ಶಿವಮೊಗ್ಗ: ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮಹೇಶ್ ಹೆಗಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇಂತಹ ಮಹೇಶ್ ಹೆಗಡೆ ಅವರನ್ನು ಸಾಗರ ತಾಲ್ಲೂಕು ಪತ್ರಿಕಾ ವಿತರಕರ ಸಂಘದಿಂದ ಸ್ಮಾನಿಸಿ, ಅಭಿನಂದಿಸಲಾಯಿತು.
ಈ ವೇಳೆ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಮೇಶ್ ಎನ್ ಮಾತನಾಡಿ ಪತ್ರಕರ್ತರು ಹಾಗೂ ವಿತರಕರು ಒಂದುಗೂಡಿ ಹೋಗುವ ಅವಶ್ಯಕತೆ ಇದೆ. ಪತ್ರಿಕೆಯನ್ನು ಮನೆಮನೆಗೆ ತಲುಪಿಸುವ ವಿತರಕರು ಪತ್ರಕರ್ತರ ವರದಿಯನ್ನು ಓದುಗರಿಗೆ ತಲುಪಿಸುತ್ತಾರೆ. ಹಾಗಾಗಿ ಪತ್ರಕರ್ತರು ಹಾಗೂ ವಿತರಕರು ಒಟ್ಟಾಗಿ ಹೋಗಬೇಕು ಎಂದರು.
ಪತ್ರಕರ್ತರಿಗೆ ಎಲ್ಲಾ ಸೌಲಭ್ಯ ನೀಡುವ ಸರ್ಕಾರ ವಿತರಕರಿಗೂ ಸೌಲಭ್ಯಗಳನ್ನು ನೀಡಬೇಕು. ಉಚಿತ ವಿಮಾಯೋಜನೆ ಹಾಗೂ ಉಚಿತ ಬಸ್ ಪಾಸ್ ಯೋಜನೆ ಈ ರೀತಿಯಲ್ಲಿ ವಿತರಕರಿಗೆ ಸೌಲಭ್ಯಗಳನ್ನು ನೀಡಿ ತಾರತಮ್ಯತೆಯನ್ನು ಹೋಗಲಾಡಿಸಬೇಕು ಎಂದು ಮನವಿ ಮಾಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಹೇಶ್ ಹೆಗಡೆ, ಪತ್ರಕರ್ತರು ಹಾಗೂ ವಿತರಕರು ಒಂದು ನಾಣ್ಯದ ಎರಡು ಮುಖಗಳು ಅಷ್ಟೆ. ಇಲ್ಲಿ ಭೇದಬಾವಗಳು ಯಾವತ್ತೂ ಯಾರೂ ಮಾಡಬಾರದು. ವಿತರಕರಿಗೆ ಸೌಲಭ್ಯ ನೀಡಬೇಕು ಎಂದು ಈ ಹಿಂದೆ ಪತ್ರಕರ್ತರ ಸಂಘ ಸರ್ಕಾರಕ್ಕೂ ಮನವಿ ಮಾಡಿದೆ. ಹಾಗೆ ಇಲ್ಲಿಯೂ ಕೂಡ ವಿತರಕರ ಜೋತೆ ಪತ್ರಕರ್ತರ ಸಂಘ ಸದಾ ಇರುತ್ತದೆ ಎಂದರು.
ಪತ್ರಕರ್ತರ ಸಂಘದವತಿಯಿಂದ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ವಿತರಕರನ್ನು ಪರಿಗಣಿಸಲಾಗುತ್ತದೆ. ಅಲ್ಕದೆ ಪತ್ರಕರ್ತರ ರಾಜ್ಯ ನಿರ್ದೇಶಕ ಶಿವಕುಮಾರ್ ಅವರು ವಿತರಕರನ್ನು ಕಾರ್ಮಿಕ ಇಲಾಕೆಯ ಒಳಗೆ ಸೇರಿಸಿ ಎಲ್ಲಾ ಸೌಲಭ್ಯ ನೀಡಬೇಕು ಎಂದು ಇತ್ತೀಚೆಗೆ ಮಾದ್ಯಮ ಅಕಾಡೆಮಿ ಅಧ್ಯಕ್ಷರಿಗೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿತರಕರ ಸಂಘದ ಕಾರ್ಯದರ್ಶಿ ಎನ್ ರಾಘವೇಂದ್ರ ಸ್ವಾಗತಿಸಿದರು. ಮಂಜುನಾಥ ಬಶೀರ್ ಅಭಿ, ವಿರೇಶ್, ಪವಿತ್ರ ಹೋಟೇಲ್ ಅರವಿಂದ, ಗಜೇಂದ್ರ ಕಿರಣ ಸುಹಾಸ ಇನ್ನಿತರರು ಹಾಜರಿದ್ದರು.
BREAKING: ಬೆಂಗಳೂರು ದರೋಡೆ ಕೇಸ್: ಕಿಂಗ್ ಪಿನ್ ಸೇರಿ ಎಲ್ಲಾ ಆರೋಪಿಗಳು ಅರೆಸ್ಟ್
‘ಖಾಸಗಿ ಆಸ್ಪತ್ರೆ’ಗಳು ಈ ಚಿಕಿತ್ಸೆಗೆ ಮುಂಗಡ ಹಣಕ್ಕೆ ಒತ್ತಾಯಿಸಿದ್ರೆ ‘ಲೈಸೆನ್ಸ್’ ರದ್ದು; ರಾಜ್ಯ ಸರ್ಕಾರ ಎಚ್ಚರಿಕೆ








