ಕರ್ನಾಟಕ ಅರ್ಹತಾ ಪರೀಕ್ಷೆ 2025ರ ಅರ್ಹತಾ ಪರೀಕ್ಷೆಯು ಡಿಸೆಂಬರ್ 07, 2025 ರಂದು ನಡೆಯಲಿದ್ದು, ಪರೀಕ್ಷೆಯು ಎರಡು ಅವಧಿಯಲ್ಲಿ ನಡೆಯುತ್ತದೆ ಬೆಳಿಗ್ಗೆ 9. 30 ರಿಂದ 12 ಗಂಟೆವರೆಗೆ ಮತ್ತು ಮದ್ಯಾಹ್ನದ 2 ರಿಂದ 4.30 ರ ವರೆಗೆ ಪರೀಕ್ಷೆಯು ನಡೆಯುತ್ತದೆ. ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆಯು ಉದ್ಯೋಗ ಪಡೆಯುದಕ್ಕಾಗಿ ಅರ್ಹತಾ ಪರೀಕ್ಷೆಯಾಗಿದೆ. ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು ಹಾಗೂ ಮೊಬೈಲ್, ಬ್ಲೂಟೂತ್, ಸ್ಮಾರ್ಟ್ ವಾಚ್ ಸೇರಿದಂತೆ ಅತ್ಯಾಧುನಿಕ ತಾಂತ್ರಿಕ ಸಾಧನ ಸಲಕರಣೆಗಳನ್ನು ಪರೀಕ್ಷಾ ಕೊಠಡಿಗೆ ತರದಂತೆ ಮತ್ತು ಬಳಸದಂತೆ ಮುಂಜಾಗೃತೆ ವಹಿಸಬೇಕೆಂದು ತಿಳಿಸಲಾಗಿದೆ.
ಪರೀಕ್ಷೆಗಾಗಿ ಸೂಕ್ತ ಭದ್ರಯೆ ಇರುವಂತೆ ಹಾಗೂ ನಿಗಧಿತ ಅವಧಿಗೆ ಪರೀಕ್ಷೆಗಳನ್ನು ಆರಂಭಿಸಿ, ನಿಗಧಿತ ಸಮಯಕ್ಕೆ ಮುಕ್ತಾಯಗೊಳಿಸಬೇಕು. ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಗೊಂದಲ, ಒತ್ತಡಗಳಾಗದಂತೆ ಪರೀಕ್ಷಾ ಪೂರ್ವದಲ್ಲಿಯೆ ಪರೀಕ್ಷಾ ನಿಯಮಗಳನ್ನು ತಿಳಿಸಬೇಕು. ಪರೀಕ್ಷೆಗಳು ಸುಸೂತ್ರವಾಗಿ ಮತ್ತು ಶಾಂತಿಯುತವಾಗಿ ಜರುಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಲಾಗಿದೆ.
ಟಿಇಟಿ ಪರೀಕ್ಷೆಗೆ ಹಾಜರಾಗುವಂತ ಅಭ್ಯರ್ಥಿಗಳು ಶೂ ಮತ್ತು ಬೆಲ್ಟ್ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಇದಲ್ಲದೇ ಪ್ರವೇಶ ಪತ್ರದಲ್ಲಿ ತಮ್ಮ ಸಹಿ ಮತ್ತು ಭಾವಚಿತ್ರ ಪ್ರಕಟವಾಗದಿರುವ, ಸಹಿ ಮತ್ತು ಭಾವಚಿತ್ರ ವ್ಯತ್ಯಾಸವಿರುವ ಅಭ್ಯರ್ಥಿಯು ತನ್ನೊಂದಿಗೆ ಆನ್ ಲೈನ್ ಅರ್ಜಿ, ತಮ್ಮ ಇತ್ತೀಚಿನ ಭಾವಷಿತ್ರ ಮತ್ತು ಆಧಾರ್ ಕಾರ್ಡ್, ಇಲ್ಲವೇ ಇತರೆ ಗುರುತಿನ ಚೀಟಿಯನ್ನು ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೆ ತೋರಿಸಬೇಕು.
ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರದ ಸುತ್ತಲು ಸಿಆರ್ಪಿತಸಿ ಕಲಂ 144 ಜಾರಿಗೊಳಿಸುವಂತೆ, 200 ಮೀಟರ್ ಪ್ರದೇಶದ ಝರಾಕ್ಸ್ ಅಂಗಡಿ ಬಂದ ಮಾಡುವಂತೆ ಹಾಗೂ ವಿದ್ಯುತ್ ನಿಲುಗಡೆಯಾಗದಂತೆ ಹೆಸ್ಕಾಂರವರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.








