ಬೆಂಗಳೂರು : ಕವಿಪ್ರನಿನಿಯಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ಮ್ಯಾನ್ ಹುದ್ದೆಗಳ ನೇಮಕಾತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಸ್ಥಳ ನಿಯುಕ್ತಿಗಾಗಿ ಕೌನ್ಸಿಲಿಂಗ್ ನಡೆಸಿ ನೇಮಕಾತಿ ಆದೇಶ ನೀಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ, ಕಿರಿಯ ಸ್ಟೇಷನ್ ಪರಿಚಾರಕ (ಎನ್.ಕೆ.ಕೆ/ಕೆ.ಕೆ) ಮತ್ತು ಕಿರಿಯ ಪವರ್ಮ್ಯಾನ್(ಎನ್.ಕೆ.ಕೆ/ಕೆ.ಕೆ) ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಗಳನ್ನು ಕ್ರಮವಾಗಿ ದಿನಾಂಕ: 06.08.2025 ಮತ್ತು 25.08.2025 ರಂದು ಕವಿಪ್ರನಿನಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿರುತ್ತದೆ.
ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆ ಹೊಂದಿ, ಎಲ್ಲಾ ದಾಖಲಾತಿಗಳ ನೈಜತೆ/ಸಿಂಧುತ್ವ ಪ್ರಮಾಣ ಪತ್ರ ಸ್ವೀಕೃತಗೊಂಡಿರುವ ಅಭ್ಯರ್ಥಿಗಳ ವಿವರಗಳನ್ನು ಅನುಬಂಧ-1, 2, 3 ಮತ್ತು 4 ರಲ್ಲಿ ತಿಳಿಸಲಾಗಿರುತ್ತದೆ.
ಅನುಬಂಧ-1, 2, 3 ಮತ್ತು 4 ರಲ್ಲಿ ತಿಳಿಸಿರುವ ಅಭ್ಯರ್ಥಿಗಳ ಸ್ಥಳ ನಿಯುಕ್ತಿ ಹಾಗೂ ನೇಮಕಾತಿ ಆದೇಶ ಜಾರಿಗೊಳಿಸಲು, ದಿನಾಂಕ: 10.12.2025 ಮತ್ತು 11.12.2025 ಗಳಂದು కౌన్సిలింగా ನಡೆಸಲಾಗುತ್ತಿರುವುದರಿಂದ ಸದರಿ ಅಭ್ಯರ್ಥಿಗಳು ತಮ್ಮ ಮೂಲ ಗುರುತಿನ ಚೀಟಿ (ಆಧಾರ್/ಮತದಾರರ ಗುರುತಿನ ಚೀಟಿ/ಚಾಲನಾ ಪರವಾನಗಿ/ಪಾಸ್ ಪೋರ್ಟ್/ಪ್ಯಾನ್) ಹಾಗೂ ಗುರುತಿನ ಚೀಟಿಯ ಒಂದು ಸ್ವ-ದೃಢೀಕೃತ ಪ್ರತಿಯೊಂದಿಗೆ ಈ ಕೆಳಕಂಡ ಸ್ಥಳದಲ್ಲಿ ನಿಗದಿತ ದಿನಾಂಕ ಮತ್ತು ನಿಗದಿತ ಸಮಯಕ್ಕೆ ತಪ್ಪದೆ ವರದಿ ಮಾಡಿಕೊಳ್ಳಲು ತಿಳಿಸಿದೆ.








