ಬೆಂಗಳೂರು : ಕೇರಳ ರಾಜ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ಕೇರಳಿಗರಿಗೆ 3 ದಿನ ವೇತನ ಸಹಿತ ರಜೆ ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದು, ಜೆಡಿಎಸ್ ಡಿ.ಕೆ. ಶಿವಕುಮಾರ್ ನೀವು ಕರ್ನಾಟಕದ ಉಪಮುಖ್ಯಮಂತ್ರಿಯೋ ಅಥವಾ ಕೇರಳದ ಜನಪ್ರತಿನಿಧಿಯೋ ? ಎಂದು ಪ್ರಶ್ನಿಸಿದೆ.
ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಹಾಕಲು ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕೇರಳಿಗರಿಗೆ 3 ದಿನಗಳ ವೇತನ ಸಹಿತ ರಜೆ ನೀಡುವಂತೆ ಪತ್ರ ಬರೆದು ಮುತುವರ್ಜಿ ತೋರಿದ್ದೀರಿ.
ಕೇರಳದ ವಲಸೆ ಕಾರ್ಮಿಕರ ಬಗ್ಗೆ ಇರುವ ಕಾಳಜಿ ಕನ್ನಡಿಗರ ಬಗ್ಗೆ ಇಲ್ಲವಾಯಿತೆ ? ಯುವಕರಿಗೆ ಯುವ ನಿಧಿ ಕೊಡುವ ಬಗ್ಗೆ ಗಮನವಿಲ್ಲ, 10 ಕೆ.ಜಿ ಅಕ್ಕಿಯನ್ನು 2.5 ವರ್ಷವಾದರೂ ಪ್ರತಿ ತಿಂಗಳು ಕೊಡಲು ನಿಮ್ಮಿಂದ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಿಂದ ದಿನನಿತ್ಯ ಜನರು ಸಾಯುತ್ತಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ನಿಮ್ಮ ಕೊಡುಗೆ ಏನು ? ರಾಜ್ಯದಲ್ಲಿ ಕನಿಷ್ಠ ಮೂಲಸೌಕರ್ಯ ಇಲ್ಲದೆ, ಅಭಿವೃದ್ಧಿ ಇಲ್ಲದೆ ಜನರು ಅದಕ್ಷ Indian National Congress – Karnataka ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ.
ನೀವು ನೋಡಿದರೆ ಕೇರಳ ರಾಜ್ಯದ ಚುನಾವಣಾ ಏಜೆಂಟ್ನಂತೆ ಕಾಂಗ್ರೆಸ್ ಪರವಾಗಿ ಮತಹಾಕಿಸುವ ಕೆಲಸ ಮಾಡುತಿದ್ದೀರಿ. ಇನ್ನಾದರೂ ಡಿಸಿಎಂ ಆಗಿ ನಮ್ಮ ಕರ್ನಾಟಕ ರಾಜ್ಯದ ಜನರ ಪರವಾಗಿ ಕೆಲಸ ಮಾಡಿ. “ಮನೆಗೆ ಮಾರಿ, ಪರರಿಗೆ ಉಪಕಾರಿ” ಎಂಬ ಮಾತು ನಿಮ್ಮಂತವರನ್ನು ನೋಡಿಯೇ ಹೇಳಿರಬೇಕು ಎಂದು ಪೋಸ್ಟ್ ಮಾಡಿದೆ.
' @DKShivakumar ನೀವು ಕರ್ನಾಟಕದ ಉಪಮುಖ್ಯಮಂತ್ರಿಯೋ ಅಥವಾ ಕೇರಳದ ಜನಪ್ರತಿನಿಧಿಯೋ ?
ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಹಾಕಲು ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕೇರಳಿಗರಿಗೆ 3 ದಿನಗಳ ವೇತನ ಸಹಿತ ರಜೆ ನೀಡುವಂತೆ ಪತ್ರ ಬರೆದು ಮುತುವರ್ಜಿ ತೋರಿದ್ದೀರಿ.
ಕೇರಳದ ವಲಸೆ ಕಾರ್ಮಿಕರ ಬಗ್ಗೆ ಇರುವ ಕಾಳಜಿ ಕನ್ನಡಿಗರ ಬಗ್ಗೆ… pic.twitter.com/eFaSx4UcJi
— Janata Dal Secular (@JanataDal_S) December 4, 2025








