ಬೆಂಗಳೂರು : ಬೆಂಗಳೂರಲ್ಲಿ 7 ಕೋಟಿ 11 ಲಕ್ಷ್ಮ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಎಲ್ಲ ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು CMS ನಿಂದ 7 ಕೋಟಿ ದೋಚಿ ಪರಾರಿಯಾಗಿದ್ದ ಬಹುತೇಕ ಎಲ್ಲ ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಲ್ಲದೇ ಇದುವರೆಗೂ 6 ಕೋಟಿ 70 ಲಕ್ಷಕ್ಕೂ ಅಧಿಕ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಪೊಲೀಸರು ಮತ್ತೋರ್ವ ಸಿಎಂಎಸ್ ಸಿಬ್ಬಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ದಕ್ಷಿಣ ವಿಭಾಗದ ಪೊಲೀಸ್ರು ಸಿಎಂಎಸ್ ಸಿಬ್ಬಂದಿ ಗೋಪಿಯಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಇಎಂಎಸ್ ವಾಹನದ ಚಲನೆಯನ್ನು ಗೋಪಿ ನೋಡಿಕೊಳ್ಳುತ್ತಿದ್ದ. ಹಣ ತುಂಬಿದ ವ್ಯಾನ್ ಚಲನೆಯ ಒಲನೆ ಕುರಿತು ಗೋಪಿ ಮಾಹಿತಿ ನೀಡಿದ್ದ.
ಬೆಂಗಳೂರಿನ ನಿವಾಸಿಯಾದ ಆರೋಪಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದನು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿ ತಮಿಳುನಾಡಿನಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಬಂಧಿತನನ್ನ ಜೆ.ಎಕ್ಸ್ ವಿಯರ್ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ಸಿದ್ದಾಪುರ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಈತ ಕುಪ್ಪಂ ನಲ್ಲಿ ಇನೋವಾ ಕಾರು ನಿಲ್ಲಿಸಿ ಬಾಕ್ಸ್ ಒಡೆದು ಹಣದ ಸಮೇತ ವ್ಯಾಗನರ್ ಕಾರಿನಲ್ಲಿ ಪರಾರಿಯಾಗಿದ್ದನು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆಂಧ್ರಪ್ರದೇಶದಲ್ಲಿ 5 ಕೋಟಿ 30 ಲಕ್ಷ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಿಎಂಎಸ್ ನ ಮಾಜಿ ನೌಕರ ಝೆವಿಯರ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಅಣ್ಣಪ್ಪ ಸ್ನೇಹಿತರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.








