ಶಿವಮೊಗ್ಗ : ಜನವರಿ.3 ಮತ್ತು 4ರಂದು ರಜತ ಸಾಗರೋತ್ಸವ ಅತ್ಯಂತ ವಿಶೇಷವಾಗಿ ಆಯೋಜಿಸಿದೆ. ಸಹೃದಯ ಬಳಗ ಎರಡೂವರೆ ದಶಕಗಳಿಂದ ಇಂತಹ ವಿಶೇಷ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಅನುಕರಣೀಯವಾಗಿದೆ ಎಂದು ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸಾಗರದ ಸಹೃದಯ ಬಳಗದ ವತಿಯಿಂದ ಜ. 3 ಮತ್ತು 4ರಂದು ನಡೆಯಲಿರುವ ರಜತ ಸಾಗರೋತ್ಸವದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ, ಮಾತನಾಡಿದಂತ ಅವರು, ಸಾಗರೋತ್ಸವ ಹೆಸರಿನಲ್ಲಿ ಎಲೆಮರೆಯ ಕಾಯಿಯಂತೆ ಇರುವ ಸಾಧಕರನ್ನು ಸನ್ಮಾನಿಸುವುದು, ವಿವಿಧ ಸಾಂಸ್ಕೃತಿಕ ವೈಭವ, ನಗೆಹಬ್ಬದಂತಹ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ತಾಲ್ಲೂಕಿನ ಇತಿಹಾಸದ ಮೇಲೆ ಬೆಳಕು ಚೆಲ್ಲಲು ಇತಿಹಾಸ ಸಮ್ಮೇಳನ, ಆಹಾರ ಮೇಳ ನಡೆಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಭಗವದ್ಗೀತೆ ಅಭಿಯಾನ ಸಮಿತಿ ಅಧ್ಯಕ್ಷ ಕೆ.ವಿ.ಜಯರಾಮ್ ಮಾತನಾಡಿ, ಪ್ರತಿವರ್ಷ ಒಂದು ದಿನ ನಡೆಯುತ್ತಿದ್ದ ಸಾಗರೋತ್ಸವ ಈ ಬಾರಿ ರಜತ ಮಹೋತ್ಸವ ಅಂಗವಾಗಿ ಎರಡು ದಿನ ನಡೆಯುತ್ತಿದೆ. ಸಹೃದಯ ಬಳಗ ಅತ್ಯಂತ 25 ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಮನುಷ್ಯನ ಬದುಕಿಗೆ ಸಹೃದಯತೆ ಅತ್ಯಾಗತ್ಯ. ಸಹೃದಯ ಬಳಗ ಸಹೃದಯತೆಯನ್ನು ಬಿತ್ತುವ ಶ್ರೇಷ್ಟ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಸಹೃದಯ ಬಳಗದ ಅಧ್ಯಕ್ಷ ಜಿ.ನಾಗೇಶ್, ಉಪಾಧ್ಯಕ್ಷ ವಿ.ಟಿ.ಸ್ವಾಮಿ, ಕಾರ್ಯದರ್ಶಿ ಲೋಕೇಶ ಕುಮಾರ್, ಕೋಶಾಧ್ಯಕ್ಷ ಗಿರೀಶ್ ರಾಯ್ಕರ್, ಪ್ರಮುಖರಾದ ಎಚ್.ಜಿ.ಸುಬ್ರಹ್ಮಣ್ಯ ಭಟ್, ಜಿ.ಎಚ್.ಶಿವಯೋಗಿ, ಸತೀಶ್ ಆರ್., ಶ್ರೀನಾಥ್, ಫ್ರಾಂಕಿ ಫರ್ನಾಂಡಿಸ್, ಡಾ.ವೆಂಕಟೇಶ್ ಜೋಯಿಸ್, ಎಸ್.ಬಸವರಾಜ್, ಬಿ.ಡಿ.ರವಿಕುಮಾರ್ ಇನ್ನಿತರರು ಹಾಜರಿದ್ದರು.
ಡಿ.23, 24ರಂದು ಸಾಗರದ ‘ಪದವಿ ಪೂರ್ವ ಕಾಲೇಜು ಸುವರ್ಣ ಮಹೋತ್ಸವ’ ಆಚರಣೆ: ಶಾಸಕ ಗೋಪಾಲಕೃಷ್ಣ ಬೇಳೂರು
ನಾನು, ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದು ನಿಜ: ಡಿಸಿಎಂ ಡಿ.ಕೆ. ಶಿವಕುಮಾರ್








