Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ `ಪ್ರತಿಭಾ ಪುರಸ್ಕಾರ’ಕ್ಕೆ ಆನ್ ಲೈನ್ ಅರ್ಜಿ ಆಹ್ವಾನ | Government employees

ರಾಜ್ಯ ಸರ್ಕಾರದಿಂದ ಕುಕನೂರು ಆಸ್ಪತ್ರೆ 100 ಹಾಸಿಗೆಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ: 42 ಕೋಟಿ ಅನುಮೋದನೆ

Adilabad Medical Negligence Rs 1 Crore Compensation

ಸ್ಕ್ಯಾನಿಂಗ್ ವರದಿಯಲ್ಲಿ ಲೋಪ : ಮಗು ಹುಟ್ಟುವ ಮುನ್ನ ಅಂಧತ್ವ ಪತ್ತೆ ಹಚ್ಚದ ವೈದ್ಯರಿಗೆ 1 ಕೋಟಿ ರೂಪಾಯಿ ದಂಡ | Medical Negligence Fine

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೃತ ‘KSRTC ಸಿಬ್ಬಂದಿ’ಗಳ ಕುಟುಂಬಕ್ಕೆ ‘ತಲಾ 1 ಕೋಟಿ ಪರಿಹಾರ’ವನ್ನು ಸಚಿವ ರಾಮಲಿಂಗಾರೆಡ್ಡಿ ವಿತರಣೆ
KARNATAKA

ಮೃತ ‘KSRTC ಸಿಬ್ಬಂದಿ’ಗಳ ಕುಟುಂಬಕ್ಕೆ ‘ತಲಾ 1 ಕೋಟಿ ಪರಿಹಾರ’ವನ್ನು ಸಚಿವ ರಾಮಲಿಂಗಾರೆಡ್ಡಿ ವಿತರಣೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಅಪಘಾತ ಹಾಗೂ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂರು ಸಿಬ್ಬಂದಿಯ ಕುಟುಂಬಕ್ಕೆ ತಲಾ ರೂ.1 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ 31 ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.10 ಲಕ್ಷದಂತೆ, ರೂ. 3.10 ಕೋಟಿ ಪರಿಹಾರ ಹಾಗೂ ಇಬ್ಬರು ಅವಲಂಬಿತರಿಗೆ ರೂ.14 ಲಕ್ಷದಂತೆ ರೂ.28 ಲಕ್ಷ ಪರಿಹಾರ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಿತರಣೆ ಮಾಡಿದರು.

ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕೆ ಎಸ್ ಆರ್ ಟಿ ಸಿ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ ಅವರು ವಾಣಿಜ್ಯ ಮಳಿಗೆಗಳ ನಿರ್ವಹಣೆ ತಂತ್ರಾಂಶ ಇ-ವಾಣಿಜ್ಯ ಬಿಡುಗಡೆ (Soft Launch) ಮಾಡಿದರು.

1) ಸಾರಿಗೆ ಸುರಕ್ಷಾ ವಿಮಾ ಯೋಜನೆ:

o ಸಂಸ್ಥೆಯು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ರೂ.1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ.

ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಹಾಗೂ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂರು ಸಿಬ್ಬಂದಿಯ ಅವಲಂಬಿತರಿಗೆ ತಲಾ ರೂ. 1 ಕೋಟಿ ಚೆಕ್ ನೀಡಲಾಗಿದೆ.

o ಈವರೆಗೂ 42 ಸಿಬ್ಬಂದಿಗಳ ಅವಲಂಭಿತರಿಗೆ ಒಟ್ಟಾರೆ ರೂ.42 ಕೋಟಿ ಪರಿಹಾರ ನೀಡಿದಂತಾಗುತ್ತದೆ.

2) ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ:

 ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ವಿಷಯವನ್ನು ಮನಗಂಡು, ಈ ಕಾರಣದಿಂದ ಮೃತರಾಗುವ ಕುಟುಂಬದ ಅವಲಂಬಿತರಿಗೆ ಆರ್ಥಿಕ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಪರಿಹಾರ ಮೊತ್ತವಾದ ರೂ. 3 ಲಕ್ಷಗಳನ್ನು ರೂ.10 ಲಕ್ಷಗಳಿಗೆ ದಿನಾಂಕ: 01.11.2023 ರಿಂದ ಹೆಚ್ಚಿಸಲಾಗಿದೆ.

ಸದರಿ ಮೊತ್ತವನ್ನು ದಿನಾಂಕ: 01.09.2025 ರಿಂದ ಜಾರಿಗೆ ಬರುವಂತೆ ರೂ.10 ಲಕ್ಷದಿಂದ ರೂ.14 ಲಕ್ಷಗಳಿಗೆ ಹೆಚ್ಚಿಸಲಾಗಿದೆ

 ಇಂದು 31 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ ರೂ.10.00 ಲಕ್ಷಗಳಂತೆ ಒಟ್ಟು ರೂ.3.10 ಕೋಟಿ ಹಾಗೂ ಇಬ್ಬರು ಅವಲಂಬಿತರಿಗೆ ರೂ.14 ಲಕ್ಷದಂತೆ ರೂ.28 ಲಕ್ಷ ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು.

 ಈವರೆಗೂ 181+2 ಸಿಬ್ಬಂದಿಗಳ ಅವಲಂಭಿತರಿಗೆ ಒಟ್ಟು ರೂ. 18.38 ಕೋಟಿಗಳ ಪರಿಹಾರ ನೀಡಿದಂತಾಗುತ್ತದೆ.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಅಪಘಾತದಿಂದ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಸಾಂತ್ವಾನ ಹೇಳಿ, ಸಿಬ್ಬಂದಿಗಳ ಜೀವ ಅಮೂಲ್ಯವಾದದ್ದು, ಅವರನ್ನು ಮರಳಿ ಕರೆತರಲು ಸಾಧ್ಯವಾಗುವುದಿಲ್ಲ, ಆದರೆ ಅವರ ಅವಲಂಬಿತರ ಮುಂದಿನ ಜೀವನವು ಆರ್ಥಿಕವಾಗಿ ಭದ್ರತೆಯಿಂದ ಕೂಡಿರಲಿ ಎಂಬ ಸದ್ದುದೇಶದಿಂದ ಸಾರಿಗೆ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು.

ಇಂದು ವಿತರಿಸಲಾಗಿರುವ ಪರಿಹಾರದ ಮೊತ್ತವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಮಕ್ಕಳ ವಿದ್ಯಾಬ್ಯಾಸ, ಮನೆ ನಿರ್ಮಾಣ ಮತ್ತು ಇತರೆ ಶುಭ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಪರಿಹಾರ ಧನವನ್ನು ಯಾರಿಗೂ ನೀಡದಂತೆ ಕಿವಿ ಮಾತು ಹೇಳಿ, ಹಣವಿದ್ದರೆ ಎಲ್ಲರು ನೆಂಟರು, ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

“ಸಾರಿಗೆ ಸುರಕ್ಷಾ ಯೋಜನೆಯು” ಯಶಸ್ವಿಯಾಗಲು ಎಸ್.ಬಿ.ಐ ಬ್ಯಾಂಕ್ನ ಸಹಕಾರವು ಪ್ರಮುಖವಾಗಿದ್ದು, ಅವರಿಗೂ ಸಹ ಧನ್ಯವಾದಗಳನ್ನು ತಿಳಿಸಿದರು.

3) ವಾಣಿಜ್ಯ ಮಳಿಗೆಗಳ ನಿರ್ವಹಣೆ ತಂತ್ರಾಂಶ ಇ-ವಾಣಿಜ್ಯ (Commercial Management Software) ಬಿಡುಗಡೆ (Soft Launch) ಕುರಿತು.

