ಬೆಂಗಳೂರು: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತಿಸುವುದಕ್ಕೆ ಸರ್ಕಾರ ಅವಕಾಶ ನೀಡಿದೆ. ಆದರೇ ಈ ಉದ್ದೇಶಗಳಿಗಾಗಿ ಕೆಲವು ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಈ ಸಂಬಂಧ ಕಂದಾಯ ಇಲಾಖೆಯ ಭೂಮಂಜೂರಾತಿ ವಿಭಾಗದ ಸರ್ಕಾರದ ಅಧೀನ ಕಾರ್ಯದರ್ಶಿಯವರು ದಿನಾಂಕ 20-02-2019ರಲ್ಲೇ ಹೊರಡಿಸಿರುವಂತ ನಡವಳಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ
ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 95(2) ರಡಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಹೊಂದಿರುವ ಭೂಮಿಯ ಅಧಿಭೋಗದಾರನು ಅಂತಹ ಜಮೀನನ್ನು ಅಥವಾ ಅದರ ಯಾವುದೇ ಭಾಗವನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಲು ಇಚ್ಚಿಸಿದರೆ ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ಸರ್ಕಾರದ ಸುತ್ತೋಲೆ ದಿನಾಂಕ: 17-10-2008 ರನ್ವಯ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 (ಕೆಟಿಪಿಪಿ) ಅನ್ವಯ ಕೃಷಿ ಜಮೀನನ್ನು ಭೂ ಪರಿವರ್ತಿಸಲಾದ ಯಾವುದೇ ಕಾನೂನಿನ ಉಪಬಂಧಗಳನ್ನು ಉಲ್ಲಂಘಿಸುತ್ತಿಲ್ಲವೆಂಬುದನ್ನು ಹಾಗೂ ಭೂ ಉಪಯೋಗ ಬದಲಾವಣೆಗೆ ಸಂಬಂಧಿಸಿದ ಓಡಿಪಿ ಮತ್ತು ಸಿಡಿಪಿ ಅನ್ವಯ ಇದೆಯೇ ಎನ್ನುವ ಕುರಿತು ದೃಢೀಕರಿಸಿಕೊಳ್ಳುವ ಸಲುವಾಗಿ ಬಿಡಿಎ/ ಬಿಎಂಆರ್‌ಡಿಎ | ಸ್ಥಳೀಯ ಯೋಜನಾ ಪ್ರಾಧಿಕಾರಗಳ ಎನ್‌ಓಸಿಯನ್ನು ಪಡೆದ ನಂತರವೇ ಭೂ ಪರಿವರ್ತನೆ ಆದೇಶ ನೀಡಲು ಕ್ರಮವಹಿಸಲಾಗುತ್ತಿದೆ.
ಮುಂದುವರೆದು, ಅರ್ಜಿದಾರರು ಭೂ ಪರಿವರ್ತನೆಗೆ ಕೋರಿರುವ ಜಮೀನು ಪಿ.ಟಿ.ಸಿ.ಎಲ್. ಕಾಯ್ದೆಗೆ ಒಳಪಟ್ಟಿಲ್ಲವೆಂದು, ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 79ಎ ಮತ್ತು 79ಬಿ ಒಳಪಟ್ಟಿಲ್ಲವೆಂದು, ಭೂ ಸ್ವಾಧೀನತೆಗೆ ಒಳಪಟ್ಟಿಲ್ಲ ಎಂಬ ಬಗ್ಗೆ ಹಾಗೂ ಇತರ ಕೆಲವು ನಿರಾಕ್ಷೇಪಣಾ ಪತ್ರಗಳನ್ನು ವಿವಿಧ ಪ್ರಾಧಿಕಾರದಿಂದ ಮುಂಚಿತವಾಗಿ ಪಡೆದು ಭೂ ಪರಿವರ್ತನೆಗೆ ಅರ್ಜಿಯೊಂದಿಗೆ ಸಲ್ಲಿಸಬೇಕಾಗಿದ್ದು, ಅರ್ಜಿದಾರರಿಗೆ ಸಾಕಷ್ಟು ಸಮಯ ಮತ್ತು ಹಣದ ಹೊರೆಯಾಗುತ್ತಿದೆ.
