ಬೆಂಗಳೂರು : National Council for Teacher Education ಹಾಗೂ Department of State Educational Research and Training ನಿಂದ 2025-26ನೇ ಸಾಲಿನಲ್ಲಿ ಮಾನ್ಯತೆ ಪಡೆದಿರುವ ಸರ್ಕಾರಿ/ಅರೆ ಸರ್ಕಾರಿ/ ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ದಾಖಲಾತಿ ಹೊಂದಿ, ಬಿ.ಎಡ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ ಬೌದ್ಧ ಮತ್ತು ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗೆ ರೂ 25,000 ಗಳ ವಿಶೇಷ ಪ್ರೋತ್ಸಾಹಧನ ಮಂಜೂರು ಮಾಡಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಅರ್ಹ ಅಲ್ಪಸಂಖ್ಯಾತರ ಸಮುದಾಯದ ಬಿ.ಎಡ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಲ್ಲಾ ಅಗತ್ಯ ದಾಖಲೆಗಳ ಸಹಿತ ಸಂಬAಧಿಸಿದ ಕಾಲೇಜು ಪ್ರಾಂಶುಪಾಲರಿAದ ದೃಢೀಕರಿಸಿ ಆನ್‌ಲೈನ್ ಅರ್ಜಿಯನ್ನು https://sevasindhu.karnataka.gov.in/ ಲಿಂಕ್ ಮುಖಾಂತರ ಡಿ.02 ರಿಂದ ಡಿ.31 ರವರೆಗೆ ಸಂಜೆ 5.30 ಗಂಟೆಯೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿದೆ.
ಅರ್ಹತೆ ಮತ್ತು ಷರತ್ತುಗಳು: ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅಭ್ಯರ್ಥಿಯು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ ಬೌದ್ಧ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿರಬೇಕು. ಅಭ್ಯರ್ಥಿಗಳ ಪೋಷಕರ ವಾರ್ಷಿಕ ಆದಾಯವು ಗರಿಷ್ಠ ರೂ 6 ಲಕ್ಷ ಮೀರಿರಬಾರದು. ವಿದ್ಯಾರ್ಥಿಗಳನ್ನು ಅನುದಾನದ ಲಭ್ಯತೆಯನುಸಾರ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಸದರಿ ಯೋಜನೆಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿರುವ ಬಗ್ಗೆ ಹಾಗೂ NPCI Mapping Active ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.
ಹೆಚ್ಚಿನ ಮಾಹಿತಿ ಮತ್ತು ಷರತ್ತುಗಳಿಗಾಗಿ ಅಭ್ಯರ್ಥಿಗಳು ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಅಧಿಕೃತ ವೆಬ್‌ಸೈಟ್ https://dom.karnataka.gov.in ವೆಬ್‌ಸೈಟ್‌ಗೆ ಸಂಪರ್ಕಿಸುವAತೆ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ ಬೇಕಾದ ವಿಳಾಸ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಆಕಾಶವಾಣಿ ಹಿಂಭಾಗ, ಸಾಲಗಾಮೆ ಮುಖ್ಯ ರಸ್ತೆ, ಹಾಸನ. ದೂರವಾಣಿ ಸಂಖ್ಯೆ: 08172-268373 / 08172-267373 ಅಥವಾ ಜಿಲ್ಲಾ ಮತ್ತು ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.








