ಕೊಥಗುಡೆಮ್ : ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಕೊಥಗುಡೆಮ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಪೋಟಗೊಂಡಿದ್ದು, ಭಾರೀ ಅನಾಹುತ ತಪ್ಪಿದೆ. ರೈಲ್ವೆ ನಿಲ್ದಾಣದ ಮೊದಲ ಪ್ಲಾಟ್‌ಫಾರ್ಮ್’ನಲ್ಲಿ ಅಪರಿಚಿತ ಜನರು ಕಪ್ಪು ಚೀಲದಲ್ಲಿ ಬಾಂಬ್ ಇಟ್ಟಿದ್ದು, ದುಷ್ಕರ್ಮಿಗಳು ಇಟ್ಟಿದ್ದ ಈ ಬಾಂಬ್’ನಿಂದ ನಾಯಿಯೊಂದು ಸಾವನ್ನಪ್ಪಿದೆ. ರೈಲ್ವೆ ಹಳಿಯ ಮೇಲೆ ಚೀಲ ಕಂಡ ನಾಯಿ, ಆಹಾರ ಎಂದು ಭಾವಿಸಿ ಕಚ್ಚಿದೆ. ಇದರಿಂದ ಸ್ಫೋಟ ಸಂಭವಿಸಿದ್ದು, ನಾಯಿ ಸ್ಥಳದಲ್ಲೇ ಸಾವನ್ನಪ್ಪಿದೆ.
ರೈಲ್ವೆ ನಿಲ್ದಾಣದಲ್ಲಿ ದೊಡ್ಡ ಶಬ್ದ ಕೇಳಿ ಪ್ರಯಾಣಿಕರು ಓಡಿಹೋಗಿದ್ದು, ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು. ರೈಲ್ವೆ ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳಲ್ಲಿ ಶ್ವಾನ ದಳದೊಂದಿಗೆ ವಿಶೇಷ ತಪಾಸಣೆ ನಡೆಸಲಾಯಿತು. ಬಾಂಬ್ ಯಾರು ಇರಿಸಿದ್ದರು.? ಸ್ಫೋಟಕ್ಕೆ ಕಾರಣವೇನು.? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BREAKING : ಕಾಂತಾರ ಚಿತ್ರದಲ್ಲಿನ ದೈವವನ್ನು ದೆವ್ವ ಎಂದ ವಿಚಾರ : ನಟ ರಣವೀರ್ ಸಿಂಗ್ ವಿರುದ್ಧ ‘FIR’ ದಾಖಲು!
ಮೃತ ‘KSRTC ಸಿಬ್ಬಂದಿ’ಗಳ ಕುಟುಂಬಕ್ಕೆ ‘ತಲಾ 1 ಕೋಟಿ ಪರಿಹಾರ’ವನ್ನು ಸಚಿವ ರಾಮಲಿಂಗಾರೆಡ್ಡಿ ವಿತರಣೆ
Watch Video : ಬಾಹ್ಯಾಕಾಶದಿಂದ ಭೂಮಿಗೆ ಇಳಿಯುವಾಗ ಚೀನಾದ ಖಾಸಗಿ ರಾಕೆಟ್ ಸ್ಫೋಟ ; ಶಾಕಿಂಗ್ ವಿಡಿಯೋ ವೈರಲ್








