ನವದೆಹಲಿ : ದೇವಸ್ಥಾನಕ್ಕೆ ದೇಣಿಗೆಯಾಗಿ ಸ್ವೀಕರಿಸಿದ ಹಣದ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ಹೇಳಿಕೆ ನೀಡಿದೆ. ದೇವಸ್ಥಾನಕ್ಕೆ ದೇಣಿಗೆ ನೀಡುವ ಹಣ ದೇವರಿಗೆ ಸೇರಿದ್ದು, ಅದನ್ನು ಯಾವುದೇ ಸಹಕಾರಿ ಬ್ಯಾಂಕ್’ನ್ನ ಉಳಿಸಲು ಅಥವಾ ಶ್ರೀಮಂತಗೊಳಿಸಲು ಬಳಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಕೇರಳದ ಕೆಲವು ಸಹಕಾರಿ ಬ್ಯಾಂಕ್’ಗಳ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದ್ದು, ತಿರುನೆಲ್ಲಿ ದೇವಸ್ಥಾನ ದೇವಸ್ವಂನ ಠೇವಣಿಗಳನ್ನು ಹಿಂದಿರುಗಿಸುವಂತೆ ಕೇರಳ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ, ಕೇರಳ ಹೈಕೋರ್ಟ್‌ನ ಆದೇಶದಲ್ಲಿ ಏನು ತಪ್ಪಿದೆ ಎಂದು ಸುಪ್ರೀಂ ಕೋರ್ಟ್ ಕೇಳಿತು.
ದೇವಾಲಯದ ಹಣವನ್ನು ದೇವಾಲಯದ ಕೆಲಸಗಳಿಗೆ ಮಾತ್ರ ಬಳಸಬೇಕು : ಸಿಜೆಐ
ವರದಿಯ ಪ್ರಕಾರ, ಸಿಜೆಐ ಸೂರ್ಯ ಕಾಂತ್, “ನೀವು ದೇವಸ್ಥಾನದ ಹಣವನ್ನು ಬ್ಯಾಂಕನ್ನು ಉಳಿಸಲು ಬಳಸಬಯಸುತ್ತೀರಿ. ಹೆಚ್ಚಿನ ಬಡ್ಡಿಯನ್ನ ಪಾವತಿಸಬಹುದಾದ ಸಹಕಾರಿ ಬ್ಯಾಂಕಿನಲ್ಲಿ ಉಳಿಯುವ ಬದಲು ದೇವಸ್ಥಾನದ ಹಣವು ರಾಷ್ಟ್ರೀಯ ಬ್ಯಾಂಕ್’ಗೆ ಹೋಗುವುದರಲ್ಲಿ ಏನು ತಪ್ಪಿದೆ?” ಎಂದು ಕೇಳಿದರು. “ದೇವಾಲಯದ ಹಣವು ದೇವರಿಗೆ ಸೇರಿದೆ. ಆದ್ದರಿಂದ, ಅದನ್ನು ರಕ್ಷಿಸಬೇಕು, ಸಂರಕ್ಷಿಸಬೇಕು ಮತ್ತು ದೇವಸ್ಥಾನಕ್ಕೆ ಮಾತ್ರ ಬಳಸಬೇಕು. ಅದು ಸಹಕಾರಿ ಬ್ಯಾಂಕಿನ ಆದಾಯ ಅಥವಾ ಅಸ್ತಿತ್ವದ ಆಧಾರವಾಗಲು ಸಾಧ್ಯವಿಲ್ಲ” ಎಂದರು.
ಅರ್ಜಿದಾರರಾದ ಬ್ಯಾಂಕುಗಳು ಸುಪ್ರೀಂ ಕೋರ್ಟ್’ನಲ್ಲಿ ಈ ವಾದವನ್ನು ಮಂಡಿಸಿದವು.!
