ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶ ಸಲುವಾಗಿ ನಡೆದ ಮೂಲ ದಾಖಲೆಗಳ ಪರಿಶೀಲನೆ ವೇಳೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿ (SCA, SCB, SCC) ಸಂಬಂಧ ದಾಖಲೆ ಸಲ್ಲಿಸದಿರುವ ಅಭ್ಯರ್ಥಿಗಳು ನ.25 ಮತ್ತು 26 ರಂದು ಖುದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಬಂದು ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ದಾಖಲೆ ಪರಿಶೀಲನೆ ವೇಳೆಗೆ ಅನೇಕರು ತಹಶೀಲ್ದಾರ್ ಅವರಿಂದ ಒಳ ಮೀಸಲಾತಿ ಕುರಿತ ಪ್ರಮಾಣ ಪತ್ರಗಳನ್ನು ಪಡೆಯಲು ಆಗಿರಲಿಲ್ಲ ಎಂದು ಅನೇಕ ಅಭ್ಯರ್ಥಿಗಳು ಮನವಿ ಸಲ್ಲಿಸಿದ ಕಾರಣಕ್ಕೆ ಈ ಅನುಕೂಲ ಮಾಡಲಾಗಿದೆ. ಯಾರೆಲ್ಲ ದಾಖಲೆಗಳನ್ನು ಪರಿಶೀಲನಾ ಅರ್ಜಿ ಜತೆ ಸಲ್ಲಿಸುತ್ತಾರೊ ಅಂತಹವರನ್ನು ಸದರಿ ಪ್ರವರ್ಗದಡಿ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಹೇಳಿದ ಮೇಲೆ ಅದೇ ವೇದವಾಕ್ಯ: ಡಿಸಿಎಂ ಡಿ.ಕೆ.ಶಿವಕುಮಾರ್
Health Tips: ಫ್ರಿಡ್ಜ್‌ನಲ್ಲಿಟ್ಟ ಹಿಟ್ಟನ್ನು ಬಳಸುವುದು ಸುರಕ್ಷಿತವೇ ?








