ಕೊಪ್ಪಳ : ಅಪ್ರಾಪ್ತ ಮಕ್ಕಳಿಗೆ ವಾಹನ ಕೊಡುವ ಪೋಷಕರೇ ಎಚ್ಚರ,ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ಕೊಟ್ಟ ವ್ಯಕ್ತಿಗೆ 26 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ್ ಪಾಟೀಲ್ ಅವರು, ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ಕೊಟ್ಟ ವ್ಯಕ್ತಿಗೆ 26 ಸಾವಿರ ರೂ. ದಂಡ ಹಾಗೂ ಬಾಲಕನಿಗೆ ಒಂದು ದಿನ ಕೋರ್ಟ್ ಗೋಡೆ ಸ್ವಚ್ಛಗೊಳಿಸುವ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
2025, ಜ.7ರಂದು ನಗರದಲ್ಲಿ ಬಾಲಕ ಅತಿವೇಗ, ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ್ದ. ಸಂಚಾರಿ ಠಾಣೆಯ ಪೊಲೀಸರು ಬಾಲಕನ ವಿಚಾರಣೆ ನಡೆಸಿದ್ದರು. ಬೈಕ್ ನೀಡಿದ ಮಾಲೀಕ ತಿಮ್ಮಣ್ಣ ವಿರುದ್ಧ ಪ್ರಕರಣ ದಾಖಲಿಸಿದ್ದರು.