 ನಿಗಮದ ವ್ಯಾಪ್ತಿಯಲ್ಲಿನ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನರಲ್ ಸ್ಟಾಲ್, ಉಪಹಾರ ಗೃಹ ಮತ್ತು ಇತರೆ ವಾಣಿಜ್ಯ 1847 ವಾಣಿಜ್ಯ ಮಳಿಗೆಗಳಿರುತ್ತದೆ.

 ಸದರಿ ವಾಣಿಜ್ಯ ಮಳಿಗೆಗಳು / ವಾಣಿಜ್ಯ ವ್ಯವಹಾರಗಳ ಕುರಿತಂತೆ ಪರವಾನಗಿದಾರರಿಂದ ಪ್ರತಿ ಮಾಹೆಯಾನ ವಸೂಲು ಮಾಡಬೇಕಾದ ಪರವಾನಗಿ ಶುಲ್ಕ, ಜಿ.ಎಸ್.ಟಿ ಮೊತ್ತ, ತಡಪಾವತಿ ದಂಡ, ಇತರೆ ಶುಲ್ಕಗಳ ಕುರಿತ ಲೆಕ್ಕಾಚಾರವನ್ನು ಹಾಗೂ ಇನ್ವಾಯ್ಸ್ ತಯಾರಿಕೆಯನ್ನು ಪ್ರಸ್ತುತ ಮ್ಯಾನ್ಯುಯಲ್ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತಿದೆ.

 ವಾಣಿಜ್ಯ ಮಳಿಗೆಗಳ ಕುರಿತ ನಿರ್ವಹಣೆಯನ್ನು ಮ್ಯಾನ್ಯುಯಲ್ ವ್ಯವಸ್ಥೆಯ ಮೂಲಕ ನಿರ್ವಹಿಸಲು ಹೆಚ್ಚಿನ ಕಾಲಾವಕಾಶದ ಅವಶ್ಯಕತೆ ಇರುತ್ತದೆ ಹಾಗೂ ಲೆಕ್ಕಾಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರುತ್ತದೆ. ಏಕರೂಪತೆ‌ ಮತ್ತು ದಕ್ಷತೆ ಹೆಚ್ಚಿಸಲು ಈ‌ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ.

 ವಾಣಿಜ್ಯ ಮಳಿಗೆಳ ನಿರ್ವಹಣೆಯನ್ನು ಸರಳೀಕರಣಗೊಳಿಸುವ ಸಲುವಾಗಿ ನಿಗಮದ ಆಂತರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ನಿಗಮದ ವತಿಯಿಂದಲೇ ಅಭಿವೃದ್ದಿಪಡಿಸಲಾಗಿರುತ್ತದೆ ಎಂದು ತಿಳಿಸಿದರು.

ಅಕ್ರಂ ಪಾಷ, ವ್ಯವಸ್ಥಾಪಕ ನಿರ್ದೇಶಕರು ಕರಾರಸಾ ನಿಗಮ ಅವರು ಮಾತನಾಡಿ, ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಹೇಳಿರುವ ಕಿವಿ ಮಾತನ್ನು ಚಾಚೂ ತಪ್ಪದೆ ಪಾಲಿಸುವಂತೆ ತಿಳಿಸಿದರು. ಹಣವನ್ನು ಸದುಪಯೋಗಪಡಿಸ ಕೊಳ್ಳಿ ಯಾರನ್ನು ನಂಬಿ ದುಡ್ಡನ್ನು ಕಳೆದುಕೊಳ್ಳಬೇಡಿ, ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಡಾ. ನಂದಿನಿದೇವಿ ಕೆ. ಭಾಆಸೇ., ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಮತ್ತು ಇಬ್ರಾಹಿಂ ಮೈಗೂರ, ಭಾಆಸೇ., ನಿರ್ದೇಶಕರು (ಮಾಹಿತಿ ತಂತ್ರಜ್ಞಾನ), ಎಸ್.ಬಿ.ಐ ಬ್ಯಾಂಕಿನ ಅಧಿಕಾರಿಗಳಾದ ಸಿ.ವಿ. ರಘುರಾಮ್, ಡಿವಿಜನಲ್ ಜನರಲ್ ಮ್ಯಾನೇಜರ್, ವಿಜಯ್ ಕೆ.ಟಿ., ಸಹಾಯಕ ಜನರಲ್ ಮ್ಯಾನೇಜರ್ ಮತ್ತು ಕರಾಸಾ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತಿರಿದ್ದರು.

