ಬೆಂಗಳೂರು: 2025ನೇ ಸಾಲಿನ ಬಿ.ಇಡಿ ದಾಖಲಾತಿಗೆ ಮೊದಲ ಸೀಟು ಹಂಚಿಕೆ ಪಟ್ಟಿಯನ್ನು ಕೇಂದ್ರೀಕೃತ ದಾಖಲಾತಿ ಘಟಕವು ಬಿಡುಗಡೆ ಮಾಡಿದೆ.
ಈ ಕುರಿತಂತೆ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2025ನೇ ಸಾಲಿನ ಬಿ.ಇಡಿ ದಾಖಲಾತಿ ಸಂಬಂಧ ಮೊದಲ ಸೀಟು ಹಂಚಿಕೆ ಪಟ್ಟಿಯನ್ನು https://schooleducation.karnataka.gov.in/ ಜಾಲತಾಣದಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದಿದ್ದಾರೆ.
ಈ ಪಟ್ಟಿಯನ್ನು ವೀಕ್ಷಿಸಿ ಅಭ್ಯರ್ಥಿಗಳು ಹಂಚಿಕೆಯಾದ ಕಾಲೇಜುಗಳಿಗೆ ಸೇರ ಬಯಸಿದಲ್ಲಿ ಯೂಸರ್ ಐಟಿ ಮತ್ತು ಪಾಸ್ ವರ್ಡ್ ಅನ್ನು ಬಳಸಿ ದಿನಾಂಕ 25-11-2025ರ ಇಂದಿನಿಂದ 05-12-2025ರವರೆಗೆ ನಿಗದಿತ ಶುಲ್ಕದ ಚಲನ್ ಅನ್ನು ಮುದ್ರಿಸಿಕೊಂಡು ಎಸ್ ಬಿ ಐ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಪಾವತಿಸಬಹುದು. ಅದರ ಮೂಲ ಪ್ರತಿ ಹಾಗೂ ಇತರೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಸಂಬಂಧಿಸಿದ ಜಿಲ್ಲಾ ನೋಡಲ್ ಕೇಂದ್ರಕ್ಕೆ ತೆರಳಿ, ದಾಖಲಾತಿ ಪತ್ರವನ್ನು ಪಡೆದುಕೊಳ್ಳಬೇಕು ಎಂದಿದ್ದಾರೆ.
ಇನ್ನೂ ಮೊದಲ ಸುತ್ತಿನ ಆಯ್ಕೆಯಲ್ಲಿ ಹಂಚಿಕೆಯಾದ ಕಾಲೇಜಿಗೆ ಸೇರಲು ಬಯಸದೇ ಇರುವ ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಬಳಸಿ Opted for the second round ಎಂದು ದಿನಾಂಕ 25-11-2025ರಿಂದ 5-12-2025ರ ಒಳಗಾಗಿ ತಮ್ಮ ಅಭಿಮತವನ್ನು ದಾಖಲಿಸಬೇಕು. ಒಂದು ವೇಳೆ ಅಭಿಮತ ದಾಖಲಿಸದೇ ಇದ್ದರೇ ಅಂತಹ ಅಭ್ಯರ್ಥಿಗಳನ್ನು ಬಿಟ್ಟು, ಎರಡನೇ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂಬುದಾಗಿ ಎಚ್ಚರಿಸಿದ್ದಾರೆ.
ಮೊದಲ ಪಟ್ಟಿಯ ಹಂಚಿಕೆ ಪ್ರಕಾರ ಸೇರ್ಪಡೆಯಾಗಿ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟ್ ಮ್ಯಾಟ್ರಿಕ್ಸ್ ಅನ್ನು ದಿನಾಂಕ 08-12-2025ರಂದು ಬಿಡುಗಡೆಗೊಳಿಸಲಾಗುವುದು. ಇದರಂತೆ ಮೊದಲ ಪಟ್ಟಿಯಲ್ಲಿ ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸದವರು Opted for the second round ಎಂದು ಅಭಿಮತವನ್ನು ದಾಖಲಿಸಿದ ಅಭ್ಯರ್ಥುಗಳು ತಮ್ಮ ಎರಡನೇ ಮತ್ತು ಕೊನೆಯ ಸೀಟಿ ಹಂಚಿಕೆಗಾಗಿ ದಿನಾಂಕ 08-12-2025ರಿಂದ ದಿನಾಂಕ 10-12-2025ರವರೆಗೆ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಕಾಲೇಜುಗಳ ಆಯ್ಕೆಯ Option Entry ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು

ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಆಚರಣೆಗಿಂತ ಕಾರ್ಯಾಚರಣೆ ಬಹು ಮುಖ್ಯ: ಡಾ.ಜಿ ಪ್ರಶಾಂತ್ ನಾಯಕ
ತಾತ್ಕಾಲಿಕ ಸಿಎಂ ಬೇಡ; ರೈತರ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಬೇಕು: ಬಿ.ವೈ.ವಿಜಯೇಂದ್ರ








