ನವದೆಹಲಿ : ಭಾರತದ ನಾಗರಿಕ ವಿಮಾನಯಾನ ಸಚಿವಾಲಯವು ಅಯ್ಯಪ್ಪ ಭಕ್ತರಿಗೆ ಶುಭ ಸುದ್ದಿ ನೀಡಿದೆ. ಶಬರಿಮಲೆಗೆ ಹೋಗುವ ಭಕ್ತರು ವಿಮಾನಗಳಲ್ಲಿ ‘ಇರುಮುಡಿ’ಯೊಂದಿಗೆ ಪ್ರಯಾಣಿಸಲು ಅವಕಾಶ ನೀಡಿದೆ.
ಭಕ್ತರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ತಮ್ಮ ಇಮೇಲ್ನಲ್ಲಿ ಇದನ್ನು ಪ್ರಕಟಿಸಿದ್ದಾರೆ. ”ಶಬರಿಮಲೆ ಯಾತ್ರೆಯಲ್ಲಿ ಭಾಗವಹಿಸುವ ಅಯ್ಯಪ್ಪ ಭಕ್ತರು ಇರುಮುಡಿಯನ್ನ ನೇರವಾಗಿ ವಿಮಾನದಲ್ಲಿ ಕೊಂಡೊಯ್ಯಲು ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ” ಎಂದಿದ್ದಾರೆ.
“ಇರುಮುಡಿಯ ಪಾವಿತ್ರ್ಯತೆ ಮತ್ತು ಭಾವನೆಗಳನ್ನು ಗೌರವಿಸಲು ಮತ್ತು ಭಕ್ತರ ಸಂಪ್ರದಾಯಗಳು ಮತ್ತು ಪದ್ಧತಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಈ ನಿರ್ಧಾರವು ನಮ್ಮ ದೇಶ ಹೆಮ್ಮೆಪಡುವ ಸಾಂಸ್ಕೃತಿಕ ಮೌಲ್ಯಗಳನ್ನು ಗೌರವಿಸುವ ನಮ್ಮ ಬದ್ಧತೆಯನ್ನ ಪ್ರತಿಬಿಂಬಿಸುತ್ತದೆ” ಎಂದು ರಾಮಮೋಹನ್ ನಾಯ್ಡು ಹೇಳಿದರು.
స్వామియే శరణం అయ్యప్ప!
శబరిమల పవిత్ర యాత్రలో పాల్గొనే అయ్యప్ప భక్తుల సౌలభ్యం కోసం, ఇరుముడికి ఉన్న పవిత్రత, భావోద్వేగాల్ని గౌరవిస్తూ, భక్తులు ఇరుముడి ని తమతో పాటు నేరుగా విమాన ప్రయాణంలో తీసుకెళ్లేందుకు మా పౌర విమానయాన మంత్రిత్వ శాఖ అనుమతి ఇచ్చింది అని తెలియజేయడానికి… pic.twitter.com/QT6JGV45Ng
— Ram Mohan Naidu Kinjarapu (@RamMNK) November 28, 2025
BREAKING : ರಾಜ್ಯದಲ್ಲಿ ಶೀಘ್ರವೆ ದೈಹಿಕ ಶಿಕ್ಷಕರ ನೇಮಕಾತಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ
BIG NEWS : ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ : ಮೆಕ್ಕೆ ಜೋಳ ಖರೀದಿಗೆ ಮುಂದಾದ ಸರ್ಕಾರ
BREAKING : ದಿಟ್ವಾ ಚಂಡಮಾರುತಕ್ಕೆ ಶ್ರೀಲಂಕಾದಲ್ಲಿ 46 ಮಂದಿ ಸಾವು, ‘ಪ್ರಧಾನಿ ಮೋದಿ’ ಸಂತಾಪ








