ಕಾಬೂಲ್ : ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಸೇನೆ ಮತ್ತೆ ವೈಮಾನಿಕ ದಾಳಿ ನಡೆಸಿದ್ದು, ಈ ವೇಳೆ 9 ಮಕ್ಕಳು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಮಾಹಿತಿ ನೀಡಿದೆ.
ಪಾಕಿಸ್ತಾನ ಮತ್ತೆ ಅಫ್ಘಾನಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಿದೆ. ಅಫ್ಘಾನ್ ವಕ್ತಾರ ಜಬಿಹುಲ್ಲಾ ಈ ಮಾಹಿತಿಯನ್ನು ನೀಡಿದ್ದಾರೆ. ಖೋಸ್ಟ್ನಲ್ಲಿ 9 ಮಕ್ಕಳು ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಕುನಾರ್-ಪಕ್ತಿಕಾದಲ್ಲಿಯೂ ವೈಮಾನಿಕ ದಾಳಿ ನಡೆಸಲಾಗಿದ್ದು, ಅಲ್ಲಿ ಹಾನಿ ಸಂಭವಿಸಿದೆ.
ಸೋಮವಾರ ರಾತ್ರಿ 12:00 ಗಂಟೆಗೆ ನಾಗರಿಕ ಪ್ರದೇಶದಲ್ಲಿ ಈ ವೈಮಾನಿಕ ದಾಳಿ ನಡೆದಿದೆ. ಖೋಸ್ಟ್ ಪ್ರಾಂತ್ಯದ ಗಾರ್ಬ್ಜೋ ಜಿಲ್ಲೆಯ ಮಗಲ್ಗೈ ಪ್ರದೇಶದಲ್ಲಿ, ಪಾಕಿಸ್ತಾನಿ ಸೇನೆಯು ಸ್ಥಳೀಯ ನಾಗರಿಕರ ಮನೆಯ ಮೇಲೆ ಬಾಂಬ್ ದಾಳಿ ನಡೆಸಿ, ಒಬ್ಬ ಮಹಿಳೆ, 5 ಹುಡುಗರು, 4 ಹುಡುಗಿಯರು ಸಾವನ್ನಪ್ಪಿದರು ಮತ್ತು ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿದರು. ಘಟನೆಯಲ್ಲಿ ನಾಲ್ವರು ನಾಗರಿಕರು ಸಹ ಗಾಯಗೊಂಡಿದ್ದಾರೆ.








