ಬೆಂಗಳೂರು: ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ನುಡಿದಂತೆ ನಡೆದಿದ್ದಾರೆ. ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 1000 ಚಾಲನಾ ಹುದ್ದೆಗಳ ಭರ್ತಿಗೆ ಸಚಿವ ಸಂಪುಟದಿಂದ ಅನುಮೋದನೆಯನ್ನು ಪಡೆದಿದ್ದಾರೆ. ಈ ಮೂಲಕ ಮತ್ತೊಮ್ಮೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾನವೀಯ, ಬದ್ಧತೆಯ ಕಾರ್ಯ ಅನುಕರಣೀಯ ನಡೆ ಪ್ರಶಂಸಗೆ ಪಾತ್ರವಾಗಿದ್ದಾರೆ.
ಕೋವಿಡ್ -19 ರ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ ಆಇ03 ಬಿಇಎಂ 2020, ದಿನಾಂಕ: 06.07.2020 ರನ್ವಯ ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ತಡೆಹಿಡಿಯಲಾಗಿರುತ್ತದೆ.
ತದನಂತರ ದಿನಾಂಕ: 1.03.2024 ರ ಆದೇಶದಲ್ಲಿ ಚಾಲನಾ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಗೆ ಅನುಮೋದನೆ ನೀಡಲಾಗಿರುತ್ತದೆ. 2019 ರಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ ಕೇವಲ ಚಾಲಕರ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ವಾಯವ್ಯ ಸಾರಿಗೆ ಸಂಸ್ಥೆಯ ಮನವಿ ಮೇರೆಗೆ, ಸಂಸ್ಥೆಯಲ್ಲಿ ನಿರ್ವಾಹಕರ ಕೊರತೆ ಇರುವುದರಿಂದ ಹಾಗೂ ವಿದ್ಯುತ್ ಚಾಲಿತ ಬಸ್ಸುಗಳು ಮುಂದಿನ ದಿನಗಳಲ್ಲಿ ಸೇರ್ಪಡೆಯಾಗುವುದರಿಂದ ನಿರ್ವಾಹಕ ಹುದ್ದೆಗಳನ್ನು ಮಾತ್ರ ಭರ್ತಿ ಮಾಡುವ ಸಂಬಂಧ, ಈಗಾಗಲೇ ಹೊರಡಿಸಿರುವ ಅಧಿಸೂಚನೆಯಲ್ಲಿ ಮಾರ್ಪಾಡು ಮಾಡಿ 1000 ನಿರ್ವಾಹಕ ಹುದ್ದೆಗಳಿಗೆ ಅನುಮತಿ ನೀಡಲಾಗಿತ್ತು.
ಈ ಸಂಬಂಧ ಅಭ್ಯರ್ಥಿಗಳು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಿಗೆ ಮನವಿ ಸಲ್ಲಿಸಿ, ಈಗಾಗಲೇ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ಅಭ್ಯರ್ಥಿಗಳ ವಯೋಮಿತಿ ಮೀರಿದ್ದು, ಬೇರೆ ಯಾವುದೇ ಸರ್ಕಾರಿ ಹುದ್ದೆಗೆ ಅರ್ಹರಾಗಿರುವುದಿಲ್ಲ. ಆದ್ದರಿಂದ ನಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ಕೋರಿದ್ದರು ಇದರೊಂದಿಗೆ ಹೆಚ್ ಕೆ.ಪಾಟೀಲ್, ಕಾನೂನು ಸಚಿವರು, ಸಂತೋಷ್ ಲಾಡ್, ಕಾರ್ಮಿಕ ಸಚಿವರು, ರಾಜು ಕಾಗೆ, ಅಧ್ಯಕರು, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆರವರಲ್ಲಿ ಸಹ ಮನವಿ ಮಾಡಿಕೊಂಡಿದ್ದರು. ಇವರೆಲ್ಲರೂ ಕೂಡ ಅಭ್ಯರ್ಥಿಗಳಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು.
ಮುಂದುವರೆದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಹುಬ್ಬಳ್ಳಿಗೆ ತೆರಳಿದಾಗ, ಅಭ್ಯರ್ಥಿಗಳನ್ನು ಭೇಟಿ ಮಾಡಿ, ತಮ್ಮಗಳ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ತಮಗೆ ನ್ಯಾಯ ಒದಗಿಸಲಾವುದು. ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನಿಸಿ ತಮಗೆ ಸಂತೋಷದ ಸುದ್ದಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 2019 ರ ಅಧಿಸೂಚನೆಗೆ ಅನುಗುಣವಾಗಿ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 1000 ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ನೀಡಲಾಗಿದೆ.
ರಾಜ್ಯದಲ್ಲಿ ‘ಸಿಎಂ ಬದಲಾವಣೆ’ ವಿಚಾರ: ಈ ಗುಟ್ಟು ರಿವೀಲ್ ಮಾಡಿದ ‘ಸುಪ್ರೀಂ ಕೋರ್ಟ್ ವಕೀಲ ಸಂಕೇತ್ ಏಣಗಿ’
BIG NEWS: ಡಿ.8ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ: ಹೀಗಿದೆ CM, DCM, ಸಚಿವರ ಕೊಠಡಿ ಸಂಖ್ಯೆ
ರೈಲುಗಳಲ್ಲಿ ‘ಹಲಾಲ್ ಮಾಂಸ’ ಮಾತ್ರ ಪೂರೈಕೆ ನಿಷೇಧ ; ವರದಿ ಕೋರಿ ರೈಲ್ವೆಗೆ NHRC ನೋಟಿಸ್








