ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಡಿ.7ರ ನಾಳೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಕೆಲ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಎಂಬುದಾಗಿ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ದಿನಾಂಕ 07.12.2025 ರ ಭಾನುವಾರದಂದು ತುರ್ತು ಕೆಲಸದ ನಿಮಿತ್ತ ಎಫ್-7 ಮಂಗಳಬೀಸು, ಚಂದ್ರಮಾವಿನಕೊಪ್, ಇಂಡಸ್ಟ್ರಿಯಲ್ ಏರಿಯಾ, ಕೆ.ಎ.ಐ.ಡಿ.ಬಿ ಇಂಡಸ್ಟ್ರಿಯಲ್ ವಸಾಹತು, ಅಗ್ರಹಾರ, ಹೆರಿಗೆ ಆಸ್ಪತ್ರೆ ಸುತ್ತ ಮುತ್ತ ಬೆಳಲಮಕ್ಕಿ, ಬಸವನಹೊಳೆ, ಜಂಬುಗಾರು ತ್ಯಾಗರ್ತಿ ಕ್ರಾಸ್ ಹಾಗೂ ಗ್ರಾಮೀಣ ಭಾಗದ ಎಫ್-18 ಬಳಸಗೋಡು ಪೀಡರ್ ವ್ಯಾಪ್ತಿಯ ವಾಲ, ಬಳಸಗೋಡು, ಎಳವರಸೆ, ಜೋಗಿನಗದ್ದೆ ಹಾಗೂ ಪುರ್ಲೇಮಕ್ಕಿ ಪ್ರದೇಶಗಳಿಗೆ ಬೆಳಗ್ಗೆ 10:00 ಘಂಟೆಯಿಂದ ಸಂಜೆ 5:00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದಿದೆ.
BREAKING: ಎಲ್ಲಾ ಏರ್ ಲೈನ್ಸ್ ಗಳಿಗೆ ಏಕರೂಪದ ಟಿಕೆಟ್ ದರ ನಿಗದಿಗೊಳಿಸಿ ವಿಮಾನಯಾನ ಸಚಿವಾಲಯ ಆದೇಶ
BREAKING : ಕೆಲಸದ ನಂತರ ಕರೆ-ಇಮೇಲ್ ಗೆ ಉತ್ತರಿಸುವ ಅಗತ್ಯವಿಲ್ಲ : ಸಂಸತ್ತಿನಲ್ಲಿ ಮಂಡನೆಯಾಯ್ತು ಹೊಸ ಮಸೂದೆ!