ದಿನಾಂಕ: 02-02-201809 ದಿನಾಂಕ:01/03/2018ರಿಂದ ಭೂ ಪರಿವರ್ತನಾ ಕೋರಿಕೆಗಳನ್ನು ಭೂ ಪರಿವರ್ತನಾ ತಂತ್ರಾಂಶದ ಮುಖಾಂತರವೇ ನಿರ್ವಹಿಸತಕ್ಕದೆಂದು ಹಾಗೂ ಭೂ ಪರಿವರ್ತನೆಯ ಕೋರಿಕೆಗಳ ಆದೇಶ | ನಿರ್ಧಾರಗಳನ್ನು ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿ ಕಾರ್ಡಿನ ಮೂಲಕವೇ ಹೊರಡಿಸತಕ್ಕದೆಂದು ತಿಳಿಸಲಾಗಿದೆ.
ಮುಂದುವರೆದು. ಈ ವಿಷಯದಲ್ಲಿ ಆಗಾಗ್ಗೆ ಸರ್ಕಾರದಿಂದ ಸುತ್ತೋಲೆಗಳ ಮೂಲಕ ಕಾಲಕಾಲಕ್ಕೆ ಹಲವು ನಿರ್ದೇಶನಗಳನ್ನು ನೀಡಲಾಗಿದೆ. ಕೈಗಾರಿಕೋದ್ಯಮ ಹಾಗೂ ಸೌರ ವಿದ್ಯುತ್ ಮುಂತಾದ ಯೋಜನೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ, 1961ರ ಕಲಂ 109ಗೆ ತಿದ್ದುಪಡಿ ತರಲಾಗಿದ್ದು, ಭೂ ಪರಿವರ್ತನೆಯ ವಿಧಾನವನ್ನು ಸಾಕಷ್ಟು ಸರಳೀಕರಣಗೊಳಿಸಲಾಗಿದೆ. ಪ್ರವಾಸೋದ್ಯಮ. ವಸತಿ ಸೌಕರ್ಯ ಮುಂತಾದ ಮೂಲಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ಭೂ ಪರಿವರ್ತನಾ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಿಸುವುದು ಅವಶ್ಯವಾಗಿರುತ್ತದೆ.
ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತನೆಯ ಕೋರಿಕೆಗಳನ್ನು ಆನ್‌ಲೈನ್ ಮುಖಾಂತರ ಪಡೆದು ಹಾಗೂ ತಂತ್ರಾಂಶದ ಮೂಲಕ ನಿರ್ವಹಿಸಲು ಕ್ರಮವಹಿಸಲಾಗಿದೆ. ತಂತ್ರಾಂಶದ ಮೂಲಕ ಭೂ ಪರಿವರ್ತನೆಯ ಕೋರಿಕೆಗಳನ್ನು ನಿರ್ವಹಿಸಲು ಸೌಲಭ್ಯಗಳನ್ನು ಕಲ್ಪಿಸಲಾಗಿದ್ದರೂ ಸಹ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಮಾನ್ಯುಯಲ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸುತ್ತಿರುವುದನ್ನು ಗಮನಿಸಿದ್ದು, ಈ ಪ್ರಕ್ರಿಯೆಯಲ್ಲಿನ ಸಂಭಾವ್ಯ ವಿಳಂಬವನ್ನು ತಪ್ಪಿಸಿ, ಮತ್ತಷ್ಟು ಪಾರದರ್ಶಕತೆಯನ್ನು ತರುವ ದೃಷ್ಟಿಯಿಂದ ಕಾಲಮಿತಿಯೊಳಗೆ ಭೂ ಪರಿವರ್ತನೆ ಆದೇಶ ನೀಡುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವುದು ಅವಶ್ಯವಾಗಿರುತ್ತದೆಂದು ಪ್ರಸ್ತಾಪಿಸಲಾಗಿದೆ.
