವು
BREAKING : ಕೆಲಸದ ನಂತರ ಕರೆ-ಇಮೇಲ್ ಗೆ ಉತ್ತರಿಸುವ ಅಗತ್ಯವಿಲ್ಲ : ಸಂಸತ್ತಿನಲ್ಲಿ ಮಂಡನೆಯಾಯ್ತು ಹೊಸ ಮಸೂದೆ!








