ಕೊಡಗು: ಜಿಲ್ಲೆಯಲ್ಲಿ ಪುಟ್ ಬಾಲ್ ಸೆಮಿಫೈನಲ್ ಪಂದ್ಯದ ವೇಳೆಯಲ್ಲಿ ಮಾರಾಮಾರಿಯೇ ನಡೆದಿದೆ. ಮೈದಾನದಲ್ಲೇ ಅಭಿಮಾನಿಗಳು ಬಡಿದಾಡಿಕೊಂಡಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ಪುಟ್ ಬಾಲ್ ಪಂದ್ಯಾವಳಿಯ ಸಂದರ್ಭದಲ್ಲಿ ಎರಡು ಗುಂಪುಗಳು ಬಡಿದಾಡಿಕೊಂಡಿವೆ. ಕಲ್ಲುಬಾಯ್ಸ್ ಸಂಘದಿಂದ ಆಯೋಜಿಸಿದ್ದ ಪಂದ್ಯಾವಳಿಯ ವೇಳೆಯಲ್ಲಿ ಈ ಗಲಾಟೆ ನಡೆದಿದೆ.
ಪುಟ್ ಬಾಲ್ ಸೆಮಿಫೈನಲ್ ಆಡುತ್ತಿದ್ದ 2 ತಂಡಗಳ ಅಭಿಮಾನಿಗಳು ನಡುವೆ ಮಾರಾಮಾರಿಯಾಗಿದೆ. ಕುರ್ಚಿ ಹಿಡಿದು ಪರಸ್ಪರ ಅಭಿಮಾನಿಗಳು ಬಡಿದಾಟ ಮಾಡಿಕೊಂಡಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದಂತ ಪೊಲೀಸರು ಗುಂಪನ್ನು ಚದುರಿಸಿದ್ದಾರೆ.
Health Tips: ಫ್ರಿಡ್ಜ್‌ನಲ್ಲಿಟ್ಟ ಹಿಟ್ಟನ್ನು ಬಳಸುವುದು ಸುರಕ್ಷಿತವೇ ?