ಭೂ ಪರಿವರ್ತನೆ ಪ್ರಕ್ರಿಯೆ ಸರಳೀಕರಣ ಕುರಿತಂತೆ ಮೊದಲ ಹಂತದಲ್ಲಿ ಅರ್ಜಿದಾರರು ನಾಡ ಕಚೇರಿ, ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಆನ್ ಲೈನ್ ಮೂಲಕ ಜಿಲ್ಲಾಧಿಕಾರಿಗಳಿಗೆ ಯಾವುದೇ ನಿರಾಕ್ಷೇಪಣಾ ಪತ್ರಗಳಿಲ್ಲದೆ ಅರ್ಜಿದಾರರು ಪ್ರಮಾಣ ಪತ್ರ ಮತ್ತು ಕನಿಷ್ಠ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ ಕೂಡಲೇ ಇತರೆ ಇಲಾಖೆಗಳು ಪ್ರಾಧಿಕಾರಗಳ ಅಭಿಪ್ರಾಯಕ್ಕಾಗಿ ಅರ್ಜಿಯನ್ನು ಆನ್ ಲೈನ್ ಮೂಲಕ ಏಕಕಾಲಕ್ಕೆ ಕಳುಹಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಏಕಕಾಲಕ್ಕೆ ಕಳುಹಿಸಿರುವುದರಿಂದ ಅರ್ಜಿದಾರರು ವಿವಿಧ ಇಲಾಖೆಗಳಿಗೆ ಮತ್ತು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. ಅರ್ಜಿದಾರರು ಸಲ್ಲಿಸಬೇಕಾದ ಕನಿಷ್ಠ ದಾಖಲೆಗಳನ್ನು ಅಂದರೆ (1) ಚಾಲ್ತಿ ವರ್ಷದ ಪಹಣಿ, (2) ಹಕ್ಕು ಬದಲಾವಣೆ ದಾಖಲಾತಿ ( ಮ್ಯೂಟೇಷನ್ ಪ್ರತಿ). (3) 11-ಇ ನಕ್ಷೆ( ಒಂದು ಸರ್ವೆ ನಂಬರಿನಲ್ಲಿ ಭಾಗಶಃ ಭೂ ಪರಿವರ್ತನೆಗೆ ವಿನಂತಿಸಿದ ಸಂದರ್ಭದಲ್ಲಿ ಮಾತ್ರ 11-ಇ ನಕ್ಷೆಯನ್ನು ಹಾಜರುಪಡಿಸಬೇಕು. (4) ಅಫಿಡವಿಟ್. ಇವುಗಳನ್ನು ಸಲ್ಲಿಸಬೇಕಾಗುತ್ತದೆ.
ಮುಂದುವರೆದು ಭೂ ಪರಿವರ್ತನೆಗೆ ಕೋರಿಕೆಗಳನ್ನು ಅಭಿಪ್ರಾಯಕ್ಕಾಗಿ ಆನ್‌ಲೈನ್ ಮುಖಾಂತರ ಇಲಾಖೆಗಳಿಗೆ ಪ್ರಾಧಿಕಾರಿಗಳಿಗೆ ಕಳುಹಿಸಿದೆ ನಂತರ ನಿಗದಿಪಡಿಸಿದ ಒಂದು ತಿಂಗಳ ಅವಧಿಯೊಳಗೆ ಅವರಿಂದ ವರದಿ ಬಾರದಿದ್ದ ಪಕ್ಷದಲ್ಲಿ ಭೂ ಪರಿವರ್ತನೆ ಕೋರಿಕೆಗೆ ಅದರಿಂದ ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ, ಕೋರಿಕೆಗಳ ಬಗ್ಗೆ ನಿಯಮಾನುಸಾರ ಮುಂದಿನ ಕ್ರಮವಹಿಸಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಅರ್ಜಿದಾರರು ಆನ್‌ಲೈನ್ ಮುಖಾಂತರ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ ತಕ್ಷಣ ಸಂಬಂಧಪಟ್ಟ ಇಲಾಖೆ/ಪ್ರಾಧಿಕಾರಗಳಿಗೆ ಅವರ ಅಭಿಪ್ರಾಯಕ್ಕಾಗಿ ಅರ್ಜಿಯನ್ನು ಏಕಕಾಲಕ್ಕೆ ಆನ್‌ಲೈನ್ ಮುಖಾಂತರ ಕಳುಹಿಸಿ, ನಿಗದಿತ ಕಾಲಮಿತಿಯೊಳಗೆ ಅವರಿಂದ ಆನ್‌ಲೈನ್ ಮುಖಾಂತರವೇ ಅಭಿಪ್ರಾಯ – ವರದಿ ಪಡೆದು ಭೂ ಪರಿವರ್ತನೆಗೆ ಕ್ರಮವಹಿಸುವುದರ ಮುಖಾಂತರ ಅರ್ಜಿದಾರರು ಪ್ರಸ್ತುತ ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಹಾಗೂ ಕಛೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸಲು ಭೂ ಪರಿವರ್ತನೆ ವಿಧಾನವನ್ನು ಸರಳೀಕರಿಸಲು ಪ್ರಸ್ತಾಪಿಸಲಾಗಿದೆ.
ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ, 19640 95(2)ರಡಿ ಕಲಿಸಲಾದ ಅವಕಾಶದಂತೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬದಲಾಯಿಸಲು ಇರುವ ಭೂಪರಿವರ್ತನಾ ವಿಧಾನವನ್ನು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಸರಳೀಕರಣಗೊಳಿಸಿ ಅನುಷ್ಠಾನಗೊಳಿಸಲು
ಸರ್ಕಾರವು ಆದೇಶಿಸಿದೆ.
(!) ಅರ್ಜದಾರರು ಭೂಪರಿವರ್ತನೆಗೆ ತಾಲ್ಲೂಕು ಕಛೇರಿ, ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ Online SOUDOST S Onlinese landrecords.kamataka.gov.in website Citizen login for Revenue Services link 395 Affidavit Based conversion module ನಲ್ಲಿ login ಆಗುವ ಮುಖಾಂತರ create account ನಲ್ಲಿ login ID ಅನ್ನು create ಮಾಡಿ ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸುವುದು.
(೨) ಅರ್ಜಿದಾರರು ಭೂಪರಿವರ್ತನೆಗೆ ಸಲ್ಲಿಸಬೇಕಾದ ದಾಖಲೆಗಳು (1) ಚಾಲ್ತಿ ವರ್ಷದ ಪಹಣಿ ಪತ್ರಿಕೆ (2) ಹಕ್ಕು ಬದಲಾವಣೆ ದಾಖಲಾತಿ (ಮ್ಯೂಟೇಷನ್ ಪ್ರತಿ) (3) 11-ಇ ನಕ್ಷೆ (ಒಂದು ಸರ್ವೆ ನಂಬರಿನಲ್ಲಿ ಭಾಗಶ: ಭೂ ಪರಿವರ್ತನೆಗೆ ವಿನಂತಿಸಿದ ಸಂದರ್ಭದಲ್ಲಿ ಮಾತ್ರ 11-ಇ ನಕ್ಷೆ) ಆಗಿರತಕ್ಕದ್ದು.
(3) ಅರ್ಜಿದಾರರಿಂದ ಭೂ ಪರಿವರ್ತನ ಕೋರಿಕೆಯೊಂದಿಗೆ ಅಫಿಡೆವಿಟ್ ನಮೂನೆ-ಎ ನಲ್ಲಿ (ಅನುಬಂಧ) ಪಡೆಯತಕ್ಕದ್ದು, ಈ ಅಫಿಡೆವಿಟ್ ರೂ.200/-ರ ಮೌಲ್ಯದಲ್ಲಿರಬೇಕು.
(4) 5.50. (1)0 000 landrecords.karnataka.gov.in – website e login ಆಗುವ ಮೂಖಾಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರು ಅಪ್‌ಲೋಡ್ ಮಾಡಿದ ನೋಟರಿಯವರಿಂದ ಪ್ರಮಾಣೀಕರಿಸಿದ ಅಫಿಡೆವಿಟ್‌ನ ಮೂಲ ಪ್ರತಿಯನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ 7 ದಿನಗಳೊಳಗಾಗಿ ಜಿಲ್ಲಾಧಿಕಾರಿ/ತಹಶೀಲ್ದಾರ್ ಕಚೇರಿಯ ಅರ್ಜಿ ಸ್ವೀಕೃತಿ ಕೇಂದ್ರದಲ್ಲಿ ಭೂ ಪರಿವರ್ತನೆ ಕೋರಿಕೆ ಸಂಖ್ಯೆಯ ಮಾಹಿತಿಯೊಂದಿಗೆ ಹಸ್ತಾಂತರಿಸಿ, ಅದಕ್ಕೆ ಸ್ವೀಕೃತಿ ಪಡೆದು, ಸ್ವೀಕೃತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು.
(5) ಕ್ರ.ಸಂ. (4) ರಲ್ಲಿ ತಿಳಿಸಿರುವಂತೆ ತಹಶೀಲ್ದಾರ್ ಕಚೇರಿಯ ಅರ್ಜಿ ಸ್ವೀಕೃತ ಕೇಂದ್ರದಲ್ಲಿ ಸ್ವೀಕೃತವಾದ ಅಫಿಡೆವಿಟ್‌ನ ಮೂಲ ಪ್ರತಿಯನ್ನು ಸ್ವೀಕರಿಸಿದ 48 ಗಂಟೆಯೊಳಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಹಸ್ತಾಂತರಿಸುವುದು.
(6) ಅರ್ಜಿದಾರರಿಂದ ಅನ್‌ಲೈನ್‌ನಲ್ಲಿ ಸ್ವೀಕೃತವಾದ ಭೂ ಪರಿವರ್ತನೆ ಕೋರಿಕೆ (ದಾಖಲೆಗಳು ಮತ್ತು ಅಫಿಡೆವಿಟ್ ನಮೂನೆ-ಎ ರೊಂದಿಗೆ) ಇಲಾಖೆ/ಪ್ರಾಧಿಕಾರಗಳಿಗೆ ಅವರ ಅಭಿಪ್ರಾಯಕ್ಕಾಗಿ ಏಕಕಾಲಕ್ಕೆ ತಪ್ಪದೇ ಆನ್‌ಲೈನ್‌ನಲ್ಲಿ ವರ್ಗಾಯಿಸತಕ್ಕದು.
(7) ವರ್ಗಾಯಿಸಲ್ಪಟ್ಟ ಇಲಾಖೆ/ಪ್ರಾಧಿಕಾರಗಳಿಂದ ಒಂದು ತಿಂಗಳ ಕಾಲಮಿತಿಯೊಳಗೆ ಅಭಿಪ್ರಾಯ/ವರದಿ ಬಾರದಿದ್ದಲ್ಲಿ ಭೂ ಪರಿವರ್ತನೆ ಕೋರಿಕೆ ಬಗ್ಗೆ ಅವರಿಂದ ಯಾವುದೇ ರೀತಿಯ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ, ಕೂಡಲೇ ಭೂ ಪರಿವರ್ತನೆಗೆ ಮುಂದಿನ ಕ್ರಮ ವಹಿಸತಕ್ಕದ್ದು. ನಿಗದಿತ ಅವಧಿಯೊಳಗೆ ಅಭಿಪ್ರಾಯ/ವರದಿ ನೀಡಲು ತಪ್ಪಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ.
(8) ಭೂ ಪರಿವರ್ತನೆಗಾಗಿ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಿದ ದಿನಾಂಕದಿಂದ ಮುಂದಿನ 60 (ಅರವತ್ತು) ದಿನಗಳೊಳಗಾಗಿ ಭೂ ಪರಿವರ್ತನಾ ಆದೇಶ / ಹಿಂಬರಹವನ್ನು ಹೊರಡಿಸತಕ್ಕದ್ದು ಎಂದಿದ್ದಾರೆ.

SHOCKING: ಬಿಹಾರದಲ್ಲಿ ತಾಯಿಯ ಎದೆಹಾಲು ಮಾದರಿಯಲ್ಲಿ ‘ಯುರೇನಿಯಂ’ ಅಂಶ ಪತ್ತೆ: ಅಧ್ಯಯನ
ALERT : ಪೋಷಕರೇ ಎಚ್ಚರ : ಅತಿಯಾದ `ಮೊಬೈಲ್’ ಬಳಕೆಯಿಂದ ದುರ್ಬಲವಾಗುತ್ತಿದೆ ‘ಮಕ್ಕಳ ಹೃದಯ’.!








