ಉಡುಪಿ : ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿರುವುದರಿಂದ ದಿನಾಂಕ 28/11/2025 ರ ಬೆಳಿಗ್ಗೆ 11:00 ಗಂಟೆಯಿಂದ ಕಾರ್ಯಕ್ರಮದ ಅಂತ್ಯದವರೆಗೆ ಸಂಚಾರ ಮಾರ್ಗ ಈ ಕೆಳಗಿನಂತೆ ಬದಲಾವಣೆ ಮಾಡಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆ
ಸಂಚಾರ ಸಲಹೆಗಳು
ಸನ್ಮಾನ್ಯ ಭಾರತದ ಪ್ರಧಾನ ಮಂತ್ರಿಗಳು ದಿನಾಂಕ 28/11/2025 ರಂದು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿರುವುದರಿಂದ ದಿನಾಂಕ 28/11/2025 ರ ಬೆಳಿಗ್ಗೆ 11:00 ಗಂಟೆಯಿಂದ ಕಾರ್ಯಕ್ರಮದ ಅಂತ್ಯದವರೆಗೆ ಸಂಚಾರ ಮಾರ್ಗ ಈ ಕೆಳಗಿನಂತೆ ಬದಲಾವಣೆ ಮಾಡಲಾಗಿದೆ.
1.ಸನ್ಮಾನ್ಯ ಪ್ರಧಾನ ಮಂತ್ರಿಗಳ ರೋಡ್ ಶೋ ಹಾಗೂ ಕಾರ್ಯಕ್ರಮದ ರಸ್ತೆಯಲ್ಲಿ ಸಂಚಾರ ನಿರ್ಭಂದಿಸಲಾಗಿದೆ.
2.ಮಂಗಳೂರಿನಿಂದ ಕುಂದಾಪುರದ ಕಡೆಗೆ ಚಲಿಸುವ ಲಘು ವಾಹನಗಳು ಉದ್ಯಾವರ – ಮಲ್ಪೆ – ಕೊಡವೂರು -ಆಶೀರ್ವಾದ್ ಜಂಕ್ಷನ್ ಮಾರ್ಗ ವಾಗಿ ಸಂಚರಿಸುವುದು
3. ಕುಂದಾಪುರದಿಂದ ಮಂಗಳೂರಿನ ಕಡೆಗೆ ಚಲಿಸುವ ಲಘು ವಾಹನಗಳು ಅಂಬಾಗಿಲು – ಪೆರಂಪಳ್ಳಿ – ಮಣಿಪಾಲ-ರಾಂಪುರ – ಅಲೆವೂರು – ಕಟಪಾಡಿ ಮಾರ್ಗವಾಗಿ ಸಂಚರಿಸುವುದು.
4. ಮಲ್ಪೆಯಿಂದ ಮಂಗಳೂರಿನ ಕಡೆಗೆ ಚಲಿಸುವ ಲಘು ವಾಹನಗಳು ಮಲ್ಪೆ – ಕಲ್ಮಾಡಿ – ಕಿದಿಯೂರು – ಕಡೆಕಾರ್ -ಉದ್ಯಾವರ – ಕಟಪಾಡಿ ಮಾರ್ಗವಾಗಿ ಸಂಚರಿಸುವುದು. ಅಥವಾ ಮಲ್ಪೆ – ಪಡುಕೆರೆ -ಮಟ್ಟು- ಕಾಪು ಮಾರ್ಗವಾಗಿ ಸಂಚರಿಸುವುದು.
5. ಮಲ್ಪೆಯಿಂದ ಕುಂದಾಪುರದ ಕಡೆಗೆ ಚಲಿಸುವ ಲಘು ವಾಹನಗಳು ಮಲ್ಪೆ- ಕೊಡವೂರು – ಆಶೀರ್ವಾದ ಜಂಕ್ಷನ್–ರೋಬೊಸಾಫ್ಟ್. ಮಾರ್ಗವಾಗಿ ಅಥವಾ ನೇಜಾರು – ಸಂತೆಕಟ್ಟೆ ಮಾರ್ಗವಾಗಿ ಸಂಚರಿಸುವುದು.
6. ಮಂಗಳೂರು ಕಡೆಯಿಂದ ಘನ ವಾಹನಗಳು ಕಟಪಾಡಿಯಿಂದ ಹಿಂದೆ ಸರ್ವೀಸ್ ರಸ್ತೆಯಲ್ಲಿ ನಿಲುಗಡೆ ಮಾಡುವುದು.
