ಬೆಂಗಳೂರು: ನಾಳೆ ರಾಜ್ಯ ಸರ್ಕಾರದ ಕಾರ್ಯಕ್ರಮವೊಂದನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಾಹನ ಸವಾರರಿಗೆ ಮಹತ್ವದ ಮಾಹಿತಿ ಎನ್ನುವಂತೆ ಸಂಚಾರ ಬದಲಾವಣೆ ಮಾಡಿರುವುದಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಅರಮನೆ ಮೈದಾನದ ಕೃಷ್ಣವಿಹಾರ ಗೇಟ್ ಹಾಗೂ ಬಳ್ಳಾರಿ ರಸ್ತೆ, ನಂ-01, ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ದಿನಾಂಕ 28.11.2025 ರಂದು ಬೆಳಿಗ್ಗೆ 07:00 ಗಂಟೆಯಿಂದ ಸಂಜೆ 04:00 ಗಂಟೆಯವರೆಗೆ ಐಸಿಡಿಎಸ್ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಈ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ ರಾಜ್ಯ ಸರ್ಕಾರದ ಕ್ಯಾಬಿನೆಟ್ ದರ್ಜೆ ಸಚಿವರು. ಇತರೆ ಗಣ್ಯವ್ಯಕ್ತಿಗಳು ಸೇರಿದಂತೆ ಅಂದಾಜು 40,000 ಸಾರ್ವಜನಿಕರು ಹಾಗೂ 959 ವಾಹನಗಳು ಬರುವ ನಿರೀಕ್ಷೆ ಇರುತ್ತದೆ ಎಂದಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳವಾದ ಅರಮನೆ ಮೈದಾನದ ಕೃಷ್ಣವಿಹಾರ ಗೇಟ್ ಸಿ ವಿ ರಾಮನ್ ರಸ್ತೆ, ಜಯಮಹಲ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಂಭವವಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರದ ದೃಷ್ಠಿಯಿಂದ ದಿನಾಂಕ:28.11.20025 ರಂದು ಬಳ್ಳಾರಿ ರಸ್ತೆಯಲ್ಲಿ ಈ ಕೆಳಕಂಡ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.
ಈ ಸಂಚಾರ ಮಾರ್ಗ ಬದಲಾವಣೆ
1. ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವ ಸಾರ್ವಜನಿಕರು/ವಾಹನ ಚಾಲಕರು ಓಲ್ಡ್ ಹೈಗೌಂಡ ಜಂಕ್ಷನ್ ಕಲ್ಪನಾ ಜಂಕ್ಷನ್ ಓಲ್ಡ್ ಉದಯ ಟಿವಿ ಜಂಕ್ಷನ್- ಕಂಟೋನೆಂಟ್ ರೈಲ್ವೇ ಸ್ಟೇಷನ್ ಟ್ಯಾನರಿ ರಸ್ತೆ- ನಾಗಾವರ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವುದು.
2. ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ನಗರದ ಕೇಂದ್ರ ಭಾಗದ ಕಡೆಗೆ ಹೋಗುವ ಸಾರ್ವಜನಿಕರು/ವಾಹನ ಚಾಲಕರು ಹೆಬ್ಬಾಳದಲ್ಲಿ ಎಡತಿರುವು ಪಡೆದು ನಾಗಾವರ ಜಂಕ್ಷನ್ ನಲ್ಲಿ ಬಲತಿರುವು ಪಡೆದು ಬಂಬು ಬಜಾರ್ ಕ್ವಿನ್ಸ್ ರೋಡ ಮುಖಾಂತರ ಸಿಟಿ ಕಡೆಗೆ ಹೋಗುವುದು.ಹೆಬ್ಬಾಳ ರಿಂಗ್ ರಸ್ತೆ-ಕುವೆಂಪು ಸರ್ಕಲ್ -ಗೊರಗುಂಟೆ ಪಾಳ್ಯ ಜಂಕ್ಷನ ನಲ್ಲಿ ಎಡ ತಿರುವು ಪಡೆದು ಡಾ. ರಾಜ್ ಕುಮಾರ್ ರಸ್ತೆ ಮೂಲಕ ನಗರದ ಕಡೆ ಹೋಗಬಹುದು.
3. ಯಶವಂತಪುರ ಕಡೆಯಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವವರು ಮತ್ತಿಕೆರೆ ರಸ್ತೆ ಮೂಲಕ ಬಿ ಇ ಎಲ್ ವೃತ್ತದಲ್ಲಿ ಬಲತಿರುವು ಪಡೆದು ರಿಂಗ್ ರೋಡ್ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವುದು.
4. ಯಶವಂತಪುರ ಕಡೆಯಿಂದ ಸಿಟಿ ಕಡೆಗೆ ಹೋಗುವವರು ಡಾ. ರಾಜ್ ಕುಮಾರ್ ರಸ್ತೆ ಮೂಲಕ ಸಿಟಿ ಕಡೆಗೆ ಹೋಗುವುದು.
ಭಾರೀ ವಾಹನಗಳ ಸಂಚಾರ ನಿರ್ಬಂಧ ಹಾಗೂ ಪರ್ಯಾಯ ಮಾರ್ಗ :
1. ಹೆಬ್ಬಾಳ ಜಂಕ್ಷನ್: ಹೆಬ್ಬಾಳ ಕಡೆಯಿಂದ ಬರುವ ಬಾರೀ ವಾಹನಗಳನ್ನು ಬಳ್ಳಾರಿ ರಸ್ತೆಯ ಕಡೆ ಕಳುಹಿಸದೇ ಔಟರ್ ರಿಂಗ್ ರೋಡ್ ನಲ್ಲಿ ಚಲಿಸುವುದು,
2. ಓಲ್ಡ್ ಹೈಗ್ಲೆಂಡ್ ಪಿ.ಎಸ್ ಜಂಕ್ಷನ್ : ಹೈಗೌಂಡ್ ಕಡೆಯಿಂದ ಬರುವ ವಾಹನಗಳನ್ನು ಕಲ್ಪನಾ ಜಂಕ್ಷನ್ ಓಲ್ಡ್ ಉದಯ ಟಿವಿ ಜಂಕ್ಷನ್- ಕಂಟೋನ್ಸೆಂಟ್ ರೈಲ್ವೇ ಸ್ಟೇಷನ್ – ಟ್ಯಾನರಿ ರಸ್ತೆ- ನಾಗಾವರ ಕಡೆ ಚಲಿಸುವುದು.
3. ಯಶವಂತಪುರ ಕಡೆಯಿಂದ ಸಿ.ವಿ ರಾಮನ್ ರಸ್ತೆಯ ಕಡೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ವಾಹನ ನಿಲುಗಡೆ ನಿಷೇಧಿಸಿರುವ ರಸ್ತೆಗಳು :
ಬಳ್ಳಾರಿ ರಸ್ತೆ
ಪ್ಯಾಲೇಸ್ ರಸ್ತೆ ನಂದಿದುರ್ಗ ರಸ್ತೆ
ಸಿ ವಿ ರಾಮನ್ ರೋಡ
ಜಯಮಹಲ್ ರಸ್ತೆ ಗುಟ್ಟಹಳ್ಳಿ ರಸ್ತೆ
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) November 26, 2025








