ಬೆಂಗಳೂರು: ಎಲ್ಲಾ ಏತ ನೀರಾವರಿ ಯೋಜನೆಗಳಲ್ಲಿ ಇಂಧನ ಪರಿಶೀಲನೆ ಮತ್ತು ಉಳಿತಾಯದ ಯಾಂತ್ರಿಕತೆಯ ಕಾರ್ಯವಿಧಾನಗಳನ್ನು ಶಿಸ್ತುಬದ್ಧವಾಗಿ ಅನುಷ್ಠಾನ ಮಾಡಿದರೆ, ಇಲಾಖೆಗೆ ಬಹಳಷ್ಟು ಹಣ ಉಳಿತಾಯವಾಗಲಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಬಿ.ಕೆ.ಪವಿತ್ರ ಹೇಳಿದರು.
ಸಣ್ಣ ನೀರಾವರಿ ಇಲಾಖೆಯು ವಿಶ್ವಬ್ಯಾಂಕ್ ಸಹಯೋಗದೊಂದಿಗೆ ಸಚಿವಾಲಯ ಕ್ಲಬ್‌ನಲ್ಲಿ `ಇಂಧನ ಲೆಕ್ಕಪರಿಶೋಧನೆ ಮತ್ತು ಇಂಧನ ಉಳಿತಾಯಕ್ಕೆ ಪ್ರಮುಖ ಕಾರ್ಯತಂತ್ರ’ ಎಂಬ ವಿಷಯ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಏತ ನೀರಾವರಿ ಯೋಜನೆಗಳನ್ನು ಈಗಾಗಲೇ ನಮ್ಮ ರಾಜ್ಯದಲ್ಲಿ ಹಲವು ಕಡೆ ಕೈಗೆತ್ತುಕೊಂಡಿದ್ದೇವೆ. ಇದರಲ್ಲಿ ವೃಷಭಾವತಿ ವ್ಯಾಲಿ ಕೆರೆ ಯೋಜನೆ ಕೂಡ ಒಂದಾಗಿದೆ. ನಾವು ಇದರ ಅನುಷ್ಠಾನದ ವೇಳೆ ಸೂಕ್ತವಾದ ಇಂಧನ ಪರಿಶೀಲನೆ ಮತ್ತು ಉಳಿತಾಯದ ಯಾಂತ್ರಿಕತೆಯನ್ನು ಬಳಸಿಕೊಂಡಿದ್ದೇ ಆದಲ್ಲಿ, ನೀರಾವರಿ ಇಲಾಖೆಗೆ ಎದುರಾಗುವ ಆರ್ಥಿಕ ನಷ್ಟದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಅಲ್ಲದೆ, ಯಂತ್ರೋಪಕರಣಗಳು ಸಹ ಹೆಚ್ಚಿನ ಕಾಲ ಕಾರ್ಯನಿರ್ವಹಿಸುವುದರಿಂದ ಇದರ ನಿರ್ವಹಣೆಯ ಸಮಸ್ಯೆ ಕೂಡ ಎದುರಾಗುವುದಿಲ್ಲ ಎಂದರು.

ವಿಶ್ವಬ್ಯಾಂಕ್‌ನ ಪ್ರತಿನಿಧಿ ಹಾಗೂ ಇಂಧನ ತಜ್ಞ ಅಲ್ಬರ್ಟ್ ವಿಲಿಯಂ ಭಾಗವಹಿಸಿ, ಇಂಧನ ದಕ್ಷತೆ, ಇಂಧನದ ಮೂಲಭೂತಗಳು, ಯಂತ್ರೋಪಕರಣಗಳ ನಿಯಂತ್ರಣ ವಿಧಾನಗಳು, ಈ ವೇಳೆ ಎದುರಾಗುವ ಸಮಸ್ಯೆಗಳ ಬಗ್ಗೆ ತಿಳಿಸಿಕೊಟ್ಟರು.
ಈ ಕಾರ್ಯಾಗಾರದಲ್ಲಿ ವಿಶ್ವಬ್ಯಾಂಕ್ ವೃಷಭಾವತಿ ವ್ಯಾಲಿ ಕೆರೆ ತುಂಬುವ ಯೋಜನೆ 2ನೇ ಹಂತಕ್ಕೆ 250 ಕೋಟಿ ರೂ. ಅನುದಾನ ನೀಡಿದೆ. ಇದರ ಭಾಗವಾಗಿ ಕಾಮಗಾರಿಯ ವೇಳೆ ಅನುಸರಿಸಬೇಕಾದ ಕೆಲವು ವಿಚಾರಗಳನ್ನು ಚರ್ಚಿಸಿತು.
BREAKING: ರಾಜ್ಯದ ಮೆಕ್ಕೆ ಜೋಳ ಬೆಳೆಗಾರರಿಗೆ ಗುಡ್ ನ್ಯೂಸ್: ಕುಕ್ಕುಟ ಆಹಾರ ಉತ್ಪಾದಕರು ಖರೀದಿಸಲು ಸರ್ಕಾರ ಅನುಮತಿ
ಸೆ.13ರಂದು ಮಹಿಳಾ ನೌಕರರ ದಿನಾಚರಣೆ ಘೋಷಣೆ: ಸಿಎಂ ಸಿದ್ದರಾಮಯ್ಯ ಭರವಸೆ








