ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್-25)ಯ ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನ.29ರಿಂದ ಡಿ.6ರವರೆಗೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಪ್ರತಿದಿನ ಬೆಳಿಗ್ಗೆ 9.30ರಿಂದ ಮಲ್ಲೇಶ್ವರದ ಕೆಇಎ ಕಚೇರಿಯಲ್ಲಿ ನಡೆಯಲಿದೆ. ಒಂದೊಂದು ವಿಷಯಕ್ಕೆ ಒಂದೊಂದು ದಿನ ನಿಗದಿ ಮಾಡಿದ್ದು, ಆ ಪ್ರಕಾರ ಅರ್ಹ ಅಭ್ಯರ್ಥಿಗಳು ಮೂಲ ದಾಖಲೆಗಳ ಸಮೇತ ಬಂದು ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ನಿಗದಿತ ದಿನಾಂಕಗಳಂದು ಬರಲು ಸಾಧ್ಯವಾಗದ ಎಲ್ಲ ವಿಷಯಗಳ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಡಿ.8 ಮತ್ತು 9 ರಂದು ನಡೆಸಲಾಗುತ್ತದೆ. ಆ ದಿನಗಳಂದು ಪರಿಶಿಷ್ಟ ಜಾತಿಯ ಎ, ಬಿ, ಸಿ ಪ್ರವರ್ಗಗಳ ಅಭ್ಯರ್ಥಿಗಳು ಕೂಡ ಮೂಲ ದಾಖಲೆ ಸಮೇತ ಬರಬಹುದು. ಶೈಕ್ಷಣಿಕ ಮೂಲ ದಾಖಲೆಗಳ ಜತೆಗೆ ಕ್ಲೇಮ್ ಮಾಡಿರುವುದಕ್ಕೆ ಪೂರಕವಾದ ಮೂಲ ದಾಖಲೆಗಳ ಸಮೇತ ಅಭ್ಯರ್ಥಿಗಳು ಪರಿಶೀಲನೆಗೆ ಬರಬೇಕು. ಸ್ನಾತಕೋತ್ತರ ಪದವಿ ಅಪೂರ್ಣ ಆಗಿರುವವರು ಪರಿಶೀಲನೆಗೆ ಬರುವ ಅಗತ್ಯ ಇರುವುದಿಲ್ಲ.
ಹೆಚ್ಚಿನ ಮಾಹಿತಿ ಹಾಗೂ ವೇಳಾಪಟ್ಟಿ ಸಲುವಾಗಿ ಕೆಇಎ ವೆಬ್ ಸೈಟ್ ನೋಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
#KSET-25: ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನ.29ರಿಂದ ಡಿ.6ರವರೆಗೆ KEA ಕಚೇರಿಯಲ್ಲಿ ನಡೆಯಲಿದೆ.
ಒಂದೊಂದು ವಿಷಯಕ್ಕೆ ಒಂದೊಂದು ದಿನ ನಿಗದಿ ಮಾಡಿದ್ದು, ಆ ಪ್ರಕಾರ ಅರ್ಹ ಅಭ್ಯರ್ಥಿಗಳ ಪರಿಶೀಲನೆಗೆ ಬರಬೇಕು.
ನಿಗದಿತ ದಿನಾಂಕಗಳಂದು ಬರಲು ಸಾಧ್ಯವಾಗದ ಎಲ್ಲ ವಿಷಯಗಳ ಅಭ್ಯೆರ್ಥಿಗಳ ದಾಖಲೆ… pic.twitter.com/nAyQAIGj5A— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) November 27, 2025