ಅರ್ಜಿ ಸಲ್ಲಿಸಿದ ಬ್ಯಾಂಕ್’ಗಳನ್ನು ಪ್ರತಿನಿಧಿಸಿದ ವಕೀಲ ಮನು ಕೃಷ್ಣನ್, ಎರಡು ತಿಂಗಳೊಳಗೆ ಠೇವಣಿಗಳನ್ನು ಹಿಂದಿರುಗಿಸುವಂತೆ ಹೈಕೋರ್ಟ್‌ನ “ಹಠಾತ್” ನಿರ್ದೇಶನವು ತೊಂದರೆಗಳನ್ನು ಸೃಷ್ಟಿಸುತ್ತಿದೆ ಎಂದು ವಾದಿಸಿದರು. ಇದಕ್ಕೆ ಸಿಜೆಐ, “ನೀವು ಸಾರ್ವಜನಿಕರೊಂದಿಗೆ ನಿಮ್ಮ ವಿಶ್ವಾಸಾರ್ಹತೆಯನ್ನು ಸ್ಥಾಪಿಸಬೇಕು. ನೀವು ಗ್ರಾಹಕರು ಮತ್ತು ಠೇವಣಿಗಳನ್ನು ಆಕರ್ಷಿಸಲು ಸಾಧ್ಯವಾಗದಿದ್ದರೆ, ಅದು ನಿಮ್ಮ ಸಮಸ್ಯೆ” ಎಂದು ಹೇಳಿದರು.
ಸಹಕಾರಿ ಬ್ಯಾಂಕುಗಳು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದೇಕೆ?
ಗಡುವು ಮುಗಿದ ತಕ್ಷಣ ಠೇವಣಿಗಳನ್ನು ಹಿಂದಿರುಗಿಸುವ ಜವಾಬ್ದಾರಿ ಬ್ಯಾಂಕ್‌ಗೆ ಇದೆ ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು. ಠೇವಣಿಗಳನ್ನು ಮುಚ್ಚುವುದನ್ನು ಬ್ಯಾಂಕ್ ವಿರೋಧಿಸುವುದಿಲ್ಲ, ಆದರೆ ಹಣವನ್ನು ಹಿಂದಿರುಗಿಸಲು ಹಠಾತ್ ಆದೇಶವು ತೊಂದರೆಗಳನ್ನು ಉಂಟುಮಾಡುತ್ತದೆ ಎಂದು ವಕೀಲರು ಪ್ರತಿಪಾದಿಸಿದರು.
ಬ್ಯಾಂಕುಗಳ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್.!
ಸುಪ್ರೀಂ ಕೋರ್ಟ್ ಅರ್ಜಿಗಳನ್ನು ವಜಾಗೊಳಿಸಿತು, ಆದರೆ ಅರ್ಜಿದಾರರಿಗೆ ಅವಧಿ ವಿಸ್ತರಣೆಗಾಗಿ ಕೇರಳ ಹೈಕೋರ್ಟ್ ಅನ್ನು ಸಂಪರ್ಕಿಸಲು ಸ್ವಾತಂತ್ರ್ಯವನ್ನು ನೀಡಿತು. ಆಗಸ್ಟ್‌ನಲ್ಲಿ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠದ ತೀರ್ಪನ್ನು ಪ್ರಶ್ನಿಸಿ ಮನಾಥನವಾಡಿ ಕೋ-ಆಪರೇಟಿವ್ ಅರ್ಬನ್ ಸೊಸೈಟಿ ಲಿಮಿಟೆಡ್ ಮತ್ತು ತಿರುನೆಲ್ಲಿ ಸರ್ವಿಸ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಈ ಅರ್ಜಿಗಳನ್ನು ಸಲ್ಲಿಸಿದ್ದವು. ತಿರುನೆಲ್ಲಿ ದೇವಸ್ಥಾನ ದೇವಸ್ವಂನ ಎಲ್ಲಾ ಠೇವಣಿಗಳನ್ನು ಎರಡು ತಿಂಗಳೊಳಗೆ ಹಿಂದಿರುಗಿಸುವಂತೆ ಕೇರಳ ಹೈಕೋರ್ಟ್ ಆಯಾ ಬ್ಯಾಂಕ್‌ಗಳಿಗೆ ಆದೇಶಿಸಿತ್ತು.
BREAKING : 72 ಬಿಲಿಯನ್ ಡಾಲರ್’ಗೆ ‘ವಾರ್ನರ್ ಬ್ರದರ್ಸ್’ ಖರೀದಿಸಲು ‘ನೆಟ್ಫ್ಲಿಕ್ಸ್’ ಒಪ್ಪಿಗೆ
BREAKING ; ಮಕ್ಕಳು, ಹಿರಿಯ ನಾಗರಿಕರು ಸಮಸ್ಯೆಯಾಗದಂತೆ ನೋಡಿಕೊಳ್ಳಲು ಏರ್ಪೋರ್ಟ್’ಗಳಿಗೆ ಕೇಂದ್ರ ಸಚಿವರ ನಿರ್ದೇಶನ