7. ಕುಂದಾಪುರ ಕಡೆಯಿಂದ ಘನ ವಾಹನಗಳು ಸಂತೆಕಟ್ಟೆಯಿಂದ ಹಿಂದೆ ಸರ್ವೀಸ್ ರಸ್ತೆಯಲ್ಲಿ ನಿಲುಗಡೆ ಮಾಡುವುದು.
ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್ ಸಲಹೆಗಳು
1. ಕುಂದಾಪುರ ಕಡೆಯಿಂದ ರೋಡ್ ಶೋ ಗೆ ಆಗಮಿಸುವ ವಾಹನಗಳು ಅಂಬಾಗಿಲು ಮಾರ್ಗವಾಗಿ ನಿಟ್ಟೂರು ಬಳಿ ಜನರನ್ನು ಇಳಿಸಿ ಸಿಲಾಸ್ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು ಅಥವಾ ಜನರನ್ನು ರಸಿಕ ಬಾರ್ ಬಳಿ ಇಳಿಸಿ ಎಂ.ಜಿ.ಎಂ ಬಳಿ ಪಾರ್ಕಿಂಗ್ ಮಾಡುವುದು.
-2. ಕುಂದಾಪುರ ಕಡೆಯಿಂದ ಲಕ್ಷಕಂಠ ಗೀತೊತ್ಸವಕ್ಕೆ ಆಗಮಿಸುವ ವಾಹನಗಳು ಅಂಬಾಗಿಲು ಪೆರಂಪಳ್ಳಿ-ದೊಡ್ಡನಗುಡ್ಡೆ ಮಾರ್ಗವಾಗಿ ಎಂ.ಜಿ.ಎಂ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
3.ಹೆಬ್ರಿ, ಹಿರಿಯಡಕ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ಮಣಿಪಾಲ ಮಾರ್ಗವಾಗಿ ಶಾರದಾ ಕಲ್ಯಾಣ ಮಂಟಪದ ಬಳಿ ಎಡಕ್ಕೆ ತಿರುಗಿ ಬೀಡನಗುಡ್ಡೆ ಸ್ಟೇಡಿಯಂನಲ್ಲಿ ಪಾರ್ಕಿಂಗ್ ಮಾಡುವುದು.
4. ಕಾರ್ಕಳ ಮೂಡುಬೆಳ್ಳೆ ಮಾರ್ಗವಾಗಿ ಲಕ್ಷಕಂಠ ಗೀತೊತ್ಸವಕ್ಕೆ ಆಗಮಿಸುವ ವಾಹನಗಳು ಅಲೆವೂರು – ಕುಕ್ಕಿಕಟ್ಟೆ ಮಾರ್ಗವಾಗಿ ಬೀಡನಗುಡ್ಡೆ ಪ್ರದರ್ಶನ ಕ್ರೀಡಾಂಗಣದಲ್ಲಿ ಪಾರ್ಕಿಂಗ್ ಮಾಡುವುದು.
5. ಕಾರ್ಕಳ ಕಡೆಯಿಂದ ರೋಡ್ ಶೋ ಗೆ ಆಗಮಿಸುವ ವಾಹನಗಳು ಮಣಿಪಾಲ ಮಾರ್ಗವಾಗಿ ಶಾರದಾ ಕಲ್ಯಾಣ ಮಂಟಪದ ಬಳಿ ಜನರನ್ನು ಇಳಸಿ ಬೀಡನಗುಡ್ಡೆ ಸ್ಟೇಡಿಯಂನಲ್ಲಿ ಪಾರ್ಕಿಂಗ್ ಮಾಡುವುದು.
5.ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು, ಕಟಪಾಡಿ ಬೈಲೂರು ಮುದ್ದಣ್ಣ ಎಸ್ಟೇಟ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು. ಉದ್ಯಾವರ ಮಾರ್ಗವಾಗಿ-
6. ಮಲ್ಪೆ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ಅಂಬಲಪಾಡಿ ಮಾರ್ಗವಾಗಿ ಶಾಮಿಲಿ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
ಸನ್ಮಾನ್ಯ ಭಾರತದ ಪ್ರಧಾನ ಮಂತ್ರಿಗಳು ದಿನಾಂಕ 28/11/2025 ರಂದು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿರುವುದರಿಂದ ದಿನಾಂಕ 28/11/2025 ರ ಬೆಳಿಗ್ಗೆ 11:00 ಗಂಟೆಯಿಂದ ಕಾರ್ಯಕ್ರಮದ ಅಂತ್ಯದವರೆಗೆ ಸಂಚಾರ ಮಾರ್ಗ ಈ ಕೆಳಗಿನಂತೆ ಬದಲಾವಣೆ ಮಾಡಲಾಗಿದೆ pic.twitter.com/lJx0OAHdFn
— SP Udupi (@PoliceUdupi) November 26, 2025








