ಪೇಶಾವರ: ಪೇಶಾವರದ ಫ್ರಾಂಟಿಯರ್ ಕಾರ್ಪ್ಸ್ (ಎಫ್ ಸಿ) ಪ್ರಧಾನ ಕಚೇರಿಯ ಮೇಲೆ ಸೋಮವಾರ ಬೆಳಿಗ್ಗೆ ದಾಳಿ ನಡೆದಿದ್ದು, ಮಿಲಿಟರಿ ಕಂಟೋನ್ಮೆಂಟ್ ಬಳಿಯ ಹೆಚ್ಚು ಜನನಿಬಿಡ ಪ್ರದೇಶದಲ್ಲಿ ಭಾರಿ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ಸಂಭವಿಸಿವೆ.
ಘಟನೆಯನ್ನು ದೃಢಪಡಿಸಿದ ಪೇಶಾವರ ಕ್ಯಾಪಿಟಲ್ ಸಿಟಿ ಪೊಲೀಸ್ ಅಧಿಕಾರಿ (ಸಿಸಿಪಿಒ) ಡಾ ಮಿಯಾನ್ ಸಯೀದ್ ಅಹ್ಮದ್, “ಎಫ್ಸಿ ಪ್ರಧಾನ ಕಚೇರಿ ದಾಳಿಗೆ ಒಳಗಾಗಿದೆ. ನಾವು ಪ್ರತಿಕ್ರಿಯಿಸುತ್ತಿದ್ದೇವೆ ಮತ್ತು ಪ್ರದೇಶವನ್ನು ಸುತ್ತುವರೆಯಲಾಗುತ್ತಿದೆ” ಎಂದರು.
ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಆತ್ಮಾಹುತಿ ಬಾಂಬರ್ ಎಫ್ ಸಿ ಪ್ರಧಾನ ಕಚೇರಿಯ ಮುಖ್ಯ ದ್ವಾರದಲ್ಲಿ ತನ್ನನ್ನು ತಾನೇ ಸ್ಫೋಟಿಸಿಕೊಂಡನು, ನಂತರ ತೀವ್ರ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಕನಿಷ್ಠ 3 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ








