ಪಶ್ಚಿಮ ಬಂಗಾಳ: ರಾಜ್ಯ ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆಯಲ್ಲೇ ಪಾವಡವೊಂದು ನಡೆದಿದೆ. ಬರೋಬ್ಬರಿ 37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಂತ ಪುತ್ರನೊಬ್ಬ, ಕುಟುಂಬದೊಂದಿಗೆ ಸೇರಿದ್ದಾನೆ. ಅದು ಹೇಗೆ ಗೊತ್ತಾ? ಮುಂದೆ ಓದಿ.
ಪಶ್ಚಿಮ ಬಂಗಾಳದ ಪುರುಲಿಯಾದ ಗೊಬೊರಾಂಡಾ ಗ್ರಾಮದ ಚಕ್ರವರ್ತಿ ಕುಟುಂಬದ ಹಿರಿಯ ಪುತ್ರ ವಿವೇಕ್ ಚಕ್ರವರ್ತಿ ಎಂಬುವರು ಕಳೆದ 1988ರಲ್ಲಿ ಮನೆಯಿಂದ ಹೋದವರು ವಾಪಾಸ್ ಆಗಿರಲಿಲ್ಲ. ವಿವೇಕ್ ಚಕ್ರವರ್ತಿ ಪತ್ತೆಗಾಗಿ ಕುಟುಂಬಸ್ಥರು ಅಲೆದಾಡಿಗೂ ಎಲ್ಲಿಯೂ ಸಿಗದೇ ನಾಪತ್ತೆಯಾಗಿದ್ದರು. ಅವರ ಆಸೆಯನ್ನೇ ಕುಟುಂಬಸ್ಥರು ಕೈಬಿಟ್ಟಿದ್ದರು.
ವಿವೇಕ್ ಚಕ್ರವರ್ತಿ ಅವರ ಕಿರಿಯ ಸಹೋದರ ಪ್ರದೀಪ್ ಚಕ್ರವರ್ತಿ ತಮ್ಮ ಪುರುಲಿಯಾದ ಗೊಬೊರಾಂಡದ ಬೂತ್ ಮಟ್ಟದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಕೋಲ್ಕತ್ತಾದಲ್ಲಿ ವಾಸವಿದ್ದಂತ ವಿವೇಕ್ ಅವರ ಪುತ್ರನು ದಾಖಲೆಯ ಸಹಾಯಕ್ಕಾಗಿ ಬಿಎಲ್ಓ ಪ್ರದೀಪ್ ಚಕ್ರವರ್ತಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ. ಆತ ನೀಡಿದಂತ ಮಾಹಿತಿಯಿಂದ ಈತ ತನ್ನ ಅಣ್ಣನ ಮಗ ಎಂಬುದಾಗಿ ತಿಳಿದು ಪ್ರದೀಪ್ ಚಕ್ರವರ್ತಿ ಭಾವುಕರಾಗಿದ್ದಾರೆ. ಜೊತೆಗೆ 37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಂತ ತನ್ನ ಅಣ್ಣ ಇನ್ನೂ ಬದುಕಿರುವಂತ ವಿಷಯ ತಿಳಿದು ಸಂತಸಗೊಂಡಿದ್ದಾರೆ. ಈ ಮಾಹಿತಿಯನ್ನು ಕುಟುಂಬದ ಜೊತೆಗೂ ಹಂಚಿಕೊಂಡಿದ್ದಾರೆ.
ವಿವೇಕ್ ಚಕ್ರವರ್ತಿ ಪುತ್ರ ಕೇಳಿದಂತ ಮಾಹಿತಿ ನೀಡಿದಂತ ಪ್ರದೀಪ್ ಚಕ್ರವರ್ತಿಯು, ಆ ಬಳಿಕ ತನ್ನನ್ನು ಪರಿಚಯ ಮಾಡಿಕೊಂಡು, ನೀನು ತನ್ನ ಅಣ್ಣನ ಮಗ ಎಂಬುದಾಗಿ ಹೇಳುತ್ತಿದ್ದಂತೇ, ವಿವೇಕ್ ಚಕ್ರವರ್ತಿ ಪುತ್ರ ಶಾಕ್ ಆಗಿದ್ದಾನೆ. ಆ ಬಳಿಕ ವಿವೇಕ್ ಚಕ್ರವರ್ತಿ ಹಾಗೂ ಪ್ರದೀಪ್ ಚಕ್ರವರ್ತಿ ಇಬ್ಬರೂ ದೂರವಾಣಿ ಮೂಲಕವೇ ಮಾತನಾಡಿದ್ದಾರೆ.
ಈ ಮಾಹಿತಿಯನ್ನು ಪ್ರದೀಪ್ ಚಕ್ರವರ್ತಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಕಾರಣವಾದಂತ ಮತದಾರರ ಪಟ್ಟಿ ಪರಿಷ್ಕರಣೆಯನ್ನು ನಡೆಸುತ್ತಿರುವಂತ ಚುನಾವಣಾ ಆಯೋಗಕ್ಕೆ ಚಕ್ರವರ್ತಿ ಕುಟುಂಬ ಧನ್ಯವಾದವನ್ನು ತಿಳಿಸಿದೆ.
ರಾಜ್ಯ ಸರ್ಕಾರದಿಂದ ಕನ್ನಡದಲ್ಲಿ OTT ಪ್ರಾರಂಭ: ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ನಿರ್ಮಾಣ
ALERT : ಪೋಷಕರೇ ಎಚ್ಚರ : ಅತಿಯಾದ `ಮೊಬೈಲ್’ ಬಳಕೆಯಿಂದ ದುರ್ಬಲವಾಗುತ್ತಿದೆ ‘ಮಕ್ಕಳ ಹೃದಯ’.!








