ಶಿವಮೊಗ್ಗ: ಸಾಗರದ ಅರಣ್ಯಾಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ, ಶ್ರೀಗಂಧದ ಮರ ಕಡಿಯುತ್ತಿದ್ದ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ ಮಾಲು ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಸಾಗರ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯ ಬರದಳ್ಳಿ ಗ್ರಾಮದ ಸರ್ವೆ ನಂ.70ರಲ್ಲಿ ಶ್ರೀಗಂಧದ ಮರ ಕಡಿತಲೆ ಮಾಡುತ್ತಿದ್ದ ಮಾಹಿತಿಯನ್ನು ಸಾರ್ವಜನಿಕರೊಬ್ಬರು ಅರಣ್ಯ ಇಲಾಖೆಗೆ ನೀಡಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಆರ್ ಎಫ್ ಓ ಅಣ್ಣಪ್ಪ ಅವರು ಡಿಎಫ್ಓ ಮೋಹನ್ ಕುಮಾರ್ ಅವರ ಗಮನಕ್ಕೆ ತಂದಿದ್ದಾರೆ.
ಈ ವಿಷಯವನ್ನು ತಿಳಿದಂತ ಡಿಎಫ್ಓ ಮೋಹನ್ ಕುಮಾರ್, ಎಸಿಎಫ್ ರವಿ ಅವರು ಕೂಡಲೇ ಸ್ಥಳಕ್ಕೆ ತೆರಳಿ ಮಾಲು ಸಹಿತ ಆರೋಪಿಯನ್ನು ಬಂಧಿಸುವಂತೆ ಸೂಚಿಸಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಸಾಗರ ವಲಯದ ಆರ್ ಎಫ್ ಓ ಅಣ್ಣಪ್ಪ ಅಂಡ್ ಟೀಂ ಇಂದು ಮಧ್ಯಾಹ್ನ 2 ಗಂಟೆಗೆ ಸ್ಥಳಕ್ಕೆ ತೆರಳಿದೆ. ಶ್ರೀಗಂಧದ ಮರ ಕಡಿತಲೆ ಮಾಡುತ್ತಿದ್ದ ಆರೋಪಿಯನ್ನು ಶ್ರೀಗಂಧದ ಮರದ ತುಂಡುಗಳ ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಆರೋಪಿಯನ್ನು ಸಾಗರದ ಎಸ್ ಎನ್ ನಗರದ ಮುಬಾರಕ್ ಎಂಬುದಾಗಿ ತಿಳಿದು ಬಂದಿದೆ. ಆರೋಪಿ ಮುಬಾರಕ್ ನಿಂದ 34.02 ಕೆಜಿ ತೂಕದ ಶ್ರೀಗಂಧದ ಎರಡು ತುಂಡುಗಳನ್ನು ಜಪ್ತಿ ಮಾಡಿದೆ. ಆ ಬಳಿಕ ಕಾನೂನು ಕ್ರಮ ವಹಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಶ್ರೀಗಂಧದ ಮರ ಕಡಿತಲೆಯ ಕಾರ್ಯಾಚರಣೆಯನ್ನು ಡಿ ಆರ್ ಎಫ್ ಓ ನರೇಂದ್ರ ಕುಮಾರ್ ಟಿ.ಪಿ, ಬೀಟ್ ಫಾರೆಸ್ಟರ್ ಸುರೇಶ್, ಹೇಮಂತ್, ಲತಾ, ಚಾಲಕ ಲೋಕೇಶ್ ಹಾಗೂ ಪೊಲೀಸ್ ಸಂಚಾರಿ ದಳದ ಪಿಎಸ್ಐ ವಿನಾಯಕ, ಸಿಬ್ಬಂದಿಗಳಾದಂತ ವಿಶ್ವ, ಚಂದ್ರು ಜೊತೆಗೂಡಿ ಜಂಟಿ ಕಾರ್ಯಾಚರಣೆಯ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಗರದ ಅರಣ್ಯಾಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ 34.02 ಕೆಜಿ ತೂಕದ ಶ್ರೀಗಂಧದ ಮರವನ್ನು ಕಡಿತಲೆ ಮಾಡಿದ್ದಂತ ಆರೋಪಿಯನ್ನು ಮಾಲು ಸಹಿತ ಬಂಧಿಸಿದಕ್ಕೆ ಶಿವಮೊಗ್ಗ ಸಿಸಿಎಫ್ ಕೆ.ಟಿ.ಹನುಮಂತಪ್ಪ, ಸಾಗರ ಡಿಎಫ್ಓ ಮೋಹನ್ ಕುಮಾರ್, ಎಸಿಎಫ್ ರವಿ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…
ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅಲ್ಲ, ವೇಣುಗೋಪಾಲ್: ಛಲವಾದಿ ನಾರಾಯಣಸ್ವಾಮಿ
BREAKING: ಕಾವೇರಿ ನದಿ ತೀರ ಒತ್ತುವರಿ ತೆರವಿಗೆ ಉಪ ಲೋಕಾಯುಕ್ತ ನ್ಯಾ.ವೀರಪ್ಪ ಆದೇಶ








