ಬೆಂಗಳೂರು: ಕಳೆದ ನವೆಂಬರ್ 2ರಂದು ನಡೆಸಲಾಗಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆ-ಸೆಟ್) ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಬಿಡುಗಡೆ ಮಾಡಿದೆ.
ಯುಜಿಸಿ ಮಾರ್ಗಸೂಚಿ ಹಾಗೂ ರಾಜ್ಯದ ಮೀಸಲಾತಿ ನೀತಿ ಅನುಸಾರವಾಗಿ ಫಲಿತಾಂಶ ನೀಡಲಾಗಿದೆ ಎಂದು ಕೆಇಎ ತಿಳಿಸಿದೆ. ಎಲ್ಲ ವಿಷಯಗಳನ್ನು ಸೇರಿ 7263 ಸ್ಲಾಟ್ ಗಳನ್ನು ಲಭ್ಯವಿದ್ದು, ಕಟ್-ಆಫ್ ನಿಯಮದ ಪ್ರಕಾರ ಇವುಗಳಿಗೆ 8,383 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದೆ.
ರಾಜ್ಯದ 11 ಜಿಲ್ಲಾ ಕೇಂದ್ರಗಳಲ್ಲಿ 33 ವಿಷಯಗಳಿಗಾಗಿ ಒಟ್ಟು 1,34,826 ಅಭ್ಯರ್ಥಿಗಳು ಆಫ್ ಲೈನ್‌ನಲ್ಲಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 1,21,052 ಅಭ್ಯರ್ಥಿಗಳು ಪತ್ರಿಕೆ-1 ಹಾಗೂ ಪರೀಕ್ಷೆ-2 ಬರೆದಿದ್ದರು. ಒಂದು ವಿಷಯದಲ್ಲಿ ಹಾಜರಾದ ಒಟ್ಟು ಅಭ್ಯರ್ಥಿಗಳ ಪೈಕಿ ಶೇ.6 ಅಭ್ಯರ್ಥಿಗಳನ್ನು ಸಹಾಯಕ ಪ್ರಾಧ್ಯಾಪಕರ ಅರ್ಹತೆಗಾಗಿ ಪರಿಗಣಿಸಲಾಗುತ್ತದೆ.
ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹರಾದವರ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪರೀಕ್ಷೆಗೆ ಹಾಜರಾದವರ ಪೈಕಿ ಶೇ 6ರಷ್ಟು ಅಭ್ಯರ್ಥಿಗಳನ್ನು ಕೆಸೆಟ್ ಗೆ ಅರ್ಹರನ್ನಾಗಿಸಲಾಗಿದೆ. ಯುಜಿಸಿ ಮತ್ತು ರಾಜ್ಯದ ಮೀಸಲಾತಿ ನಿಯಮಗಳ ಪ್ರಕಾರ ಮೆರಿಟ್ ಪಟ್ಟಿ ಪ್ರಕಟಿಸಲಾಗಿದೆ.
ವಿವಿಧ ವಿಷಯಗಳ ಅಂಕಗಳ ಕಟ್ ಅಫ್ ರಾಂಕ್ ಕೂಡ ಪ್ರಕಟಿಸಲಾಗಿದೆ. ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಅಂಕಗಳ ಕಟ್ ಅಫ್ ಮಾಹಿತಿ ಲಭ್ಯವಾಗಲಿದೆ.
kset_2025_cutoff_repokannada.pdf https://cetonline.karnataka.gov.in/keawebentry456/kset2025/kset_2025_cutoff_repokannada.pdf…









