ಬೆಂಗಳೂರು : ತಾರಾಲಯಗಳಂತಹ ಸವಲತ್ತುಗಳು ನಗರಗಳಿಗೆ ಸೀಮಿತವಾಗಿತ್ತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದು ಸುಲಭವಾಗಿ ಲಭ್ಯವಿರಲಿಲ್ಲ. ಅವರು ಕೂಡ ತಾರಾಲಯ, ಬಾಹ್ಯಾಕಾಶ ಪ್ರಯೋಗಾಲಯಗಳಂತಹ ಸವಲತ್ತುಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಂಚಾರಿ ತಾರಾಲಯಗಳನ್ನು ಒದಗಿಸಿದ್ದೇವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಕೌತುಕವನ್ನು ಬಿತ್ತಿ, ವಿಜ್ಞಾನ ಕಲಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದು ನಮ್ಮ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಶಾಲೆಯ ಅಂಗಳದಲ್ಲಿ ತಾರಾಲಯ
* ಈಗಾಗಲೇ ರಾಜ್ಯದಲ್ಲಿ 11 ಡಿಜಿಟಲ್ ಮೊಬೈಲ್ ಪ್ಲಾನೆಟೋರಿಯಂ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಹೈಸ್ಕೂಲ್ಗಳಲ್ಲಿ 46 ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದೆ.
* ರಾಜ್ಯದಾದ್ಯಂತ 16.75 ಲಕ್ಷ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
* ಕಲ್ಯಾಣ ಕರ್ನಾಟಕ ಭಾಗದಲ್ಲಿ 6 ಸಂಚಾರಿ ಡಿಜಿಟಲ್ ತಾರಾಲಯ ಸಕ್ರಿಯವಾಗಿದ್ದು, ಶಾಲಾ ಮಕ್ಕಳಲ್ಲಿ ವಿಜ್ಞಾನದ ಆಸಕ್ತಿಯನ್ನು ಬಿತ್ತುವಲ್ಲಿ ಯಶಸ್ವಿಯಾಗಿವೆ.
* ಭವಿಷ್ಯದಲ್ಲಿ ಗ್ರಾಮೀಣ – ನಗರ ಎಂಬ ಶೈಕ್ಷಣಿಕ ಅಂತರ ಕಡಿಮೆಯಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಈ ಯೋಜನೆ ನೆರವಾಗಲಿದೆ.
ತಾರಾಲಯಗಳಂತಹ ಸವಲತ್ತುಗಳು ನಗರಗಳಿಗೆ ಸೀಮಿತವಾಗಿತ್ತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದು ಸುಲಭವಾಗಿ ಲಭ್ಯವಿರಲಿಲ್ಲ. ಅವರು ಕೂಡ ತಾರಾಲಯ, ಬಾಹ್ಯಾಕಾಶ ಪ್ರಯೋಗಾಲಯಗಳಂತಹ ಸವಲತ್ತುಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಂಚಾರಿ ತಾರಾಲಯಗಳನ್ನು ಒದಗಿಸಿದ್ದೇವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಕೌತುಕವನ್ನು… pic.twitter.com/706nxVw02g
— DIPR Karnataka (@KarnatakaVarthe) November 28, 2025
ಶಾಲೆಯ ಅಂಗಳದಲ್ಲಿ ತಾರಾಲಯ
• ಈಗಾಗಲೇ ರಾಜ್ಯದಲ್ಲಿ 11 ಡಿಜಿಟಲ್ ಮೊಬೈಲ್ ಪ್ಲಾನೆಟೋರಿಯಂ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಹೈಸ್ಕೂಲ್ಗಳಲ್ಲಿ 46 ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದೆ.
• ರಾಜ್ಯದಾದ್ಯಂತ 16.75 ಲಕ್ಷ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
• ಕಲ್ಯಾಣ ಕರ್ನಾಟಕ ಭಾಗದಲ್ಲಿ 6 ಸಂಚಾರಿ… pic.twitter.com/yr7MOyj0Sj— DIPR Karnataka (@KarnatakaVarthe) November 28, 2025








