ಹುಬ್ಬಳ್ಳಿ; ನಗರದಲ್ಲಿ ಇಡಿ ಅಧಿಕಾರಿಗಳೆಂದು ಚಿನ್ನದ ವ್ಯಾಪಾರಿಯನ್ನು ಬೆದರಿಸಿ ಬರೋಬ್ಬರಿ 3 ಕೋಟಿ ಲೂಟಿ ಮಾಡಿರುವಂತ ಘಟನೆ ನಡೆದಿದೆ. ಈ ಮೂಲಕ ಬೆಂಗಳೂರಲ್ಲಿ ದರೋಡೆ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಮಹಾ ಲೂಟಿ ನಡೆದಿದೆ.
ಹುಬ್ಬಳ್ಳಿಯ ನೀಲಿಜನ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. 3 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಲೂಟಿ ಮಾಡಲಾಗಿದೆ. ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿಗೆ ವಂಚನೆ ಮಾಡಲಾಗಿದೆ. ಕೇರಳದ ಚಿನ್ನಾಭರಣ ವ್ಯಾಪಾರಿ ಎಂ ಆರ್ ಸುದೀನ್ ಎಂಬುವರೇ ವಂಚನೆಗೆ ಒಳಗಾದಂತವರಾಗಿದ್ದಾರೆ.
ಕಳೆದ ಗುರುವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಚಾರಣೆ ನೆಪದಲ್ಲಿ 2 ಕೆಜಿ 942 ಗ್ರಾಂ ಚಿನ್ನಾಭರಣ, 2 ಲಕ್ಷ ನಗದು ದೋಚಿ ಖದೀಮರು ಎಸ್ಕೇಪ್ ಆಗಿದ್ದಾರೆ. ನವೆಂಬರ್.15ರಂದು ಕೆಲಸಗಾರ ವಿವೇಕ್ ಜೊತೆಗೆ ಸುದೀನ್ ಮಂಗಳೂರಿನಿಂದ ಹುಬ್ಬಳ್ಳಿಗೆ ಬಂದಾಗ ಈ ಘಟನೆ ನಡೆದಿದೆ.
Health Tips: ಫ್ರಿಡ್ಜ್‌ನಲ್ಲಿಟ್ಟ ಹಿಟ್ಟನ್ನು ಬಳಸುವುದು ಸುರಕ್ಷಿತವೇ ?
ಈ ಎರಡು ಎಲೆಗಳು ಮನೆಯಲ್ಲಿದ್ದರೆ ಸಾಕು, ಎಲ್ಲ ದೋಷಗಳು, ದುಷ್ಟಶಕ್ತಿಗಳು ಓಡಿ ಹೋಗುತ್ತವೆ