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ `ಪ್ರತಿಭಾ ಪುರಸ್ಕಾರ’ಕ್ಕೆ ಆನ್ ಲೈನ್ ಅರ್ಜಿ ಆಹ್ವಾನ | Government employees

1 Min Read

ರಾಜ್ಯ ಸರ್ಕಾರದಿಂದ ಕುಕನೂರು ಆಸ್ಪತ್ರೆ 100 ಹಾಸಿಗೆಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ: 42 ಕೋಟಿ ಅನುಮೋದನೆ

2 Mins Read
Adilabad Medical Negligence Rs 1 Crore Compensation

ಸ್ಕ್ಯಾನಿಂಗ್ ವರದಿಯಲ್ಲಿ ಲೋಪ : ಮಗು ಹುಟ್ಟುವ ಮುನ್ನ ಅಂಧತ್ವ ಪತ್ತೆ ಹಚ್ಚದ ವೈದ್ಯರಿಗೆ 1 ಕೋಟಿ ರೂಪಾಯಿ ದಂಡ | Medical Negligence Fine

2 Mins Read
Recent News

ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ `ಪ್ರತಿಭಾ ಪುರಸ್ಕಾರ’ಕ್ಕೆ ಆನ್ ಲೈನ್ ಅರ್ಜಿ ಆಹ್ವಾನ | Government employees

ರಾಜ್ಯ ಸರ್ಕಾರದಿಂದ ಕುಕನೂರು ಆಸ್ಪತ್ರೆ 100 ಹಾಸಿಗೆಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ: 42 ಕೋಟಿ ಅನುಮೋದನೆ

Adilabad Medical Negligence Rs 1 Crore Compensation

ಸ್ಕ್ಯಾನಿಂಗ್ ವರದಿಯಲ್ಲಿ ಲೋಪ : ಮಗು ಹುಟ್ಟುವ ಮುನ್ನ ಅಂಧತ್ವ ಪತ್ತೆ ಹಚ್ಚದ ವೈದ್ಯರಿಗೆ 1 ಕೋಟಿ ರೂಪಾಯಿ ದಂಡ | Medical Negligence Fine

ಯಾವ ವಾಹನಕ್ಕೆ ಯಾವ ಬಣ್ಣದ ನಂಬರ್ ಪ್ಲೇಟ್ ಇರಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ | Number Plate

State News
KARNATAKA

ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ `ಪ್ರತಿಭಾ ಪುರಸ್ಕಾರ’ಕ್ಕೆ ಆನ್ ಲೈನ್ ಅರ್ಜಿ ಆಹ್ವಾನ | Government employees

By kannadanewsnow57 KARNATAKA 1 Min Read

ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಕರ್ನಾಟಕ…

ರಾಜ್ಯ ಸರ್ಕಾರದಿಂದ ಕುಕನೂರು ಆಸ್ಪತ್ರೆ 100 ಹಾಸಿಗೆಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ: 42 ಕೋಟಿ ಅನುಮೋದನೆ

Adilabad Medical Negligence Rs 1 Crore Compensation

ಸ್ಕ್ಯಾನಿಂಗ್ ವರದಿಯಲ್ಲಿ ಲೋಪ : ಮಗು ಹುಟ್ಟುವ ಮುನ್ನ ಅಂಧತ್ವ ಪತ್ತೆ ಹಚ್ಚದ ವೈದ್ಯರಿಗೆ 1 ಕೋಟಿ ರೂಪಾಯಿ ದಂಡ | Medical Negligence Fine

ಯಾವ ವಾಹನಕ್ಕೆ ಯಾವ ಬಣ್ಣದ ನಂಬರ್ ಪ್ಲೇಟ್ ಇರಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ | Number Plate

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.