ಶಿವಮೊಗ್ಗ: ಸುದ್ದಿ ಸಹ್ಯಾದ್ರಿ ಸಂಪಾದಕರಾದಂತ ರಾಘವೇಂದ್ರ ತಾಳಗುಪ್ಪ ಅವರಿಗೆ ಜನದನಿ ಸೇವಾ ಟ್ರಸ್ಟ್ ನಿಂದ ನೀಡಲಾಗುವಂತ ಜನದನಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯ ವಿಶ್ವ ಭಾರತಿ ಶಾಲಾ ಆವರಣದಲ್ಲಿ ಜನದನಿ ಸೇವಾ ಟ್ರಸ್ಟ್ ನಿಂದ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಅವರು, ಸುದ್ದಿ ಸಹ್ಯಾದ್ರಿ ಸಂಪಾದಕ ರಾಘವೇಂದ್ರ ತಾಳಗುಪ್ಪ ಸೇರಿದಂತೆ ವಿವಿಧ ಸಾಧಕನ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಈ ವೇಳೆ ಮಾತನಾಡಿದಂತ ಅವರು, ಕನ್ನಡ ನಾಡು, ನುಡಿ, ಭಾಷೆ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಕನ್ನಡ ಭಾಷೆ, ಸಾಹಿತ್ಯಕ್ಕೆ ತನ್ನದೇ ಆದ ವೈಶಿಷ್ಯತೆ ಇದೆ. ನಾಡನ್ನು ಕಟ್ಟಿ ಬೆಳೆಸುವಲ್ಲಿ ಹಲವು ವರ್ಷಗಳಿಂದ ಅನೇಕ ಮಹನೀಯರ ಹೋರಾಟವಿದೆ ಎಂದರು.
ಜನದನಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ವಿಜಯ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜನದನಿ ಸಂಸ್ಥೆಯು ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ತನ್ನದೇ ಆದಂತ ಜನಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದೀಗ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಂತವರಿಗೆ ಜನದನಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಹಿರಣ್ಯಪ್ಪ ಕುಂಬ್ರಿ, ಸೊರಬ ಆಸ್ಪತ್ರೆಯ ಡಾ.ಕೆ.ಪ್ರಭು ಸಾಹುಕಾರ್, ಡಾ.ಮಹೇಶ್.ಎಂ.ಕೆ, ಸಮಾಜ ಸೇವಕ ಶಂಕರ್ ಶೇಟ್, ಸಮಾಜ ಸೇವಕ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಧುಕೇಶ್ವರ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಹಂತ ಅನುಸರಿಸಿ ಬ್ಯಾಂಕ್ ಖಾತೆಯೊಂದಿಗೆ ಪ್ಯಾನ್ ನಂಬರ್ ಕುಳಿತಲ್ಲೇ ಲಿಂಕ್ ಮಾಡಿ | Link PAN With Bank Account
ALERT : ಪೋಷಕರೇ ಎಚ್ಚರ : ಅತಿಯಾದ `ಮೊಬೈಲ್’ ಬಳಕೆಯಿಂದ ದುರ್ಬಲವಾಗುತ್ತಿದೆ ‘ಮಕ್ಕಳ ಹೃದಯ’.!








