ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಬಳಕೆ ಮಾಡೋರ ಸಂಖ್ಯೆ ಹೆಚ್ಚಾಗಿದೆ. ವಾಟ್ಸ್ ಆಪ್, ಫೇಸ್ ಬುಕ್, ಇನ್ ಸ್ಟಾಗ್ರಾಂ ಬಳಕೆ ದಿನೇ ದಿನೇ ಹೆಚ್ಚಿದಂತೆ ಅದರೊಚ್ಚಿಗೆ ಕ್ರೈಂಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ. ನೀವು ಇನ್ ಸ್ಟಾಗ್ರಾಂ ಬಳಸುತ್ತಾ ಇದ್ದೀರಿ ಅಂದ್ರೆ ಅದಕ್ಕೂ ಮುನ್ನ ಮುಂದೆ ಸುದ್ದಿ ಓದಿ.
ತಾನು ಬ್ಯುಸಿನೆಸ್ ಮ್ಯಾನ್ ಅಂತ ಇನ್ ಸ್ಟಾಗ್ರಾಂನಲ್ಲಿ ಪ್ರೊಫೈಲ್ ಗೆ ಸ್ಮಾರ್ಟ್ ಡಿಪಿ ಜನಾರ್ದನ ಆಲಿಯಾಸ್ ಸಿದ್ಧಾರ್ಥ್ ವೀರ್ ಹಾಕಿಕೊಂಡಿದ್ದನು. ಯಾರೆಲ್ಲ ನೀಟ್ ಗೆ ತಯಾರಿ ನಡೆಸುತ್ತಿದ್ದರೋ ಅವರನ್ನೇ ಟಾರ್ಗೆಟ್ ಮಾಡುತ್ತಿದ್ದ ಸಿದ್ಧಾರ್ಥ್. ಅವರನ್ನು ನೈಸ್ ಆಗಿ ಫ್ರೆಂಡ್ ಮಾಡಿಕೊಳ್ಳುತ್ತಿದ್ದಂತ ಆರೋಪಿ, ಹಾಗೆ ಹೀಗೆ ಅಂತ ಡ್ರಾಮಾ ಮಾಡುತ್ತಿದ್ದನಂತೆ.
ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಂತ ಆ ಹುಡುಗಿಯೊಬ್ಬಳಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಂತ ಆತ, ಆಕೆಯನ್ನು ಪರಿಚಯ ಮಾಡಿಕೊಂಡಿದ್ದನು. ಆ ಬಳಿಕ ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ನಂಬಿಸಿ, ಸಿನಿಮಾ ಸ್ಟೈಲಿನಲ್ಲಿ ಪ್ರಪೋಸ್ ಕೂಡ ಮಾಡಿದ್ದನು.
ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಯುವತಿಯ ಮನೆಗೆ ತೆರಳಿದ್ದಂತ ಆತ, ಬಾರ್ ಅಂಡ್ ರೆಸ್ಟೋರೆಂಟ್ ಮಾಡಬೇಕು ಅದು, ಇದು ಅಂತ ಲಕ್ಷ ಲಕ್ಷ ಹಣವನ್ನು ನಯವಾಗಿ ಪೀಕಿದ್ದಾನೆ. ಹಂತ ಹಂತವಾಗಿ 8 ಲಕ್ಷ ಪೀಕಿದ್ದಂತ ಸಿದ್ಧಾರ್ಥ್, ಹಣ ಕೇಳೋದ0ನ್ನು ನಿಲ್ಲಿಸಿರಲಿಲ್ಲ.
ಅದೊಂದು ದಿನ ಮನೆಗೆ ಬಂದಿದ್ದಂತ ಸಿದ್ಧಾರ್ಥ್ ನಿಗೆ ಆ ಯುವತಿ ಕಾಫಿ ಮಾಡಿಕೊಡುವುದಾಗಿ ಒಳಗೆ ಅಡುಗೆ ಮನೆಗೆ ಹೋಗುತ್ತಿದ್ದಂತೆ, ಇತ್ತ ಆತ ಮನೆಯಲ್ಲಿದ್ದಂತ ಅರ್ಥ ಕೆಜಿಯಷ್ಟು ಚಿನ್ನಾಭರಣ ಕದ್ದು ಪರಾರಿಯಾಗಿದ್ದನು.
ಸಂಬಂಧಿಕರ ಮದುವೆಗೆ ತೆರಳೋದಕ್ಕೆ ಆಭರಣ ನೋಡಿದಾಗ ಮನೆಯಲ್ಲಿ ಇಲ್ಲದ್ದರಿಂದ ಪುತ್ರಿಯನ್ನು ವಿಚಾರಿಸಿದಾಗ ಗೊತ್ತಿಲ್ಲ ಎಂದಿದ್ದಾಳೆ. ಅಲ್ಲದೇ ಇದು ಸಿದ್ಧಾರ್ಥ್ ಕೈ ಚಳಕ ಎಂಬುದಾಗಿ ಅರಿವಾಗಿದೆ. ಕೂಡಲೇ ಜ್ಞಾನಭಾರತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಸಿದ್ಧಾರ್ಥ್ ಬಂಧಿಸಿದ್ದಾರೆ.
ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಗೆದ್ದ ಸಾಗರ ಟೌನ್ ಠಾಣೆ ಪೊಲೀಸ್ ಪುತ್ರಿ ಪ್ರೇಕ್ಷಾ ಗೌಡ, ರಾಷ್ಟ್ರ ಮಟ್ಟಕ್ಕೆ ಆಯ್ಕೆ
KSET ಪರೀಕ್ಷೆ ಪಾಸ್ ಮಾಡಿದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ: ಕ್ಲೇಮ್ ಪ್ರಕಾರ ದಾಖಲೆ ಇದ್ದರೆ ಮಾತ್ರ ಪ್ರಮಾಣ ಪತ್ರ
BIG NEWS : ರಾಜ್ಯದಲ್ಲಿ ಅವಕಾಶ ಸಿಕ್ಕರೆ ದಲಿತರನ್ನು ‘CM’ ಮಾಡುತ್ತೇವೆ : ಸಚಿವ ಕೆಜೆ ಜಾರ್ಜ್ ಹೇಳಿಕೆ








